ಪ್ರಚೋದನಾತ್ಮಕ ಅವಹೇಳನಾಕಾರಿ ಭಾಷಣ:  ಚೈತ್ರಾ ಕುಂದಾಪುರ ವಿರುದ್ಧ ದೂರು ದಾಖಲು - Mahanayaka
1:20 AM Monday 16 - September 2024

ಪ್ರಚೋದನಾತ್ಮಕ ಅವಹೇಳನಾಕಾರಿ ಭಾಷಣ:  ಚೈತ್ರಾ ಕುಂದಾಪುರ ವಿರುದ್ಧ ದೂರು ದಾಖಲು

chaithra kundapura
07/10/2021

ಮಂಗಳೂರು:  ಬಜರಂಗದಳ ಆಯೋಜಿಸಿದ್ದ ಜನಜಾಗೃತಿ ಕಾರ್ಯಕ್ರಮ ಎಂಬ ಹೆಸರಿನ ಕಾರ್ಯಕ್ರಮದಲ್ಲಿ ಚೈತ್ರಾ ಕುಂದಾಪುರ ಎಂಬ ಭಾಷಣಗಾರ್ತಿ ಪ್ರಚೋದನಾಕಾರಿ ಭಾಷಣ ಮಾಡಿರುವುದಲ್ಲದೇ ಕೋಟಿ ಚೆನ್ನಯರು ತಲವಾರು ಬಳಸುತ್ತಿದ್ದರು ಎಂದು ಅವಹೇಳನಾಕಾರಿಯಾಗಿ ವರ್ಣನೆ ಮಾಡಿರುವುದರ ವಿರುದ್ಧ ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ಅ.5ರಂದು ಸುರತ್ಕಲ್ ನಲ್ಲಿ ಬಜರಂಗದಳ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಸ್ಲಿಮ್ ಸಮುದಾಯವನ್ನು ಟಾರ್ಗೆಟ್ ಮಾಡಿ ಮಾತನಾಡಿದ ಚೈತ್ರಾ ಕುಂದಾಪುರ, ಮುಸ್ಲಿಮ್ ಸಮುದಾಯವನ್ನು ಅವಹೇಳನಾಕಾರಿಯಾಗಿ ಮಾತನಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದಲ್ಲದೇ ಕರಾವಳಿಯ ಹಿರಿಯ ರಾಜಕಾರಣಿ, ಮಾಜಿ ಸಚಿವರೊಬ್ಬರ ಹೆಣ್ಣು ಮಗಳ ಬಗ್ಗೆಯೂ ಕೆಟ್ಟದಾಗಿ ಹೇಳಿಕೆ ನೀಡಿದ್ದರು ಎಂದು ಹೇಳಲಾಗಿದೆ. ಜೊತೆಗೆ ಬೀದಿ ರೌಡಿಗಳು ಹಿಡಿಯುವ ತಳವಾರ್ ನ್ನು ತುಳುನಾಡಿನ ಆರಾಧ್ಯ ದೈವಗಳಾದ ಕೋಟಿ ಚೆನ್ನಯರು ಹಿಡಿದಿದ್ದಾರೆ ಎಂಬಂತೆ ಹೇಳಿರುವುದರ ವಿರುದ್ಧ ಬಂಟ್ವಾಳದ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರು ಸುರತ್ಕಲ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಎಲ್ಲಿಂದಲೋ ಭಾಷಣ ಮಾಡಲು ಮಂಗಳೂರಿಗೆ ಬಂದು ಇಲ್ಲಿನ ಸೌಹಾರ್ದತೆ ಕೆಡಿಸುವ ಉದ್ದೇಶವೇನು? ಎನ್ನುವ  ಪ್ರಶ್ನೆಗಳು ಇದೀಗ ಈ ಘಟನೆಯ ಬೆನ್ನಲ್ಲೇ ಮಂಗಳೂರಿನಲ್ಲಿ ಕೇಳಿ ಬಂದಿದೆ. ಮುಂದಿನ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಕರಾವಳಿಯಲ್ಲಿ ಕೋಮು ಭಾವನೆಗಳನ್ನು ಕೆರಳಿಸುವ ಕೆಲಸ ಆರಂಭವಾಗಿದೆ. ಚೈತ್ರಾ ಕುಂದಾಪುರಳಂತಹವರು ಇದಕ್ಕೆ ಕಾಲಾಳುಗಳಾಗಿದ್ದಾರೆ ಎನ್ನುವ ಆಕ್ರೋಶಗಳು ಕರಾವಳಿಯಲ್ಲಿ ಕೇಳಿ ಬಂದಿದೆ.


Provided by

ಇನ್ನೂ ಚೈತ್ರಾ ಕುಂದಾಪುರ ವಿರುದ್ಧ ದೂರು ದಾಖಲಿಸಿರುವ ಬೊಂಡಾಲ ಚಿತ್ತರಂಜನ್ ಶೆಟ್ಟಿ ಅವರು ಮಂಗಳೂರಿನ ಸ್ಥಳೀಯ ಸುದ್ದಿವಾಹಿನಿಯೊಂದಕ್ಕೆ ಈ ಸಂಬಂಧ ಹೇಳಿಕೆ ನೀಡಿದ್ದು, ತುಳುನಾಡಿನ ದೈವಗಳ ಬಗ್ಗೆ ಮಾತನಾಡುವ ಅವಶ್ಯಕತೆ ಇರಲಿಲ್ಲ. ಹಾಗೆಯೇ ಬಂಟ ಸಮುದಾಯದ ಮಾಜಿ ಸಚಿವ ಅವರ ಮಗಳ ಬಗ್ಗೆಯೂ ಅವಹೇಳನಾಕಾರಿಯಾಗಿ ಆ ಹುಡುಗಿಯಿಂದ ಮಾತನಾಡಿಸಿದ್ದಾರೆ. ದಲಿತ ಯುವಕರು, ಶೂದ್ರ ಜನಾಂಗಗಳು ಇಂತಹದ್ದಕ್ಕೆ ಬಲಿಯಾಗಬಾರದು. ಇಂತಹವರ ಮಾತು ಕೇಳಿ ಕೊಂಡು ನಾಳೆ ಏನಾದರೂ ಅನಾಹುತಗಳು ಸಂಭವಿಸಿದರೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದ್ದಾರೆ.

ಒಂದು ಹೆಣ್ಣು ಮಗಳಾಗಿದ್ದುಕೊಂಡು ಇನ್ನೊಂದು ಹೆಣ್ಣು ಮಗಳ ಚಾರಿತ್ರ್ಯ ಹರಣ ಮಾಡುವುದು ಸರಿಯಾ? ಎಲ್ಲ ಧರ್ಮದ ಹೆಣ್ಣು ಮಕ್ಕಳನ್ನೂ ನಾವು ಪೂಜ್ಯನೀಯ ಸ್ಥಾನದಲ್ಲಿ ನೋಡುತ್ತೇವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾವು ಎಷ್ಟು ಸಾಮರಸ್ಯದಿಂದ ಇದ್ದೇವೆ. ಇದನ್ನು ಕೆಡಿಸುತ್ತಿರುವ ಕೆಲಸ ಯಾಕೆ ಮಾಡುತ್ತಿದ್ದಾರೆ ಗೊತ್ತಿಲ್ಲ ಹಾಗಾಗಿ ನಾನು ಕೇಸ್ ದಾಖಲಿಸಿದ್ದೇನೆ ಎಂದು ಅವರು ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9

ಇನ್ನಷ್ಟು ಸುದ್ದಿಗಳು…

ಬಡ ಕುಟುಂಬದ ಪುಟಾಣಿ ರಿಷಿಕಾಳ ಚಿಕಿತ್ಸೆಗೆ ನೀವು ನೆರವಾಗುವಿರಾ?

ಉಪ ಚುನಾವಣೆ: ಹಾನಗಲ್, ಸಿಂದಗಿ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಘೋಷಿಸಿದ ಬಿಜೆಪಿ

ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಯಬಿಟ್ಟ ಕಿಡಿಗೇಡಿ

ಟೈಟ್ ಹಾಫ್ ಜೀನ್ಸ್ ಧರಿಸಿ ಡೇಟ್ ಗೆ ಹೋಗಿದ್ದ ಯುವತಿ ಸಮಸ್ಯೆಗಳಲ್ಲಿ ಸಿಲುಕಿಕೊಂಡಳು!

ಆಸ್ಪತ್ರೆಯಲ್ಲಿ ಬೆಡ್ ಇಲ್ಲ: ಫುಟ್ಪಾತ್ ನಲ್ಲಿಯೇ ರೋಗಿಗಳಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆ!

ಆಸ್ಪತ್ರೆ ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಹೊಸ ತಿರುವು: ಮೊಬೈಲ್ ನಲ್ಲಿ ಪತ್ತೆಯಾದ ಫೋಟೋಗಳಿಂದ ರಹಸ್ಯ ಬಯಲು

2,700 ವರ್ಷದ ಹಳೆಯ ಪುರಾತನ ಐಶಾರಾಮಿ ಶೌಚಾಲಯ ಪತ್ತೆ!

ಮನೆ ಕುಸಿದು 7 ಮಂದಿ ಸಾವು ಪ್ರಕರಣ: ಮೃತರ ಕುಟುಂಬಸ್ಥರಿಗೆ 5 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಇತ್ತೀಚಿನ ಸುದ್ದಿ