ಪೊಲೀಸರ ಎದುರೇ ಕ್ರೈಸ್ತ ಪಾದ್ರಿ ಸೇರಿದಂತೆ ಮೂವರಿಗೆ ಹಲ್ಲೆ ನಡೆಸಿದ ಬಲಪಂಥೀಯರು! - Mahanayaka
12:01 PM Sunday 15 - December 2024

ಪೊಲೀಸರ ಎದುರೇ ಕ್ರೈಸ್ತ ಪಾದ್ರಿ ಸೇರಿದಂತೆ ಮೂವರಿಗೆ ಹಲ್ಲೆ ನಡೆಸಿದ ಬಲಪಂಥೀಯರು!

raipur chhattisgarh news
06/09/2021

ರಾಯಪುರ: ಪೊಲೀಸ್ ಠಾಣೆಯ ಒಳಗೆಯೇ ಕ್ರೈಸ್ತ ಪಾದ್ರಿ ಹಾಗೂ ಅವರ ಜೊತೆಗಿದ್ದ ಕ್ರೈಸ್ತ ಸಂಘಟನೆಯ ಪದಾಧಿಕಾರಿಯೊಬ್ಬರಿಗೆ  ಹಲ್ಲೆ ನಡೆಸಿದ ಘಟನೆ ಛತ್ತೀಸ್ ಗಡದಲ್ಲಿ ನಡೆದಿದ್ದು, ಕ್ರೈಸ್ತ ಪಾದ್ರಿ ಮತಾಂತರ ಮಾಡುತ್ತಿದ್ದಾರೆ ಎಂದು ಆರೋಪಿಸಿ ಠಾಣೆಗೆ ನುಗ್ಗಿ ಬಲ ಪಂಥೀಯ ಸಂಘಟನೆಗಳು ದಾಂಧಲೆ ನಡೆಸಿವೆ.

ಕ್ರೈಸ್ತಪಾದ್ರಿ ಹರೀಶ್ ಸಾಹು ಹಾಗೂ  ಛತ್ತೀಸ್ ಗಢ ಕ್ರಿಶ್ಚಿಯನ್ ಫೋರಂನ ಪ್ರಧಾನ ಕಾರ್ಯದರ್ಶಿ ಅಂಕುಶ್ ಬರಿಯೇಕರ್ ಹಲ್ಲೆಗೊಳಗಾದವರಾಗಿದ್ದಾರೆ.  ಪ್ರಕಾಶ್ ಮಸೀಹ್ ಎಂಬವರ ಮೇಲೆ ಕೂಡ ಪುರಾನಿ ಬಸ್ತಿ ಠಾಣೆಯಲ್ಲಿ ಹಲ್ಲೆ ನಡೆದಿದೆ.

ಸಾಹು ಅವರು ಮತಾಂತರ ಮಾಡುತ್ತಿದ್ದಾರೆ ಎಂದು ಬಲಪಂಥೀಯ ಸಂಘಟನೆಗಳು ದೂರು ನೀಡಿದ್ದ ಹಿನ್ನೆಲೆಯಲ್ಲಿ ಅವರನ್ನು ಠಾಣೆಗೆ ಕರೆಸಲಾಗಿತ್ತು. ಈ ವೇಳೆ ಬರಿಯೇಕರ್ ಮತ್ತು ಮಸೀಹ್ ಅವರು ಕೂಡ ಸಾಹು ಅವರ ಜೊತೆಗೆ ಪೊಲೀಸ್ ಠಾಣೆಗೆ ಆಗಮಿಸಿದ್ದರು. ಈ ವೇಳೆ ಠಾಣೆಯಲ್ಲಿದ್ದ ಬಲಪಂಥೀಯ ಕಾರ್ಯಕರ್ತರು ಮೂವರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೊಲೀಸರ ಎದುರೇ ಹಲ್ಲೆ ನಡೆಸಿದ್ದಾರೆ ಎಂದು ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಬಲಪಂಥೀಯ ಸಂಘಟನೆಗಳು ಮತಾಂತರ ಮಾಡುವವರ ವಿರುದ್ಧ ಹೋರಾಡುವ ಬದಲು, ಜಾತಿ ಬೇಧ ಮಾಡುವವರ ವಿರುದ್ಧ ಹೋರಾಟ ಮಾಡಿದ್ದರೆ, ಯಾರು ಕೂಡ ಮತಾಂತರವೇ ಆಗುತ್ತಿರಲಿಲ್ಲ. ನಿಮ್ಮ ಮನೆಯವರನ್ನು ಗೌರವಿಸದೇ, ಪಕ್ಕದ ಮನೆಯವನನ್ನು ಎಲ್ಲರೂ ಪ್ರೀತಿಸುತ್ತಾರೆ ಎಂದು ಹೊಟ್ಟೆ ಕಿಚ್ಚು ಪಟ್ಟಂತೆ, ಬಲಪಂಥೀಯ ಸಂಘಟನೆಗಳು ವರ್ತಿಸುತ್ತಿರುವ ಬಗ್ಗೆ ಜನರು ಕೂಡ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಇನ್ನಷ್ಟು ಸುದ್ದಿಗಳು…

ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರ ಪತ್ನಿ, ಖ್ಯಾತ ಚಳುವಳಿಗಾರ್ತಿ ವಿಜಯ ಮಹೇಶ್ ನಿಧನ

8 ತಿಂಗಳ ಗರ್ಭಿಣಿ ಪೊಲೀಸ್ ಅಧಿಕಾರಿಯನ್ನು ಗುಂಡಿಟ್ಟುಕೊಂದ ತಾಲಿಬಾನಿಗರು!

ಮೂವರು ವಿದ್ಯಾರ್ಥಿನಿಯರಿಗೆ, ನೀವು ಧರಿಸಿರುವ ಉಡುಪು ಕಳಚಿ ಎಂದ 50 ವರ್ಷದ ಪ್ರಾಂಶುಪಾಲ!

ಸೆಪ್ಟಂಬರ್ 27ರಂದು ಭಾರತ್ ಬಂದ್: ಕೇಂದ್ರ ಸರ್ಕಾರದ ವಿರುದ್ಧ ತೀವ್ರತೆ ಪಡೆದ ರೈತರ ಹೋರಾಟ

ನನ್ನ ವಿರುದ್ಧದ ಆರೋಪ ಸಾಬೀತಾದರೆ, ಸಾರ್ವಜನಿಕವಾಗಿ ನೇಣಿಗೇರುತ್ತೇನೆ | ಮಮತಾ ಬ್ಯಾನರ್ಜಿ ಅಳಿಯ ಅಭಿಷೇಕ್ ಬ್ಯಾನರ್ಜಿ ಹೇಳಿಕೆ

ತಾಲಿಬಾನಿಗಳ ವಿರುದ್ಧ ಸಿಡಿದೆದ್ದ ಅಮ್ರುಲ್ಲಾ ಸಾಲೇಹ್ ಯಾರು? | ಜೈಲಿನಲ್ಲಿ ತಾಲಿಬಾನಿಗರ ದಂಗೆಯನ್ನು ಇವರು ಎದುರಿಸಿದ್ದು ಹೇಗೆ?

ಗಣೇಶೋತ್ಸವಕ್ಕೆ ಷರತ್ತು ಬದ್ಧ ಅವಕಾಶ | ಸಂಘಟಕರು ಈ ನಿಯಮಗಳನ್ನು ಪಾಲಿಸಲೇ ಬೇಕು!

ಶಾಸಕ ದಂಪತಿಗೆ ಹೂವಿನ ಮಳೆ ಸುರಿಸಿದ ಪೊಲೀಸ್ ಅಧಿಕಾರಿಗಳ ವಿರುದ್ಧ ನೋಟಿಸ್!

ಇತ್ತೀಚಿನ ಸುದ್ದಿ