ಪೂಜೆ ಮಾಡುತ್ತೇನೆ ಎಂದು ಮಾಂಗಲ್ಯ ಸರ ಎಗರಿಸಿದ ಜ್ಯೋತಿಷಿ!
ಮಂಗಳೂರು: ಜ್ಯೋತಿಷಿಗಳು ಏನು ಹೇಳಿದರೂ ಅಮಾಯಕ ಜನರು ನಂಬುತ್ತಾರೆ. ಜನರ ಮೌಢ್ಯತೆ, ಮುಗ್ದತೆಯನ್ನು ಬಳಸಿಕೊಂಡು ವಂಚಿಸುವ ಜ್ಯೋತಿಷಿಗಳ ವಂಚನೆ ಪ್ರಕರಣಗಳ ಬಗ್ಗೆ ದಿನನಿತ್ಯ ಸುದ್ದಿಗಳು ಬರುತ್ತಿದ್ದರೂ ಜನರು ಜಾಗೃತರಾಗುತ್ತಿಲ್ಲ. ಮಂಗಳೂರಿನಲ್ಲಿ ಜ್ಯೋತಿಷಿಯೊಬ್ಬ ಮಹಿಳೆಯೊಬ್ಬರ ಮಾಂಗಲ್ಯ ಸರವನ್ನೇ ಎಗರಿಸಿದ ಘಟನೆ ನಡೆದಿದೆ
ಮನೆಯಲ್ಲಿ ಕಷ್ಟವಿದೆ ಏನಾದರೂ ಪರಿಹಾರ ಹೇಳಿ ಎಂದು ಮಹಿಳೆಯೊಬ್ಬರು ಅ.13ರಂದು ಕುಂಜತ್ ಬೈಲಿನಲ್ಲಿರುವ ಜ್ಯೋತಿಷಿ ವಿನೋದ್ ಪೂಜಾರಿ ಬಳಿಗೆ ಹೋಗಿದ್ದರು. ಈ ವೇಳೆ ಆರೋಪಿ ವಿನೋದ್ ಆ ದೋಷ, ಈ ದೋಷ ಎಂದು ಲೆಕ್ಕ ಹಾಕಿ, ದೋಷ ಕಳೆಯಲು ಚಿನ್ನಾಭರಣ ಬೇಕು ಎಂದು ಕೇಳಿದ್ದಾನೆನ್ನಲಾಗಿದೆ.
ಪೂಜೆಗಾಗಿ ಮಹಿಳೆ ಐದೂವರೆ ಪವನ್ ತೂಕದ ಚಿನ್ನದ ಕರಿಮಣಿ ಸರವನ್ನು ಜ್ಯೋತಿಷಿಯ ಕೈಗೆ ನೀಡಿದ್ದರು. 15 ದಿನ ಪೂಜೆ ಮಾಡಿ ಮಾಂಗಲ್ಯವನ್ನು ವಾಪಸ್ ಕೊಡುವುದಾಗಿ ಹೇಳಿದ್ದ ಜ್ಯೋತಿಷಿ, ಆನಂತರವೂ ನೀಡದೇ ವಂಚಿಸಿದ್ದು, ಇದೀಗ ತಲೆಮರೆಸಿಕೊಂಡಿದ್ದಾನೆ ಎಂದು ವಂಚನೆಗೊಳಗಾದ ಮಹಿಳೆ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಸಂಬಂಧ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ ಎಂದು ವರದಿಯಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ವಿದ್ಯಾರ್ಥಿ ನಾಯಕನ ಹತ್ಯೆ ಆರೋಪಿ ಪೊಲೀಸ್ ವಾಹನ ಡಿಕ್ಕಿ ಹೊಡೆದು ಸಾವು!
ದನ ಸಾಗಾಟದ ವಾಹನ ತಡೆಯಲು ಯತ್ನಿಸಿದ ಯುವಕರ ಮೇಲೆ ಹತ್ತಿದ ಪಿಕಪ್: ಇಬ್ಬರಿಗೆ ಗಂಭೀರ ಗಾಯ
ಯೋಗ ತರಬೇತಿಯ ವೇಳೆ 5 ಯುವತಿಯರಿಗೆ ಲೈಂಗಿಕ ಕಿರುಕುಳ: ತರಬೇತುದಾರನ ವಿರುದ್ಧ ದೂರು
ಹಂಸಲೇಖ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ
ದೇವೇಗೌಡರಿಗೆ ಅದ್ದೂರಿ ಸ್ವಾಗತ ನೀಡಿದ ಪ್ರಧಾನಿ ಮೋದಿ: ಫೋಟೋ ವೈರಲ್
ನವದಂಪತಿಗಳಿಂದ ಬಂಗಾಡಿ ಬೀಡಿಗೆ ವೀಳ್ಯದೆಲೆ ಸಮರ್ಪಣೆ: ತುಳುನಾಡಿನ ಅವಳಿ ವೀರರು ಕಾನದ—ಕಟದರು | ಸಂಚಿಕೆ: 08