ಪೂಜೆ ಮುಗಿಸಿ ಮನೆಗೆ ಹೋಗುತ್ತಿದ್ದ ಅರ್ಚಕನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ! - Mahanayaka
10:43 AM Wednesday 10 - September 2025

ಪೂಜೆ ಮುಗಿಸಿ ಮನೆಗೆ ಹೋಗುತ್ತಿದ್ದ ಅರ್ಚಕನನ್ನು ಅಟ್ಟಾಡಿಸಿ ಮಾರಕಾಸ್ತ್ರಗಳಿಂದ ಹಲ್ಲೆ!

bangalore
23/09/2021

ಬೆಂಗಳೂರು: ಪೂಜೆ ಮುಗಿಸಿ ನಗದು ಹಾಗೂ ಚಿನ್ನವನ್ನು ತೆಗೆದು ಕೊಂಡು ಬರುತ್ತಿದ್ದ ಅರ್ಚಕರೊಬ್ಬರ ಮೇಲೆ ದುಷ್ಕರ್ಮಿಗಳ ಗುಂಪೊಂದು ಮಾರಣಾಂತಿಕ ಹಲ್ಲೆ ನಡೆಸಿ, ಹಣ, ಚಿನ್ನ, ಮೊಬೈಲ್ ಕಿತ್ತು ಕೊಂಡ ಘಟನೆ ಹೆಣ್ಣೂರು ಅಂಡರ್ ಪಾಸ್ ಬಳಿಯಲ್ಲಿ ನಡೆದಿದೆ.


Provided by

ಸೆ.20ರಂದು ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಅರ್ಚಕ ಮಣಿಕಂಠ ಶರ್ಮಾ ಗಂಭೀರವಾಗಿ ಗಾಯಗೊಂಡಿರುವ ಅರ್ಚಕ ಎಂದು ಗುರುತಿಸಲಾಗಿದೆ. ಸದ್ಯ ಇವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ವರದಿಗಳ ಪ್ರಕಾರ, ಮಾಜಿ ಸಚಿವ ಆರ್. ಶಂಕರ್ ಅವರ ಮನೆಯಲ್ಲಿ ಸತ್ಯನಾರಾಯಣ ಪೂಜೆ ಮಾಡಿಸಿ ವಾಪಸ್ ಆಗುತ್ತಿದ್ದ ವೇಳೆ ರಾತ್ರಿ 10:30ರ ಸಮಯದಲ್ಲಿ ಹೆಣ್ಣೂರು ಅಂಡರ್ ಪಾಸ್ ಬಳಿ ಕಾರನ್ನು ಅಡ್ಡಗಟ್ಟಿದ ದುಷ್ಕರ್ಮಿಗಳ ಗುಂಪು ಅರ್ಚಕರ ಮೇಲೆ ಹಲ್ಲೆ ನಡೆಸಿದೆ. ಹಲ್ಲೆಯಿಂದ ತಪ್ಪಿಸಿಕೊಂಡು ಓಡಿದರೂ ಬಿಡದ ದುಷ್ಕರ್ಮಿಗಳು ಮಚ್ಚು, ಲಾಂಗ್ ಗಳಿಂದ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.

ಘಟನೆಯ ವೇಳೆ ಅರ್ಚಕರ ಬಳಿ ಇದ್ದ 60ಗ್ರಾಂ ಚಿನ್ನದ ಸರ, 20 ಸಾವಿರ ನಗದು, ಮೊಬೈಲ್ ಗಳನ್ನು ಕಿತ್ತುಕೊಂಡು ಪರಾರಿಯಾಗಿದ್ದಾರೆ. ಅರ್ಚಕರ ಮೇಲಿನ ಹಲ್ಲೆ ಖಂಡಿಸಿರುವ ಮಾಜಿ ಸಚಿವ ಆರ್. ಶಂಕರ್, ಆರೋಪಿಗಳನ್ನು ಪತ್ತೆ ಹಚ್ಚಿ ಬಂಧಿಸುವಂತೆ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on

ಇನ್ನಷ್ಟು ಸುದ್ದಿಗಳು…

“ನನ್ನ ಪಂಚೆ ಕಳಚ್ಕೊಂಡಿದೆ, ಈಶ್ವರಪ್ಪ…” | ಇಡೀ ಸದನವನ್ನು ನಗೆಗಡಲಲ್ಲಿ ತೇಲಿಸಿದ ಸಿದ್ದರಾಮಯ್ಯ

ಜಾತಿ ಪೀಡೆಗಳನ್ನು ಮಟ್ಟ ಹಾಕಲು ನಡೆಯಲಿದೆ ಗುಪ್ತ ಸಮೀಕ್ಷೆ: ಅಸ್ಪೃಶ್ಯತೆ ಆಚರಿಸಿದರೆ ಜೈಲೂಟ ಗ್ಯಾರೆಂಟಿ

ಗೋಬಿ ಮಂಚೂರಿ, ಎಗ್ ರೈಸ್ ಕೊಡಿಸುವ ನೆಪದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ!

ಪತ್ನಿ ಹಾಗೂ ಪುಟ್ಟ ಮಗಳನ್ನು ಕಟ್ಟಿಗೆಯಿಂದ ಹೊಡೆದು ಕೊಂದ ಪಾಪಿ!

ಸಾಲ ತೀರಿಸಲು ಸಿಎಂನ ಪ್ರತಿಮೆಯನ್ನೇ ಮಾರಾಟಕ್ಕಿಟ್ಟ ಅಭಿಮಾನಿ!

ಬಸ್ಸಿನಲ್ಲಿ ವಿದ್ಯಾರ್ಥಿನಿಗೆ ಮುತ್ತಿಟ್ಟವ ಈಗ ಪೊಲೀಸರ ವಶದಲ್ಲಿ: ಪೊಲೀಸರೆದು ಕಣ್ಣೀರಿಟ್ಟು ಆರೋಪಿ ಹೇಳಿದ್ದೇನು?

ಬೆಂಗಳೂರು: ಅಪಾರ್ಟ್​ಮೆಂಟ್ ಅಗ್ನಿ ಅವಘಡ ಪ್ರಕರಣಕ್ಕೆ ಹೊಸ ತಿರುವು: ಗ್ಯಾಸ್ ಸಿಲಿಂಡರ್ ಬ್ಲಾಸ್ಟ್ ಆಗಿಲ್ಲ!

 

ಇತ್ತೀಚಿನ ಸುದ್ದಿ