ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸಿದ ಪಾಕ್ ಯುವತಿ - Mahanayaka

ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಅರ್ಪಿಸಿದ ಪಾಕ್ ಯುವತಿ

narendra modi
09/03/2022

ನವದೆಹಲಿ: ಯುದ್ಧಪೀಡಿತ ಉಕ್ರೇನ್‌ ನಿಂದ ಭಾರತೀಯ ರಾಯಭಾರಿ ಕಚೇರಿ ಮೂಲಕ ಸುರಕ್ಷಿತವಾಗಿ ಸ್ಥಳಾಂತರ ಮಾಡಿದಕ್ಕಾಗಿ ಪಾಕಿಸ್ತಾನದ ಯುವತಿ ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ಹೇಳಿದ್ದಾರೆ.

ಆಪರೇಷನ್ ಗಂಗಾ ಕಾರ್ಯಾಚರಣೆ ಮೂಲಕ ಭಾರತೀಯರನ್ನು ಉಕ್ರೇನ್‌ ನಿಂದ ಕರೆ ತರುವ ಕೆಲಸ ನಡೆಯುತ್ತಿದ್ದು, ಈ ನಡುವೆ ಕೀವ್‌ನಲ್ಲಿ ಸಿಲುಕಿದ್ದ ಪಾಕಿಸ್ತಾನಿ ಯುವತಿ ಅಸ್ಮಾ ಶಫೀಕ್ ಅವರನ್ನು ಕೀವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಸುರಕ್ಷಿತವಾಗಿ ಸ್ಥಳಾಂತರ ಮಾಡಿತ್ತು.

ಬಹಳ ಕಷ್ಟಕರ ಪರಿಸ್ಥಿತಿಯಿಂದ ಪಾರು ಮಾಡಿದ್ದಕ್ಕಾಗಿ ಭಾರತೀಯ ರಾಯಭಾರ ಕಚೇರಿ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಧನ್ಯವಾದ. ಯುದ್ಧಗ್ರಸ್ಥ ರಾಷ್ಟ್ರದಲ್ಲಿ ನಮಗೆ ಭಾರತೀಯ ರಾಯಭಾರ ಕಚೇರಿ ತುಂಬಾ ಸಹಾಯ ಮಾಡಿದೆ ಎಂದು ವಿಡಿಯೋ ಮುಖಾಂತರ ಧನ್ಯವಾದ ಸಲ್ಲಿಸಿದ್ದಾರೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಹೈಟೆಕ್​​​ ವೇಶ್ಯಾವಾಟಿಕೆ ಪ್ರಕರಣ: ಮತ್ತೆ ನಾಲ್ವರು ಆರೋಪಿಗಳ ಬಂಧನ

ಚಾಕು ಇರಿದು ವ್ಯಕ್ತಿಯ ಕೊಲೆ ಯತ್ನ

ಕ್ಷುಲ್ಲಕ ಕಾರಣಕ್ಕೆ ನಡೆದ ಜಗಳ: ಮಗ – ತಂದೆ ಇಬ್ಬರೂ ಸಾವಿಗೆ ಶರಣು

ದುಬೈನಲ್ಲಿ ಕೇರಳದ ಖ್ಯಾತ ಆಲ್ಬಂ ಸ್ಟಾರ್ ಅನುಮಾನಸ್ಪದವಾಗಿ ಸಾವು

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ | ಕೇಂದ್ರ ಇಂಧನ ಸಚಿವರು ಜನರಿಗೆ ನೀಡಿದ ಸ್ಪಷ್ಟನೆ ಏನು?

 

ಇತ್ತೀಚಿನ ಸುದ್ದಿ