ಪೊಲೀಸರ ವೇಷದಲ್ಲಿ ಮನೆಗೆ ದಾಳಿ ನಡೆಸಿ ಚಿನ್ನಾಭರಣ ದೋಚಿದ ಕಳ್ಳರು! - Mahanayaka
6:09 PM Thursday 12 - December 2024

ಪೊಲೀಸರ ವೇಷದಲ್ಲಿ ಮನೆಗೆ ದಾಳಿ ನಡೆಸಿ ಚಿನ್ನಾಭರಣ ದೋಚಿದ ಕಳ್ಳರು!

crime
15/01/2022

ಬೆಂಗಳೂರು: ಪೊಲೀಸರ ಸೋಗಿನಲ್ಲಿ ಮನೆಗೆ ನುಗ್ಗಿದ ಕಳ್ಳರು  ಮನೆಯವರನ್ನು ಬೆದರಿಸಿ ಲಕ್ಷಾಂತರ ಮೌಲ್ಯದ ನಗದು ಹಾಗೂ ಚಿನ್ನಾಭರಣಗಳನ್ನು ದೋಚಿದ ಘಟನೆ ಮಹಾಲಕ್ಷ್ಮಿ ಲೇಔಟ್ ಬಳಿಯ ಭೋವಿಪಾಳ್ಯದ ಸಮಯನಾಯ್ಕ್ ಎಂಬವರ ಮನೆಯಲ್ಲಿ ನಡೆದಿದ್ದು, ಇದೀಗ ನಕಲಿ ಪೊಲೀಸರನ್ನು ಅಸಲಿ ಪೊಲೀಸರು ಬಂಧಿಸಿದ್ದಾರೆ.

ಡಿಸೆಂಬರ್ 31ರಂದು ಮಹಾಲಕ್ಷ್ಮಿ ಲೇಔಟ್ ಬಳಿಯ ಭೋವಿಪಾಳ್ಯದ ಸಮಯನಾಯ್ಕ್ ಎಂಬುವವರ ಮನೆಗೆ ಪೊಲೀಸರ ನೆಪದಲ್ಲಿ ನುಗ್ಗಿದ್ದ ಖದೀಮರ ಗ್ಯಾಂಗ್, ನಾವು ತಿಪಟೂರು ಪೊಲೀಸರು ನಿಮ್ಮ ಮನೆ ಸರ್ಚ್ ಮಾಡಬೇಕು ಎಂದಿದ್ದರು.

ಮನೆಯವರಿಗೆ ಗನ್ ಹಾಗೂ ಚಾಕು ತೋರಿಸಿ ಸುಮ್ಮನೆ ಕೂರುವಂತೆ ಎಚ್ಚರಿಕೆ ನೀಡಿದ್ದರು. ಮೊಬೈಲ್​ ಫೋನ್​ಗಳನ್ನು ಕಿತ್ತುಕೊಂಡು ಸುಮಾರು ಎರಡು ಗಂಟೆಗಳ ಕಾಲ ಸರ್ಚ್​ ಮಾಡಿ ಲಕ್ಷಾಂತರ ಮೌಲ್ಯದ ನಗದು ಹಾಗೂ ಚಿನ್ನಾಭರಣವನ್ನು ವಶಕ್ಕೆ ಪಡೆದುಕೊಂಡಿದ್ದು, ಬಳಿಕ ಸಮಯನಾಯ್ಕ್​ ಅವರ ಪುತ್ರ ಮಂಜುನಾಥ್​ ಅವರನ್ನು ಠಾಣೆಗೆ ಕರೆದುಕೊಂಡು ಹೋಗುವುದಾಗಿ ಕಾರಿನಲ್ಲಿ ಕೂರಿಸಿಕೊಂಡು ಮಹಾಲಕ್ಷ್ಮಿ ಲೇಔಟ್, ಬಿಇಎಲ್​​​ ಸರ್ಕಲ್, ಎಂ.ಎಸ್.ಪಾಳ್ಯ ಸುತ್ತಾಡಿಸಿದ್ದರು. ಈ ವೇಳೆ 20 ಲಕ್ಷ ಹಣ ಕೊಟ್ಟರೆ ಜಪ್ತಿ ಮಾಡಿದ ನಗದು ಒಡವೆ ಕೊಟ್ಟು ಬಿಟ್ಟು ಬಿಡುತ್ತೇವೆ,  ಕೇಸ್ ಹಾಕಲ್ಲ ಎಂದಿದ್ದರು ಎನ್ನಲಾಗಿದೆ.

ಈ ವೇಳೆ ಹಣ ಕೊಡಲು ಮಂಜುನಾಥ್ ನಿರಾಕರಿಸಿದಾಗ ಜಪ್ತಿ ಮಾಡುವ ನೆಪದಲ್ಲಿ 500 ಗ್ರಾಂ ಚಿನ್ನಾಭರಣ ಹಾಗೂ 19 ಲಕ್ಷ ನಗದು ಪಡೆದು ಠಾಣೆಗೆ ಕರೆದಾಗ ಬರಬೇಕು, ಹಣ ಒಡವೆ ಸ್ಟೇಷನ್​​ಗೆ ಬಂದು ಬಿಡಿಸಿಕೊಳ್ಳಿ ಎಂದು ಹೇಳಿ ಪರಾರಿಯಾಗಿದ್ದರು. ಮಾರನೇ ದಿನ ಸಮಯನಾಯ್ಕ್​ ಅವರ ಕುಟುಂಬ ಪೊಲೀಸ್ ಠಾಣೆಗೆ ತೆರಳಿ ವಿಚಾರಿಸಿದಾಗ ನಕಲಿ ಪೊಲೀಸರು ರಾಬರಿ ಮಾಡಿರುವುದು ಬೆಳಕಿಗೆ ಬಂದಿದೆ.

ದೂರು ದಾಖಲಾದ ತಕ್ಷಣವೇ ಮಹಾಲಕ್ಷ್ಮೀ ಲೇಔಟ್ ಠಾಣಾ ಪೊಲೀಸರು ಕ್ಷಿಪ್ರವಾಗಿ ತನಿಖೆ ನಡೆಸಿದ್ದು, ಇದೀಗ ಆರೋಪಿಗಳನ್ನು ಹೆಡೆಮುರಿಕಟ್ಟಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಫೆ. 1ರಂದು ಕೇಂದ್ರ ಬಜೆಟ್ ಮಂಡನೆ

ಬಿಕಾನೇರ್-ಗುವಾಹಟಿ ಎಕ್ಸ್ ಪ್ರೆಸ್ ರೈಲು ದುರಂತ: ಮೃತರ ಸಂಖ್ಯೆ 9ಕ್ಕೆ ಏರಿಕೆ; ರೈಲ್ವೆ ಸಚಿವರ ಭೇಟಿ, ತನಿಖೆಗೆ ಆದೇಶ

ಕ್ರೈಸ್ತ ಸನ್ಯಾಸಿನಿಯ ಅತ್ಯಾಚಾರ ಪ್ರಕರಣ: ಬಿಷಪ್ ಫ್ರಾಂಕೋ ಮುಳಯ್ಕಲ್ ತಪ್ಪಿತಸ್ಥನಲ್ಲ; ಕೋರ್ಟ್

ಬಾಗ್ದಾದ್: ಯುಎಸ್ ರಾಯಭಾರ ಕಚೇರಿಯ ಮೇಲೆ ರಾಕೆಟ್ ದಾಳಿ

ಟಿಪ್ಪರ್ ಲಾರಿ ಡಿಕ್ಕಿ ಹೊಡೆದು ರಿಯಾಲಿಟಿ ಶೋ ಸ್ಪರ್ಧಿ ಸಮನ್ವಿ ಸಾವು

ಇತ್ತೀಚಿನ ಸುದ್ದಿ