ರಾಜಕೀಯಕ್ಕೆ ಎಂಟ್ರಿ ಕೊಟ್ಟ ಖಾಕಿಗೆ ಪತ್ನಿ ಬಹಿರಂಗ ವಿರೋಧ: ಶಾಸಕ ಎನ್.ಮಹೇಶ್ ವಿರುದ್ಧ ಇನ್ಸ್ ಪೆಕ್ಟರ್ ಫ್ಯಾನ್ಸ್ ಕಿಡಿ
ಚಾಮರಾಜನಗರ: ಪೊಲೀಸ್ ಇನ್ಸ್ ಪೆಕ್ಟರ್ ಹುದ್ದೆಗೆ ರಾಜೀನಾಮೆ ಕೊಟ್ಟು ರಾಜಕೀಯ ಅಖಾಡಕ್ಕೆ ಧುಮುಕಿರುವ ಬಿ.ಪುಟ್ಟಸ್ವಾಮಿ ಇಂದು ಚಾಮರಾಜನಗರ ತಾಲೂಕಿನ ಸಂತೇಮರಹಳ್ಳಿಯಲ್ಲಿ ನಡೆಸಿದ ಅಭಿಮಾನಿಗಳ ಬೃಹತ್ ಸಮಾವೇಶದ ಬಳಿಕ ರಾಜಕೀಯ ಹೈಡ್ರಾಮವೇ ನಡೆದಿದೆ.
ಸಮಾವೇಶ ಮುಗಿಸಿ ಬಿ.ಪುಟ್ಟಸ್ವಾಮಿ ವಾಪಾಸ್ ಆಗುತ್ತಿದ್ದ ವೇಳೆ ಎಂಟ್ರಿ ಕೊಟ್ಟ ಪತ್ನಿ ಸುನೀತಾ ” ಏಕವಚನದಲ್ಲೇ ಪುಟ್ಟಸ್ವಾಮಿ ವಿರುದ್ಧ ಹರಿಹಾಯ್ದಿದ್ದು ರಾಜಕೀಯಕ್ಕೆ ಬರುವಿಕೆಯನ್ನು ವಿರೋಧಿಸಿ ಮಾತನಾಡಿದ್ದಾರೆ. ಸಮಾಧಾನದಿಂದಲೇ ಕೇಳಿಸಿಕೊಂಡ ಪುಟ್ಟಸ್ವಾಮಿ ಏನು ಮಾತನಾಡದೇ ತೆರಳಿದ್ದಾರೆ.
ಇದರಿಂದ ವ್ಯಗ್ರರಾದ ಬಿ.ಪುಟ್ಟಸ್ವಾಮಿ ಅಭಿಮಾನಿಗಳು ಪ್ರವಾಸಿ ಮಂದಿರದಲ್ಲಿದ್ದ ಶಾಸಕ ಎನ್. ಮಹೇಶ್ ಅವರ ಮಸಲತ್ತಿನಿಂದಲೇ ಇಷ್ಟೆಲ್ಲಾ ನಡೆದಿದೆ ಎಂದು ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw