ಪೋಷಕರೇ ಎಚ್ಚರ!: ಚಾಕೊಲೇಟ್ ಕೊಡಿಸುವುದಾಗಿ ಕರೆದೊಯ್ದು ಮಗುವಿನ ಅಪಹರಣ!
ಉಡುಪಿ: ನಗರದ ಕರಾವಳಿ ಬೈಪಾಸ್ ಬಳಿಯಲ್ಲಿ ವಾಸವಾಗಿದ್ದ ಬಾಗಲಕೋಟೆ ಮೂಲದ ಕೂಲಿ ಕಾರ್ಮಿಕ ದಂಪತಿಯ ಮಗುವನ್ನು ವ್ಯಕ್ತಿಯೋರ್ವ ಅಪಹರಿಸಿ ಪರಾರಿಯಾಗಿರುವ ಘಟನೆ ನಡೆದಿದೆ.
ಮುಧೋಳ ತಾಲೂಕಿನ ಅರುಣ್ ಹಾಗೂ ಭಾರತಿ ದಂಪತಿಯ ಎರಡೂವರೆ ವರ್ಷ ವಯಸ್ಸಿನ ಮಗ ಶಿವರಾಜ್ ಅಪಹರಣಕ್ಕೊಳಗಾದ ಮಗುವಾಗಿದ್ದು, ದಂಪತಿಗೆ ಪರಿಚಿತನಾಗಿರುವ ಪರಶು ಎಂಬಾತ ಕೃತ್ಯವನ್ನು ನಡೆಸಿರುವ ಸಂಶಯವಿದೆ ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ ಎಂದು ವರದಿಯಾಗಿದೆ.
ಆರೋಪಿ ಪರಶು ಎಂಬಾತ ಕೆಲವು ದಿನಗಳ ಹಿಂದೆಯಷ್ಟೇ ದಂಪತಿಗೆ ಪರಿಚಯವಾಗಿದ್ದು, ಪ್ರತಿದಿನ ಮಗುವಿಗೆ ಚಾಕಲೇಟ್ ಕೊಡಿಸಿ, ಮಗುವಿನೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ ಎಂದು ಹೇಳಲಾಗಿದೆ. ಭಾನುವಾರ ಕೂಡ ಚಾಕಲೇಟ್ ಕೊಡಿಸುವುದಾಗಿ ಕರೆದೊಯ್ದಾತ ವಾಪಸ್ ಬಂದಿಲ್ಲ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಇನ್ನೂ ಆರೋಪಿ ಮಗುವನ್ನು ಎತ್ತಿಕೊಂಡು ಕರಾವಳಿ ಸರ್ಕಲ್ ಬಳಿಯಿಂದ ಕುಂದಾಪುರ ಮಾರ್ಗದ ಬಸ್ ಹತ್ತುತ್ತಿರುವ ದೃಶ್ಯ ಸಮೀಪದ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಘಟನೆ ಸಂಬಂಧ ಸಿಸಿ ಕ್ಯಾಮರ ದೃಶ್ಯಾವಳಿಗಳನ್ನು ಸಂಗ್ರಹಿಸಿರುವ ಪೊಲೀಸರು, ಬಸ್ ಸಿಬ್ಬಂದಿಯ ಹೇಳಿಕೆಗಳನ್ನು ಆಧಾರಿಸಿ ಉಡುಪಿಯ ಸಂತೆ ಕಟ್ಟೆ ಸೇರಿದಂತೆ ಹಲವು ಕಡೆಗಳಲ್ಲಿ ಆರೋಪಿಗೆ ಶೋಧ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.
ಇನ್ನಷ್ಟು ಸುದ್ದಿಗಳನ್ನು ಓದಿ:
ಜೊತೆ ಜೊತೆಯಲಿ ಸೀರಿಯಲ್ ನಿಂದ ಹೊರ ಬಂದ ಮೇಘ ಶೆಟ್ಟಿ | ಅನು ಪಾತ್ರ ಮುಂದೆ ಯಾರು ನಿರ್ವಹಿಸಲಿದ್ದಾರೆ?
ಅಮಾವಾಸ್ಯೆ ದಿನವೇ ಮಂತ್ರವಾದಿಗಳಿಗೆ ಬ್ಯಾಡ್ ಲಕ್: ಮಾಟ ಮಾಡುತ್ತಿದ್ದವರ ಆಟ ನಿಲ್ಲಿಸಿದ ಸಾರ್ವಜನಿಕರು
ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ | ಇಂಧನ ಬೆಲೆ 150ರ ಗಡಿದಾಟುತ್ತಾ?