75 ವರ್ಷಗಳಿಂದ ಎಲ್ಲಾ ರಾಜಕೀಯ ಪಕ್ಷಗಳು ಬಹುಜನರನ್ನು ವಂಚಿಸುತ್ತೀವೆ: ಮಾರಸಂದ್ರ ಮುನಿಯಪ್ಪ
ಕೋಲಾರ: ದೇಶ ಸ್ವಾತಂತ್ರ್ಯವಾಗಿ 75 ವರ್ಷಗಳು ಕಳೆದರೂ ದೇಶದ ಬಹುಜನರ ಅಭಿವೃದ್ಧಿ ಬಗ್ಗೆ ಯಾವ ಪಕ್ಷವೂ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಕಳೆದ 75 ವರ್ಷಗಳಿಂದ ಎಲ್ಲಾ ರಾಜಕೀಯ ಪಕ್ಷಗಳು ಬಹುಜನರನ್ನು ವಂಚಿಸುತ್ತೀವೆ ಎಂದು ಬಿಎಸ್ಪಿ ರಾಜ್ಯ ಸಂಯೋಜಕರಾದ ಮಾರಸಂದ್ರ ಮುನಿಯಪ್ಪ ಅವರು ಆಕ್ರೋಶ ವ್ಯಕ್ತಪಡಿಸಿದರು.
ನಗರದಲ್ಲಿ ಕೋಲಾರ ಜಿಲ್ಲಾ ಬಿಎಸ್ಪಿ ಘಟಕದ ಕಛೇರಿ ಉದ್ಘಾಟಿಸಿ ಅವರು ಮಾತನಾಡಿದ ಅವರು, ಬಹುಜನರ ಅಭಿವೃದ್ಧಿಗಾಗಿ ಹಾಗೂ ಅವರಿಗೆ ಸಾಮಾಜಿಕ ನ್ಯಾಯ ನೀಡಲು ಬಿಎಸ್ಪಿ ಪಕ್ಷ ಅಧಿಕಾರಕ್ಕೆ ಬರಬೇಕಿದೆ ಎಂದು ಕರೆ ನೀಡಿದರು.
ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 224 ಕ್ಷೇತ್ರಗಳಲ್ಲಿ BSP ಸ್ಪರ್ಧೆ ಮಾಡುತ್ತಿದ್ದು, ಕೋಲಾರದ 6 ವಿಧಾನಸಭಾ ಕ್ಷೇತ್ರಗಳಲ್ಲಿ ಬಹುಜನ ಸಮಾಜ ಪಕ್ಷ ಸ್ಪರ್ಧೆ ಮಾಡಲಿದೆ. 75 ವರ್ಷಗಳಿಂದ ಬಹುಜನರನ್ನು ವಂಚಿಸುತ್ತಿರುವ ಕಾಂಗ್ರೆಸ್, ಬಿಜೆಪಿ ಹಾಗೂ ಜಾತಿವಾದಿ JDS ಪಕ್ಷಗಳನ್ನು ತೊರೆದು ಜನ ಬಹುಜನ ಸಮಾಜ ಪಕ್ಷದೊಂದಿಗೆ ಸೇರಬೇಕು. ಸಂವಿಧಾನ ವನ್ನು ಕಾಪಾಡುವ ಮತ್ತು ಯಥಾವತ್ತಾಗಿ ಜಾರಿ ಮಾಡುವ ಏಕೈಕ ಪಕ್ಷ BSP ಎಂದು ಹೇಳಿದರು.
ಸಿದ್ದರಾಮಯ್ಯ ಹಿಂದುಳಿದವರ ಮತ ಪಡೆದು CM ಆಗಿ ನಮ್ಮನ್ನು ವಂಚಿಸಿದ್ದಾರೆ. ಕಾಂಗ್ರೆಸ್ 55 ವರ್ಷ ರಾಜಕೀಯ ಅಧಿಕಾರ ಹೊಂದಿ ನಮ್ಮನ್ನು ಸ್ಲಂಗಳಲ್ಲಿ ಇಟ್ಟಿದೆ. ಅನುದಾನಗಳು ಕೇವಲ ಪೇಪರ್ ಗೆ ಸೀಮಿತ ಮಾಡಿದ್ದಾರೆ. ಉಳಿದಂತೆ BJP ಮನುವಾದಿ ಪಕ್ಷ. ನಾವು ಬಂದಿರುವುದೆ ಸಂವಿಧಾನ ಬದಲಾಯಿಸಲು ಎಂದು ಹೇಳುತ್ತಿದ್ದಾರೆ. ಈ ಮನುವಾದಿ ಪಕ್ಷಗಳನ್ನು ಅಧಿಕಾರದಿಂದ ದೂರ ಇಡದೆ ಹೋದರೆ ಸಂವಿಧಾನದ ಆಶಯಗಳು ಜಾರಿ ಅಸಾಧ್ಯ ಎಂದು ಮಾರಸಂದ್ರ ಮುನಿಯಪ್ಪ ಹೇಳಿದರು.
ಕಾರ್ಯಕ್ರಮ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಬಿಎಸ್ಪಿ ರಾಜ್ಯ ಮುಖಂಡ ಗೋಪಿನಾಥ್ ಅವರು, ಕೋಲಾರ ಜಿಲ್ಲೆಯಲ್ಲಿ ಅತಿ ಹೆಚ್ಚು ಪರಿಶಿಷ್ಟ ವರ್ಗಗಳ ಮತ್ತು ಅತ್ಯಂತ ಹಿಂದುಳಿದ ವರ್ಗಗಳ ಮತಗಳಿವೆ ಆದರೆ ಬಹುಜನ ಸಮಾಜ ಪಕ್ಷ ಇಲ್ಲಿ ಅಧಿಕಾರಕ್ಕೆ ಬಂದಿಲ್ಲ. ಇಲ್ಲಿ ಪಕ್ಷದ ಅಭ್ಯರ್ಥಿಗಳಿಗೆ ಗೆಲ್ಲಿಸಲು ನಾವು ಒಂದಾಗಿ ಕೆಲಸ ಮಾಡಬೇಕಿದೆ. ಇಲ್ಲಿನ ಜನ ಸ್ವಾಭಿಮಾನವನ್ನು ಮೈಗೂಡಿಸಿಕೊಂಡು ಸಾಗಬೇಕು ಹೊರತು ಗುಲಾಮಗಿರಿಯಲ್ಲಿ ಬದುಕುವುದನ್ನು ಬಿಡಬೇಕು. ಚಳುವಳಿ ಮತ್ತು ಸ್ವಾಭಿಮಾನ ರಾಜಕಾರಣಕ್ಕೆ ಒತ್ತು ನೀಡಬೇಕು ಎಂದು ಹೇಳಿದರು.
ಈ ವೇಳೆ ಬಹುಜನ ನಾಯಕಿ ಹಾಗೂ ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಅವರು ಜನ್ಮದಿನಾಚಾರಣೆ ಆಚರಿಸಲಾಯಿತಿ. ರಾಜ್ಯ ಕಾರ್ಯದರ್ಶಿಗಳಾದ ನಾಗಪ್ಪ, ಕೋಲಾರ ಉಸ್ತುವಾರಿಗಳಾದ ಸುರೇಶ್, ಜಿಲ್ಲಾಧ್ಯಕ್ಷರಾದ ಸಿದ್ಧಾರ್ಥ್ ಆನಂದ ಮಾಲೂರು ಅಲ್ಲದೆ ಜಿಲ್ಲಾ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw