‘ಫ್ಯಾಶಿಸ್ಟರಿಂದ ಕರ್ನಾಟಕ ರಕ್ಷಿಸೋಣ’ | ಡಿಸೆಂಬರ್ 3ರಂದು ಬೃಹತ್ ಜಾಗೃತಿ ಅಭಿಯಾನ
ಮಂಗಳೂರು: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ‘ಫ್ಯಾಶಿಸ್ಟರಿಂದ ಕರ್ನಾಟಕ ರಕ್ಷಿಸೋಣ’ ಎಂಬ ಬೃಹತ್ ಜಾಗೃತಿ ಸಭೆಯು ಡಿಸೆಂಬರ್ 3ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕಲ್ಲಾಪುನಲ್ಲಿ ನಡೆಯಲಿದೆ.
ಇತ್ತೀಚಿನ ದಿನಗಳಲ್ಲಿ ಕರ್ನಾಟಕದಲ್ಲಿ ಫ್ಯಾಶಿಸ್ಟರ ಅಟ್ಟಹಾಸ ಮಿತಿಮೀರುತ್ತಿದ್ದು, ಕ್ಷುಲ್ಲಕ ವಿಚಾರಗಳನ್ನು ಮುಂದಿಟ್ಟುಕೊಂಡು ಅಮಾಯಕ ಯುವಕರಿಗೆ, ವಿದ್ಯಾರ್ಥಿಗಳಿಗೆ, ಮಹಿಳೆಯರಿಗೆ ಮಾರಣಾಂತಿಕ ಹಲ್ಲೆಯಂತ ಘಟನೆಗಳು ನಿರಂತರ ನಡೆಯುತ್ತಿದೆ. ಹಿಂದುತ್ವ ಕಾರ್ಯಕರ್ತರಿಗೆ, ಕಾಲೇಜಿನಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ತ್ರಿಶೂಲ ದೀಕ್ಷೆಯನ್ನು ನೀಡಿ ಯುವಕರ ಹಾಗೂ ವಿದ್ಯಾರ್ಥಿಗಳ ವಿರುದ್ಧ ಮಾರಣಾಂತಿಕ ಆಕ್ರಮಣ ಮೂಲಕ ಪ್ರಯೋಗಿಸಲಾಗುತ್ತಿದೆ ಪ್ರಚೋದನಾಕಾರಿ ಭಾಷಣದಿಂದ ಪ್ರೇರಿತವಾದ ಸಂಘಪರಿವಾರದ ಕಾರ್ಯಕರ್ತರು ಅಮಾಯಕರ ಮೇಲೆ ಅಲ್ಲಲ್ಲಿ ತ್ರಿಶೂಲದಲ್ಲಿ ಇರಿತದಂತಹ ದುಷ್ಕ್ರತ್ಯ ಪ್ರಕರಣಗಳು ನಡೆಯುತ್ತಿದೆ. ಇಂತಹ ಘಟನೆಗಳನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾವು “ಕರ್ನಾಟಕವನ್ನು ಫ್ಯಾಶಿಷ್ಠರಿಂದ ರಕ್ಷಿಸಿ” ಎಂಬ ಅಭಿಯಾನವನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದೆ.
ಈಗಾಗಲೇ ಈ ಸಂಬಂಧ ರಾಜ್ಯದ ಎಲ್ಲಾ ಕಡೆಗಳಲ್ಲಿ ಕಾರ್ನರ್ ಮೀಟ್, ಸಮುದಾಯದ ನಾಯಕರು, ಪ್ರಗತಿಪರ ಚಿಂತಕರು, ಸಾಮಾಜಿಕ ಹೋರಾಟಗಾರರೊಂದಿಗೆ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಾಗೂ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಕಾರ್ಯಕ್ರಮವನ್ನು ನಡೆಸಿ ಜಾಗೃತಿಯನ್ನು ಮೂಡಿಸಿದೆ. ಇದರ ಭಾಗವಾಗಿ ದಿನಾಂಕ ಡಿಸೆಂಬರ್ 3ರಂದು ಮಂಗಳೂರು ಸಮೀಪದ ಕಲ್ಲಾಪುವಿನ ಯುನಿಟಿ ಮೈದಾನದಲ್ಲಿ ಬೃಹತ್ ಸಾರ್ವಜನಿಕ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಸಂಘಪರಿವಾರದ ಫ್ಯಾಶಿಸ್ಟ್ ಸಿದ್ದಾಂತದ ವಿರುದ್ಧದ ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪಾಪ್ಯುಲರ್ ಫ್ರಂಟ್ ದ.ಕ.ಜಿಲ್ಲಾ ಕಾರ್ಯದರ್ಶಿ ಮೊಯಿದೀನ್ ಹಳೆಯಂಗಡಿ ವಿನಂತಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಗಲ್ಫ್ ನಲ್ಲಿ ಮೊದಲ ಒಮಿಕ್ರಾನ್ ಪ್ರಕರಣ ಪತ್ತೆ: ದೃಢಪಡಿಸಿದ ಸೌದಿ ಅರೇಬಿಯಾ
1ನೇ ತರಗತಿಯ ಬಾಲಕಿಗೆ ತಂದೆಯಿಂದಲೇ ಲೈಂಗಿಕ ಕಿರುಕುಳ!
‘ವಂದೇ ಇಂಡಿಯನ್ ಕಾನ್ಸ್ಟಿಟ್ಯೂಷನ್’: ಹಂಸಲೇಖ ಸಂಯೋಜನೆಯ ಸಂವಿಧಾನ ಗೀತೆ ವೈರಲ್
ಕ್ಲಾಸ್ ರೂಮ್ ಗೆ ನುಗ್ಗಿ ಗುಂಡಿನ ಮಳೆ ಸುರಿಸಿದ ಹೈಸ್ಕೂಲ್ ವಿದ್ಯಾರ್ಥಿ: 3 ಮಂದಿ ಸಾವು, 6 ಜನರಿಗೆ ಗಾಯ
ದನ ಸಾಗಾಟದ ವಾಹನ ಡಿಕ್ಕಿಯಾಗಿ ಯುವಕರಿಗೆ ಗಾಯ ಪ್ರಕರಣ: ಗಾಯಾಳುಗಳನ್ನು ಭೇಟಿಯಾದ ಸಚಿವ ಅರಗ ಜ್ಞಾನೇಂದ್ರ
ವೈದ್ಯನ ಟಿಕ್ ಟಾಕ್ ಹುಚ್ಚು | ತಾಳ್ಮೆ ಕಳೆದುಕೊಂಡ ರೋಗಿ; ಕೆಲಸ ಕಳೆದುಕೊಂಡ ವೈದ್ಯ