ಪೊಲೀಸರ ವಶದಲ್ಲಿದ್ದಾಗಲೇ ಅತ್ಯಾಚಾರ ಆರೋಪಿ ಸಾವು! - Mahanayaka

ಪೊಲೀಸರ ವಶದಲ್ಲಿದ್ದಾಗಲೇ ಅತ್ಯಾಚಾರ ಆರೋಪಿ ಸಾವು!

vijayapura police
29/08/2021

ವಿಜಯಪುರ: 13 ವರ್ಷ ವಯಸ್ಸಿನ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತನಾಗಿ ಪೊಲೀಸರ ವಶದಲ್ಲಿದ್ದ ಆರೋಪಿಯು ಸಾವಿಗೀಡಾಗಿದ್ದು, ಪೊಲೀಸರ ನಿರ್ಲಕ್ಷ್ಯದಿಂದಾಗಿ ಯುವಕ ಸತ್ತಿದ್ದಾನೆ ಎಂದು ಸಿಂದಗಿ ಪೊಲೀಸ್ ಠಾಣೆಗೆ ಯುವಕನ ಪಾಲಕರು ಮುತ್ತಿಗೆ ಹಾಕಿದ ಘಟನೆ ನಡೆದಿದೆ.

ತನ್ನ ಡಾಬಾದಲ್ಲಿ ತಂದೆಯೊಂದಿಗೆ ವಾಸವಿದ್ದ 13 ವರ್ಷ ವಯಸ್ಸಿನ ಬಾಲಕಿಯ ಮೇಲೆ ಡಾಬಾ ಮಾಲಿಕ ಅತ್ಯಾಚಾರ ಎಸಗಿದ್ದ ಎಂದು ಬಾಲಕಿಯ ತಂದೆಯು ಆರೋಪಿ ದೇವಿಂದ ಸಂಗೋಗಿ ಎಂಬಾತನ ವಿರುದ್ಧ ದೂರು ನೀಡಿದ್ದರು. ದೂರು ನೀಡುತ್ತಿದ್ದಂತೆಯೇ ಆರೋಪಿ ಪರಾರಿಯಾಗಿದ್ದ. ಇದರಿಂದಾಗಿ ಪೊಲೀಸರು ತೀವ್ರವಾಗಿ ಹುಡುಕಾಟ ನಡೆಸಿ ಕೊನೆಗೆ ಆರೋಪಿಯನ್ನು ಬಂಧಿಸಿದ್ದರು.

ಬಂಧನದ ಬಳಿಕ ನಸುಕಿನ ಜಾವ ಶೌಚಾಲಯಕ್ಕೆ ತೆರಳಿದ್ದ ಯುವಕ ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.  ಈ ದೃಶ್ಯವನ್ನು ಕಂಡ ತಕ್ಷಣವೇ ಪೊಲೀಸರು ಆರೋಪಿಯನ್ನು  ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಆದರೆ, ಆರೋಪಿಯು ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ ಎಂದು ವರದಿಯಾಗಿದೆ.

ಇನ್ನಷ್ಟು ಸುದ್ದಿಗಳು…

15 ನಿಮಿಷಗಳ ಕಾಲ ಲಿಫ್ಟ್ ನಲ್ಲಿ ಸಿಲುಕಿದ 1 ವರ್ಷ ವಯಸ್ಸಿನ ಮಗು

ಅಫ್ಘಾನಿಸ್ತಾನದ ಜನಪ್ರಿಯ ಹಾಡುಗಾರನನ್ನು ಹತ್ಯೆ ಮಾಡಿದ ತಾಲಿಬಾನ್ ಉಗ್ರರು

ನಾಯಿ ಮೂತ್ರ ಮಾಡಿದ ವಿಚಾರ: ಕಾರ್ ನ ಮಾಲಿಕನಿಗೆ ನಾಯಿಯ ಮಾಲಿಕರಿಂದ ಹಿಗ್ಗಾಮುಗ್ಗಾ ಥಳಿತ!

ಬುಡಕಟ್ಟು ಸಮುದಾಯದ ವ್ಯಕ್ತಿಯನ್ನು ಲಾರಿಗೆ ಕಟ್ಟಿ ಎಳೆದೊಯ್ದು ಭೀಕರ ಹತ್ಯೆ: ಪೊಲೀಸರ ಬಳಿ ಸುಳ್ಳು ಕಥೆ ಕಟ್ಟಿದ ಆರೋಪಿಗಳು

ಪ್ರೇಯಸಿಯ ತಂದೆಯನ್ನೇ ಕೊಂದಿದ್ದವ ಮೈಸೂರು ವಿದ್ಯಾರ್ಥಿನಿಯ ಅತ್ಯಾಚಾರ ಪ್ರಕರಣ ಆರೋಪಿಗಳಲ್ಲಿ ಓರ್ವ!

ಅಂತರ್ಜಾತಿ ವಿವಾಹವಾಗಿದ್ದಕ್ಕೆ ದಂಪತಿಗೆ ಸವರ್ಣಿಯರಿಂದ ಸಾಮಾಜಿಕ ಬಹಿಷ್ಕಾರ

ಇತ್ತೀಚಿನ ಸುದ್ದಿ