ಪೊಲೀಸ್ ಎಂದು ಹೇಳಿಕೊಂಡು ವರ್ತಕರಿಂದ ಹಣ ವಸೂಲಿ: ಟೀ ಮಾರಾಟಗಾರ ಸೆರೆ
ಬೆಂಗಳೂರು: ಪೊಲೀಸ್ ಎಂದು ಹೇಳಿಕೊಂಡು ವರ್ತಕರಿಂದ ಹಣವಸೂಲಿ ಮಾಡುತ್ತಿದ್ದ ಟೀ ಮಾರಾಟಗಾರನನ್ನು ಸಿಟಿ ಮಾರ್ಕೆಟ್ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಶ್ರೀರಾಮಪುರ ನಿವಾಸಿ ವಿಘ್ನೇಶ್(23) ಬಂಧಿತ ಆರೋಪಿ. ಹಲವು ವರ್ಷಗಳಿಂದ ಸಿಟಿ ಮಾರ್ಕೆಟ್, ಹಲಸೂರು ಗೇಟ್ ಹಾಗೂ ಚಿಕ್ಕಪೇಟೆ ಸೇರಿದಂತೆ ಹಲವೆಡೆ ಬೆಳಗ್ಗೆ ಅವಧಿಯಲ್ಲಿ ಟೀ ಮಾರಾಟ ಮಾಡುತ್ತಿದ್ದ. ಈ ವೇಳೆ ಹಲವು ವ್ಯಾಪಾರಿಗಳ ಹಾಗೂ ವರ್ತಕರ ಅಂಗಡಿಗಳನ್ನು ಗುರುತಿಸಿಕೊಂಡಿದ್ದ. ಮಧ್ಯಾಹ್ನ ವೇಳೆ ವ್ಯಾಪಾರಿಗಳ ಬಳಿ ತೆರಳಿ ತಾನು ಪೊಲೀಸ್ ಕಾನ್‌ಸ್ಟೇಬಲ್ ಎಂದು ಪರಿಚಯಿಸಿಕೊಂಡು ಅಕ್ರಮವಾಗಿ ತಂಬಾಕು ವ್ಯಾಪಾರ ಮಾಡುತ್ತಿದ್ದೀರಾ ಎಂದು ಹೆದರಿಸಿ ಹಣ ವಸೂಲಿ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಹೀಗೆ ಹಲವು ತಿಂಗಳಿಂದ ಪೊಲೀಸರ ಹೆಸರಿನಲ್ಲಿ ಅಕ್ರಮವಾಗಿ ಹಣ ಸಂಪಾದನೆ ಮಾಡುತ್ತಿದ್ದ ಎಂದು ಹೇಳಲಾಗಿದೆ. ಈ ಬಗ್ಗೆ ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಕೆಆರ್ ಮಾರ್ಕೆಟ್ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಮದುವೆಯಾಗುವುದಾಗಿ ನಂಬಿಸಿ ಮಹಿಳೆಗೆ ವಂಚನೆ: ಮುಖ್ಯಪೇದೆ ವಿರುದ್ಧ ಎಫ್ಐಆರ್ ದಾಖಲು
ಚೆರ್ನೋಬಿಲ್ ನ ಪರಮಾಣು ವಿದ್ಯುತ್ ಸ್ಥಾವರ ವಶಕ್ಕೆ ಪಡೆದ ರಷ್ಯಾ ಪಡೆಗಳು
ಯುವತಿಯನ್ನು ಪ್ರೀತಿಸಿದ್ದಕ್ಕೆ ಯುವಕನ ಕಣ್ಣನ್ನೇ ಕಿತ್ತ ದುಷ್ಕರ್ಮಿಗಳು
ಹಸುಗಳ ಮೇಲೆ ಲೈಂಗಿಕ ದೌರ್ಜನ್ಯ: ವ್ಯಕ್ತಿಯ ಬಂಧನ