ಪೊಲೀಸರ ಎಚ್ಚರಿಕೆ ಕಡೆಗಣಿಸಿದ ಚಾಲಕ: ನೀರಿನ ರಭಸಕ್ಕೆ ಕೊಚ್ಚಿ ಹೋದ ಬೊಲೆರೋ ವಾಹನ
![bolero](https://www.mahanayaka.in/wp-content/uploads/2022/08/bolero.jpg)
ಮಂಡ್ಯ: ಜಿಲ್ಲೆಯ ನಾಗಮಂಗಲ ತಾಲೂಕಿನ ಅಣೆಚನ್ನಾಪುರ ಗ್ರಾಮದ ಸಮೀಪ ನೀರಿನ ರಭಸಕ್ಕೆ ಬೊಲೇರೋ ವಾಹನ ಕೊಚ್ಚಿ ಹೋಗಿರುವ ಘಟನೆ ನಡೆದಿದೆ.
ಅಣೆಚನ್ನಾಪುರ-ಗುಳಕಾಯಿ ಹೊಸಹಳ್ಳಿ ನಡುವಿನ ಬ್ರಿಡ್ಜ್ ಮೇಲೆ ವಾಹನ ಸಂಚಾರ ನಿಷೇಧಿಸಿ, ಪೊಲೀಸ್ ಇಲಾಖೆ ಬ್ಯಾರಿಕೇಡ್ ಹಾಕಿತ್ತು. ಆದರೆ, ಪೊಲೀಸರ ಎಚ್ಚರಿಕೆಯನ್ನು ಕಡೆಗಣಿಸಿ ಚಾಲಕ ಬೊಲೆರೋ ವಾಹನವನ್ನು ಸೇತುವೆ ಮೇಲೆ ಚಲಾಯಿಸಿದ್ದಾನೆನ್ನಲಾಗಿದೆ.
ವೇಗವಾಗಿ ಹರಿಯುತ್ತಿದ್ದ ನೀರಿನಲ್ಲಿ ಮುಂದಕ್ಕೆ ಸಾಗಲಾಗದೇ ಬುಲೆರೋ ವಾಹನ ನೀರಿನಲ್ಲಿ ಕೊಚ್ಚಿಹೋಗಿದೆ. ಈ ವೇಳೆ ವಾಹನದಿಂದ ಹಾರಿ ಚಾಲಕ ಪ್ರಾಣ ಉಳಿಸಿಕೊಂಡಿದ್ದಾನೆ.
ಸೇತುವೆ ಮುಳುಗಿದ್ದರೆ, ವಾಹನ ಚಾಲಕರು ತಮ್ಮ ಅದೃಷ್ಟವನ್ನು ಪರೀಕ್ಷಿಸುವ ಕೆಲಸ ಮಾಡಬಾರದು. ಪೊಲೀಸರ ಸೂಚನೆಯನ್ನು ಮೀರಿ, ಈ ರೀತಿಯ ಕೃತ್ಯ ನಡೆಸುವುದು ಅಪಾಯಕಾರಿಯಾಗಿದೆ ಎನ್ನುವ ಆಕ್ರೋಶದ ಮಾತುಗಳು ಘಟನೆ ಬೆನ್ನಲ್ಲೇ ಕೇಳಿ ಬಂದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka