ಲಂಡನ್ ನಲ್ಲಿ ಟ್ರಂಪ್ ಆಪ್ತ ಎಲಾನ್ ಮಸ್ಕ್ ವಿರುದ್ಧ ಪೋಸ್ಟರ್: ತೀವ್ರ ಅಪಹಾಸ್ಯ

ಟೆಸ್ಲಾದ ಸಿಇಒ ಮತ್ತು ಡೊನಾಲ್ಡ್ ಟ್ರಂಪ್ ಅವರ ಸಲಹೆಗಾರರಾಗಿರುವ ಎಲಾನ್ ಮಸ್ಕ್ ವಿರುದ್ಧ ಲಂಡನಿನ ಉದ್ದಕ್ಕೂ ಪೋಸ್ಟರ್ ಕಾಣಿಸಿದೆ. ಅವರನ್ನು ಟೀಕಿಸುವ ಮತ್ತು ಅಪಹಾಸ್ಯ ಮಾಡುವ ಪೋಸ್ಟರ್ ಗಳು ಇವುಗಳಲ್ಲಿವೆ. ಎಲ್ಲಾನ್ ಮಸ್ಕ್ ಅವರ ತೀವ್ರ ಬಲಪಂಥೀಯ ನಿಲುವು ಮತ್ತು ಟ್ರಂಪ್ ಅವರ ಪ್ರಮಾಣವಚನದ ಬಳಿಕ ನಾಝಿ ರೂಪದಲ್ಲಿ ಅವರು ಸೆಲ್ಯೂಟ್ ನೀಡಿರುವುದನ್ನು ಕೂಡ ಈ ಫ್ಲಕ್ಸ್ ನಲ್ಲಿ ಪ್ರಶ್ನೆಗೆ ಒಳಪಡಿಸಲಾಗಿದೆ.
ಬಸ್ ನಿಲ್ದಾಣ ಸಹಿತ ಲಂಡನ್ನಿನ ಹಲವು ಸಾರ್ವಜನಿಕ ಸ್ಥಳಗಳಲ್ಲಿ ಈ ಫ್ಲೆಕ್ಸ್ ಗಳನ್ನು ತೂಗು ಹಾಕಲಾಗಿದೆ. ಮಸ್ಕ್ ಒಡೆತನದ ಟೆಸ್ಲಾ ಮತ್ತು ಎಕ್ಸ್ ಅನ್ನು ಕೂಡ ಈ ಫ್ಲೆಕ್ಸ್ ನಲ್ಲಿ ಗುರಿ ಮಾಡಲಾಗಿದೆ.
ಅಮೆರಿಕದಲ್ಲಿ ತೀವ್ರ ಬಲಪಂಥೀಯ ವಿಚಾರಧಾರೆಯನ್ನು ಹರಡುತ್ತಿರುವ ಮಸ್ಕ್ ಇದೀಗ ಆ ವಿಚಾರಧಾರೆಯನ್ನು ಯುರೋಪಿಗೂ ಹಬ್ಬಿಸುತ್ತಿದ್ದಾರೆ. ಜಗತ್ತಿನಲ್ಲಿಯೇ ಅತ್ಯಂತ ಧನಿಕ ವ್ಯಕ್ತಿಯಾದ ಮಸ್ಕ್ ನಮ್ಮ ರಾಜಕೀಯದಲ್ಲಿ ವಿಷ ಬೆರೆಸಲು ಬಿಡಲ್ಲ ಎಂದು ಪೋಸ್ಟರ್ ಗಳಲ್ಲಿ ಹೇಳಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj