ಪೋಷಕರೇ ಎಚ್ಚರ! | ಜೋಕಾಲಿಯಲ್ಲಿ ಆಡುತ್ತಿದ್ದ ಬಾಲಕನ ಕುತ್ತಿಗೆಗೆ ಸುತ್ತಿದ ಹಗ್ಗ: ಬಾಲಕನ ದಾರುಣ ಸಾವು - Mahanayaka
12:54 AM Wednesday 11 - December 2024

ಪೋಷಕರೇ ಎಚ್ಚರ! | ಜೋಕಾಲಿಯಲ್ಲಿ ಆಡುತ್ತಿದ್ದ ಬಾಲಕನ ಕುತ್ತಿಗೆಗೆ ಸುತ್ತಿದ ಹಗ್ಗ: ಬಾಲಕನ ದಾರುಣ ಸಾವು

27/02/2021

ಅರೂರ್/ಕೋಲಂಚೇರಿ: ಮಕ್ಕಳ ವಿಚಾರದಲ್ಲಿ ಪೋಷಕರು ಎಷ್ಟು ಜಾಗೃತರಾಗಿದ್ದರೂ ಸಾಕಾಗುವುದಿಲ್ಲ ಎಂದು ಹೇಳುತ್ತಾರೆ. ಇಲ್ಲೊಂದು ಇಂತಹದ್ದೇ ಘಟನೆ ನಡೆದಿದ್ದು, ಆಟವಾಡುತ್ತಿದ್ದ ಬಾಲಕನ ದುರಂತ ಅಂತ್ಯವಾಗಿದೆ.

ಬಾಲಕ ತನ್ನಷ್ಟಕ್ಕೆ ತಾನು ಜೋಕಾಲಿಯಲ್ಲಿ ಆಡುತ್ತಿದ್ದ. ಮನೆಯವರು ಅವರ ಕೆಲಸದಲ್ಲಿ ನಿರತರಾಗಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ನಡೆಯಬಾರದ ಘಟನೆ ಅಲ್ಲಿ ನಡೆದು ಹೋಗಿದೆ.

ನಾಡುವತ್ನಗರ ಎನ್.ಐ. ಯುಪಿಎಸ್ ಶಾಲೆಯಲ್ಲಿ 6ನೇ ತರಗತಿಯಲ್ಲಿ ಕಲಿಯುತ್ತಿರುವ ಕವುಕುಟ್ಟು ವಿಪಿಂಡಾಸ್ ಮತ್ತು ಬೀನಾ ಅವರ ಹಿರಿಯ ಮಗ ವೈಷ್ಣವ್ ಅರುಕುಟ್ಟಿ ಆಟವಾಡುತ್ತಿದ್ದಾಗ  ಜೋಕಾಲಿಯ ಹಗ್ಗ ಕುತ್ತಿಗೆಗೆ ಸುತ್ತಿಕೊಂಡಿದ್ದು, ಪರಿಣಾಮವಾಗಿ ಬಾಲಕನಿಗೆ ಉಸಿರುಗಟ್ಟಿದೆ.

ಬುಧವಾರ ಸಂಜೆ ಬಾಲಕ ಆಟವಾಡುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ. ಸಂಜೆ ವೈಷ್ಣವ್ ಜೋಕಾಲಿಯಲ್ಲಿ ಆಡುತ್ತಾ, ಟಿವಿ ನೋಡುತ್ತಿದ್ದ. ಈ ವೇಳೆ ಅಚಾನಕಾಗಿ ಆತನ ಕುತ್ತಿಗೆಗೆ ಜೋಕಾಲಿಯ ಹಗ್ಗ ಬಿಗಿದುಕೊಂಡಿದೆ. ಈ ವೇಳೆ ಸ್ನೇಹಿತರು ಬಂದು ನೋಡಿದ್ದು, ಅವರು ಮನೆಯವರಿಗೆ ವಿಷಯ ತಿಳಿಸಿದ್ದಾರೆ.

ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ವೈಷ್ಣವ್ ನನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬಾಲಕ ಸಾವಿಗೀಡಾಗಿದ್ದಾನೆ.

ಇತ್ತೀಚಿನ ಸುದ್ದಿ