ಖ್ಯಾತ ಪೋರ್ನ್ ಸ್ಟಾರ್ ಳ ಮೃತದೇಹ ಕಾರಿನಲ್ಲಿ ಪತ್ತೆ | ಆತ್ಮಹತ್ಯೆಯೋ?  ಕೊಲೆಯೋ? - Mahanayaka

ಖ್ಯಾತ ಪೋರ್ನ್ ಸ್ಟಾರ್ ಳ ಮೃತದೇಹ ಕಾರಿನಲ್ಲಿ ಪತ್ತೆ | ಆತ್ಮಹತ್ಯೆಯೋ?  ಕೊಲೆಯೋ?

dahlia sky found dead
17/07/2021

ವಾಷಿಂಗ್ಟನ್: ಅಮೆರಿಕದ ಪೋರ್ನ್ ತಾರೆ ಡೇಲಿಯಾ ಮೃತದೇಹ ಅವರ ಕಾರಿನಲ್ಲಿಯೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಮೇಲ್ನೋಟಕ್ಕೆ ಆತ್ಮಹತ್ಯೆ ಎಂದು ಕಂಡರೂ ಅವರ ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ತೀವ್ರ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿದ್ದ ನಟಿ ಡೇಲಿಯಾ ಮಾನಸಿಕ ಒತ್ತಡಕ್ಕೊಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಅಮೆರಿಕದ  ಮಾಧ್ಯಮವೊಂದು ವರದಿ ಮಾಡಿದ್ದು, ಲಾಸ್ ಏಂಜಲಿಸ್ ನ  ಸ್ಯಾನ್ ಫರ್ನಾಂಡೋ ಕಣಿವೆ ಪ್ರದೇಶದ ಡೆವನ್ ಶೈರ್ ಪ್ರದೇಶದಲ್ಲಿನ  ವಾಹನದಲ್ಲಿ  ಡೇಲಿಯಾ ಮೃತದೇಹ ಪತ್ತೆಯಾಗಿದೆ.

ಇನ್ನೂ ಈ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಎಲ್ ಎಪಿಡಿ ಡಿಟೆಕ್ಟಿವ್ ಪಿಟೆಖ್ ಸುದ್ದಿ ಸಂಸ್ಥೆ, ಇದೊಂದು ದಿಕ್ಕು ತಪ್ಪಿಸುವ ಪ್ರಯತ್ನವಾಗಿದ್ದು,  ಯಾವುದೇ ಸಾಕ್ಷ್ಯಾಧಾರಗಳು ಸಿಗದ ಹಿನ್ನೆಲೆಯಲ್ಲಿ ಈ ಸಾವನ್ನು ಆತ್ಮಹತ್ಯೆ ಪ್ರಕರಣದಡಿಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದೆ.

2010ರಲ್ಲಿ ಪೋರ್ನ್ ನಟಿಯಾಗಿ  ವೃತ್ತಿ ಆರಂಭಿಸಿದ್ದ  ಡೇಲಿಯಾಳನ್ನು ಬೈಲಿ ಬ್ಲೂ ಎಂಬ ಹೆಸರಿನಿಂದ ಪ್ರಖ್ಯಾತಿ ಹೊಂದಿದ್ದಳು.  ಈ ಹೆಸರಿಗೆ ಸಂಬಂಧಿಸಿದಂತೆ ಕಂಪೆನಿಯೊಂದು ಇದು ನಮ್ಮ ಟ್ರೇಡ್ ಮಾರ್ಕ್ ಎಂದು ಲೀಗಲ್ ನೋಟಿಸ್ ನೀಡಿದ ಬಳಿಕ ಅವರು,  ಡೇಲಿಯಾ ಎಂದು ತಮ್ಮ ಹೆಸರನ್ನು ಬದಲಿಸಿಕೊಂಡಿದ್ದರು ಎಂದು ತಿಳಿದು ಬಂದಿದೆ.

ಇನ್ನಷ್ಟು ಸುದ್ದಿಗಳು…

ದುಬೈನಿಂದ ಬಂದಿದ್ದ ಮಹಿಳೆ ಅಪಾರ್ಟ್ ನಲ್ಲಿ ಬರ್ಬರವಾಗಿ ಹತ್ಯೆ | ಬ್ಯಾಂಕ್ ನಿಂದ ಬಂದ ಮೇಲೆ ಪ್ಲಾಟ್ ಗೆ ನುಗ್ಗಿದ್ದು ಯಾರು?

ಬಾಲಕಿಯನ್ನು ರಕ್ಷಿಸಲು ಹೋಗಿ ಬಾವಿಗೆ ಬಿದ್ದ 30 ಮಂದಿ | ನಾಲ್ವರು ಸಾವು, ಹಲವರು ನಾಪತ್ತೆ

ವರ ಇಷ್ಟವಿಲ್ಲ ಎಂದಿದ್ದಕ್ಕೆ ತಂಗಿಯನ್ನು ಕೊಡಲಿಯಿಂದ ಕೊಚ್ಚಿಕೊಂದ ಅಣ್ಣ!

ಐಷಾರಾಮಿ ಕಾರಿನ ಮೇಲೆ ಕುಳಿತು ಫೋಟೋ ಶೂಟ್: ವಿಡಿಯೋ ವೈರಲ್ ಆದ ಬೆನ್ನಲ್ಲೇ ಸಂಕಷ್ಟಕ್ಕೀಡಾದ ವಧು!

 

ಇತ್ತೀಚಿನ ಸುದ್ದಿ