ಉದ್ಘಾಟನೆಯಾದ ಕೆಲವೇ ದಿನಗಳಲ್ಲಿ ಭೋಪಾಲ್ ಮೇಲ್ಸೇತುವೆಯಲ್ಲಿ ಗುಂಡಿಗಳು ಪತ್ತೆ: ಇಬ್ಬರು ಅಧಿಕಾರಿಗಳ ಅಮಾನತು

ಉದ್ಘಾಟನೆಯಾದ ಕೇವಲ ಹತ್ತು ದಿನಗಳಲ್ಲಿ ಭೋಪಾಲ್ ನ ಅಂಬೇಡ್ಕರ್ ಮೇಲ್ಸೇತುವೆಯಲ್ಲಿ ಗುಂಡಿಗಳು ಕಾಣಿಸಿಕೊಂಡಿದೆ. ಹೀಗಾಗಿ ನಿರ್ಮಾಣದ ಗುಣಮಟ್ಟದ ಬಗ್ಗೆ ಕಳವಳ ವ್ಯಕ್ತವಾಗಿದೆ. ಲೋಕೋಪಯೋಗಿ ಇಲಾಖೆಯ (ಪಿಡಬ್ಲ್ಯುಡಿ) ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಶನಿವಾರ ಮೇಲ್ಸೇತುವೆಯನ್ನು ಪರಿಶೀಲಿಸಿದರು ಮತ್ತು ಇಬ್ಬರು ಅಧಿಕಾರಿಗಳನ್ನು ಅಮಾನತುಗೊಳಿಸಿದರು. ಮುಖ್ಯ ಎಂಜಿನಿಯರ್ (ಸೇತುವೆಗಳು) ಮತ್ತು ಕಾರ್ಯನಿರ್ವಾಹಕ ಎಂಜಿನಿಯರ್ ಗೆ ನೋಟಿಸ್ ನೀಡಲಾಗಿದೆ.
ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಜನವರಿ ೨೩ ರಂದು ಫ್ಲೈಓವರ್ ಅನ್ನು ಉದ್ಘಾಟಿಸಿದ್ದರು. ಶೀಘ್ರದಲ್ಲೇ, ಅದರ ವಿನ್ಯಾಸ ಮತ್ತು ಗುಣಮಟ್ಟದ ಬಗ್ಗೆ ಕಳವಳಗಳು ಎದ್ದವು. ಕಳೆದ ಎರಡು ದಿನಗಳಲ್ಲಿ, ಬೋರ್ಡ್ ಆಫೀಸ್ ಸ್ಕ್ವೇರ್ ಮೇಲಿನ ವಿಭಾಗದಲ್ಲಿ ಗುಂಡಿಗಳು ಕಾಣಿಸಿಕೊಂಡಿವೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೀರಜ್ ಮಾಂಡ್ಲೋಯ್ ಅವರು ಸೇತುವೆಯನ್ನು ಪರಿಶೀಲಿಸಿದರು. ಅಪಘಾತ ತಡೆಗೋಡೆಗಳು ಮತ್ತು ಮುಖ್ಯ ಕ್ಯಾರೇಜ್ ವೇ ನಡುವಿನ 18 ಇಂಚು ಅಗಲದ ಪಟ್ಟಿಯಲ್ಲಿ ದೋಷಗಳನ್ನು ಪರಿಶೀಲನಾ ತಂಡ ಕಂಡುಕೊಂಡಿದೆ. ಈ ಪಟ್ಟಿಯನ್ನು ಮುಖ್ಯ ಸ್ಲ್ಯಾಬ್ ಗೆ ಸರಿಯಾಗಿ ಸಂಪರ್ಕಿಸಲಾಗಿಲ್ಲ. ಹೀಗಾಗಿ ಗುಂಡಿಗಳು ಕಾಣಿಸಿಕೊಂಡಿವೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj