ಪೊಲೀಸ್ ವಾಹನ ಕಳವು: ಆರೋಪಿಯ ಬಂಧನ
ಹುಬ್ಬಳ್ಳಿ: ವ್ಯಕ್ತಿಯೋರ್ವ ಪೊಲೀಸ್ ವಾಹನವನ್ನೇ ಕಳವು ಮಾಡಿರುವ ಘಟನೆ ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದಲ್ಲಿ ನಡೆದಿದೆ.
ನಾಗಪ್ಪ ಹಡಪದ ಪೊಲೀಸ್ ಜೀಪ್ ಕದ್ದ ಆರೋಪಿ. ಪ್ರತಿದಿನ ಪೊಲೀಸ್ ವಾಹನವನ್ನು ಕ್ಲೀನ್ ಮಾಡಲು ಠಾಣೆಗೆ ಬರುತ್ತಿದ್ದ ನಾಗಪ್ಪ, ಠಾಣೆಯಿಂದಲೇ ಜೀಪ್ ಕದ್ದುಕೊಂಡು ಪರಾರಿಯಾಗಿದ್ದು, ಕೂಡಲೇ ಬೆನ್ನಟ್ಟಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ನಾಗಪ್ಪ ಹಡಪದನಿಗೆ ಪೊಲೀಸ್ ವಾಹನವನ್ನ ಚಲಾಯಿಸುವುದು ಅಚ್ಚುಮೆಚ್ಚಂತೆ. ಅಷ್ಟೇ ಅಲ್ಲ, ಅದನ್ನ ಕದ್ದೆ ಚಲಾಯಿಸಬೇಕೆಂಬ ಕನಸು ಕಂಡಿದ್ದನಂತೆ. ಅದಕ್ಕಾಗಿ ಹಲವು ತಿಂಗಳುಗಳಿಂದ ಹೊಂಚು ಹಾಕಿದ್ದ ಆರೋಪಿಯು ಪೊಲೀಸ್ ಠಾಣೆಯ ಸಿಬ್ಬಂದಿ ವಿಶ್ವಾಸ ಗಳಿಸಿಕೊಂಡಿದ್ದ. ಕಳ್ಳತನ ಮಾಡುವ ಸಮಯದಲ್ಲಿ ಪಿಎಸ್ಐ ರಜೆಯಲ್ಲಿರುವುದನ್ನ ಖಾತ್ರಿ ಪಡಿಸಿಕೊಂಡು ಜೀಪ್ ಕಳವು ಮಾಡಿದ್ದಾನೆ ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಸಂವಿಧಾನ ಪುನಃ ಬರೆಯುವ ಅಗತ್ಯವಿದೆ: ತೆಲಂಗಾಣ ಸಿಎಂ ಕೆ.ಸಿ.ಆರ್. ವಿವಾದಾತ್ಮಕ ಹೇಳಿಕೆ
ಉ.ಪ್ರ. ವಿಧಾನಸಭಾ ಚುನಾವಣೆ: ಬಿಎಸ್ ಪಿಯಿಂದ ರವಿಪ್ರಕಾಶ್ ಮೌರ್ಯ ಅಯೋಧ್ಯೆ, ಅಮೇಥಿಯಿಂದ ರಾಗಿಣಿ ತಿವಾರಿ ಸ್ಪರ್ಧೆ
ಅಕ್ಕನಿಗೆ ಬೆಂಕಿ ಹಚ್ಚಿದ ತಂಗಿ: ಉರಿಯುತ್ತಿರುವ ಬೆಂಕಿಯ ಜೊತೆ ತಂಗಿಯನ್ನು ತಬ್ಬಿಕೊಂಡ ಅಕ್ಕ; ಇಬ್ಬರ ಸ್ಥಿತಿ ಗಂಭೀರ
ಬೆಡ್ ರೂಂನಿಂದ ಠಾಣೆಯ ಮೆಟ್ಟಿಲೇರಿದ ಐಎಎಸ್ ದಂಪತಿ ಜಗಳ
ಬಜೆಟ್ನಲ್ಲಿ ‘ಬಡವರು’ ಪದ ಉಲ್ಲೇಖ: ದೇಶದಲ್ಲಿ ಬಡವರಿದ್ದಾರೆಂಬುದನ್ನ ನೆನಪಿಸಿದ ಸಚಿವರಿಗೆ ಧನ್ಯ; ಚಿದಂಬರಂ