ಪೊರಕೆ ಹಿಡಿದು ರಸ್ತೆ ಗುಡಿಸಿ ಪ್ರತಿಭಟನೆ: ರಸ್ತೆ ಅವ್ಯವಸ್ಥೆ ವಿರುದ್ಧ ತೀವ್ರ ಆಕ್ರೋಶ
ಮಂಗಳೂರು: ಮಹಾನಗರ ಪಾಲಿಕೆಯ ಅವ್ಯವಸ್ಥೆ ವಿರುದ್ಧ ಸಾಮಾಜಿಕ ಹೋರಾಟಗಾರ ಜೆರಾರ್ಡ್ ಟವರ್ಸ್ ಹಾಗೂ ಸ್ಥಳೀಯರು ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದರು.
ರಸ್ತೆಯಲ್ಲಿದ್ದ ಜಲ್ಲಿಕಲ್ಲುಗಳನ್ನ ಗುಡಿಸುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮಂಗಳೂರಿನ ಕದ್ರಿಯ ಸರ್ಕಲ್ ನಲ್ಲಿ ಅಗೆದ ರಸ್ತೆ ದುರಸ್ತಿ ಮಾಡದೇ ಸ್ಥಳೀಯರಿಗೆ ಹಾಗೂ ಸಮೀಪ ರಿಕ್ಷಾ ಚಾಲಕರಿಗೆ ಸಮಸ್ಯೆ ಆಗುತ್ತಿತ್ತು. ಇದರಿಂದಾಗಿ ರಸ್ತೆಯಲ್ಲಿ ಹಾಕಿದ ಜಲ್ಲಿ ಕಲ್ಲುಗಳು ಎದ್ದು ಹೋಗಿದ್ದು, ಪಕ್ಕದಲ್ಲಿರುವ ರಿಕ್ಷಾಗಳಿಗೆ ಬಡಿದು, ಗಾಜುಗಳು ಡ್ಯಾಮೇಜ್ ಆಗಿದೆ. ಇದರಿಂದ ರೋಸಿ ಹೋದ ರಿಕ್ಷಾ ಹಾಗೂ ಟೆಂಪೋ ಚಾಲಕರು, ಸಾಮಾಜಿಕ ಹೋರಾಟಗಾರ ಜೆರಾರ್ಡ್ ಟವರ್ಸ್ ನೇತೃತ್ವದಲ್ಲಿ ರಸ್ತೆಯಲ್ಲಿದ್ದ ಜಲ್ಲಿ ಕಲ್ಲು ಗುಡಿಸುವ ಮೂಲಕ ಮಂಗಳೂರು ಮಹಾನಗರ ಪಾಲಿಕೆ ನಿರ್ಲಕ್ಷ್ಯಕ್ಕೆ ಸಾಂಕೇತಿಕ ಧರಣಿ ನಡೆಸಿದರು.
ಈ ವೇಳೆ ಅರುಣ್ ಡಿಸೋಜಾ, ಗಿರೀಶ್ ಕದ್ರಿ, ಜಗದೀಶ್, ನವೀನ್ ಡಿಸೋಜಾ ನೀರ್ ಮಾರ್ಗ, ಶಾನೋನ್ ಪಿಂಟೊ, ರೋನಿ, ಕೆ.ಎನ್.ಶೀನಿವಾಸ್, ಪರಿಸರದ ಹಾಗೂ ಆಮ್ ಆದ್ಮಿ ಪಾರ್ಟಿ, ಆಟೋ ರಿಕ್ಷಾ ಚಾಲಕರು, ಟೆಂಪೋ ಚಾಲಕರು ಪ್ರತಿಭಟನೆ ಗೆ ಸಾಥ್ ನೀಡಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka