ಪ್ರಧಾನಿ ಭದ್ರತೆಯಲ್ಲಿ ಭಾರೀ ಲೋಪ: ರಸ್ತೆ ಮಧ್ಯೆ ತಡೆದ ಪ್ರತಿಭಟನಾಕಾರರು!
ಚಂಡೀಗಢ: ಭದ್ರತಾ ಲೋಪದ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಂಜಾಬ್ ನ ಫಿರೋಜ್ ಪುರ ರಾಲಿ ರದ್ದು ಮಾಡಲಾಗಿದೆ ಎಂದು ಗೃಹ ಸಚಿವಾಲಯ ಹೇಳಿಕೆ ತಿಳಿಸಿದೆ. ಆದರೆ ಇದನ್ನು ಪಂಜಾಬ್ ಸಿಎಂ ಚರಣ್ ಜಿತ್ ಚನ್ನಿ ನಿರಾಕರಿಸಿದ್ದಾರೆ.
ಪ್ರಧಾನಿ ಮೋದಿ ಹುಸೇನಿವಾಲಾದಲ್ಲಿನ ರಾಷ್ಟ್ರೀಯ ಹುತಾತ್ಮರ ಸ್ಮಾರಕದಿಂದ ಸುಮಾರು 30-ಕಿ.ಮೀ. ದೂರದಲ್ಲಿ, ಪ್ರಧಾನ ಮಂತ್ರಿಯ ಬೆಂಗಾವಲು ಪಡೆ ಫ್ಲೈಓವರ್ ಅನ್ನು ತಲುಪಿದಾಗ, ಕೆಲವು ಪ್ರತಿಭಟನಾಕಾರರು ರಸ್ತೆಯನ್ನು ನಿರ್ಬಂಧಿಸಿರುವುದು ಕಂಡುಬಂದಿದೆ. ಇದರಿಂದಾಗಿ ಪ್ರಧಾನಿ ಮೋದಿ 15-20 ನಿಮಿಷಗಳ ಕಾಲ ಫ್ಲೈಓವರ್ ಮೇಲೆಯೇ ಕಾರಿನಲ್ಲಿ ಕುಳಿತುಕೊಳ್ಳುವಂತಾಗಿತ್ತು.
ಪ್ರಧಾನಿ ಮೋದಿ ಅವರ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ ಎಂದು ಘಟನೆಯ ಬಗ್ಗೆ ಹೇಳಿಕೆಯಲ್ಲಿ ತಿಳಿಸಲಾಗಿದ್ದು, ಎರಡು ವರ್ಷಗಳ ಅಂತರದ ನಂತರ ಪ್ರಧಾನಿಯವರ ಪಂಜಾಬ್ ಭೇಟಿ ನಿಗದಿಯಾಗಿದ್ದು, ಕೃಷಿ ಕಾನೂನುಗಳನ್ನು ರದ್ದುಪಡಿಸಿದ ನಂತರ ಇದು ಮೊದಲನೆಯ ಭೇಟಿಯಾಗಿತ್ತು. ರ್ಯಾಲಿಗೆ ಗಂಟೆಗಳ ಮೊದಲು, ಫಿರೋಜ್‌ಪುರದ ಸ್ಥಳಕ್ಕೆ ಹೋಗುವ ಮೂರು ಮಾರ್ಗಗಳನ್ನು ಕಿಸಾನ್ ಮಜ್ದೂರ್ ಸಂಗ್ರಹ್ ಸಮಿತಿ ಸದಸ್ಯರು ನಿರ್ಬಂಧಿಸಿದರು. ಆದರೆ, ರೈತರು ತಮ್ಮ ಬೇಡಿಕೆಗಳ ಕುರಿತು ಜನವರಿ 15 ರಂದು ಪ್ರಧಾನಿಯೊಂದಿಗೆ ಚರ್ಚೆ ನಡೆಸುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಕೊನೆಗೊಳಿಸಲಾಯಿತು ಎಂದು ತಿಳಿದು ಬಂದಿದೆ.
ಭದ್ರತಾ ಲೋಪವಾಗಿಲ್ಲ: ಪಂಜಾಬ್ ಸಿಎಂ
ಪಂಜಾಬಿ ಚಾನೆಲ್ ನ ಟಿವಿ ಸಂದರ್ಶನದಲ್ಲಿ ಘಟನೆಯ ಬಗ್ಗೆ ಪ್ರತಿಕ್ರಿಯಿಸಿದ ಪಂಜಾಬ್ ಸಿಎಂ ಚರಣ್ ಜಿತ್ ಚನ್ನಿ, ಯಾವುದೇ ಭದ್ರತಾ ಲೋಪವಾಗಿಲ್ಲ . ಪ್ರಧಾನ ಮಂತ್ರಿಯವರ ರಸ್ತೆ ಯೋಜನೆಗಳನ್ನು ಕೊನೆಯ ಕ್ಷಣದಲ್ಲಿ ಮಾಡಲಾಯಿತು. ಅವರು ಹೆಲಿಕಾಪ್ಟರ್‌ನಲ್ಲಿ ಹೋಗಬೇಕಿತ್ತು. ಅವರ ರ್ಯಾಲಿಗಾಗಿ ಭದ್ರತಾ ವ್ಯವಸ್ಥೆಗಳನ್ನು ನೋಡಿಕೊಳ್ಳಲು ನಾನು ತಡರಾತ್ರಿವರೆಗೆ ಇದ್ದೆ, ರ್ಯಾಲಿಗಾಗಿ 70,000 ಕುರ್ಚಿಗಳನ್ನು ಹಾಕಲಾಗಿತ್ತು ಆದರೆ 700 ಜನರು ಮಾತ್ರ ಬಂದರು ಎಂದು ಹೇಳಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
50 ರೂಪಾಯಿ ಕಳೆದು ಹೋಗಿದೆ, ಸಿಕ್ಕಿದವರು ಇವರ ಬಳಿ ಕೊಡಿ!
ಭಾರತದಲ್ಲಿ ಒಮಿಕ್ರಾನ್ ಗೆ ಮೊದಲ ಬಲಿ!
ಭೀಕರ ಅಪಘಾತ: ಒಂದೇ ಕುಟುಂಬದ ನಾಲ್ವರ ದುರ್ಮರಣ | ನಜ್ಜುಗುಜ್ಜಾದ ಕಾರು
ಎಲ್ಲಾ ಕಡೆ ವೀಕೆಂಡ್ ಕರ್ಫ್ಯೂ ಯಾಕೆ? | ಸರ್ಕಾರದ ನಿರ್ಧಾರದ ಬಗ್ಗೆ ಸಚಿವ ಈಶ್ವರಪ್ಪ ಅಸಮಾಧಾನ