ಪ್ರಧಾನಿ ಹೆಲಿಕಾಪ್ಟರ್ ಕಡೆ ಕಪ್ಪು ಬಲೂನ್ ಹಾರಿಸಿದ ಪ್ರಕರಣ:  ಮೂವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ - Mahanayaka
1:23 AM Wednesday 11 - December 2024

ಪ್ರಧಾನಿ ಹೆಲಿಕಾಪ್ಟರ್ ಕಡೆ ಕಪ್ಪು ಬಲೂನ್ ಹಾರಿಸಿದ ಪ್ರಕರಣ:  ಮೂವರು ಕಾಂಗ್ರೆಸ್ ಕಾರ್ಯಕರ್ತರ ಬಂಧನ

pm modi
05/07/2022

ಆಂಧ್ರಪ್ರದೇಶ: ಪ್ರಧಾನಿ ನರೇಂದ್ರ ಮೋದಿ ಹೆಲಿಕಾಪ್ಟರ್ ಟೇಕಾಫ್ ಆದ ತಕ್ಷಣ ಕಪ್ಪು ಬಲೂನ್ ಹಾರಿಸಿದ ಘಟನೆಯಲ್ಲಿ ಮೂವರು  ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಲಾಗಿದೆ.

ಇದು ಭದ್ರತಾ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ.  ಆಂಧ್ರಪ್ರದೇಶದ ಗನ್ನವರಂನಿಂದ ಹೆಲಿಕಾಪ್ಟರ್ ಟೇಕಾಫ್ ಆದ ತಕ್ಷಣ ಮೂವರು ಪ್ರಧಾನಿ ವಿರುದ್ಧ ಪ್ರತಿಭಟನೆ ನಡೆಸಿದರು.

ಬಲೂನ್‌ ಗಳು ಹೆಲಿಕಾಪ್ಟರ್‌ ನ ಸಮೀಪದಲ್ಲಿ ಹಾರಿದವು. ಇದು ಗಂಭೀರ ಭದ್ರತಾ ಉಲ್ಲಂಘನೆ ಎಂದು ಪರಿಗಣಿಸಲಾಗಿದೆ. ಪ್ರತಿಭಟನೆ ಹಿಂದೆ ಕಾಂಗ್ರೆಸ್ಸಿಗರ ಕೈವಾಡವಿದೆ ಎಂದು ಬಿಜೆಪಿ ಆರೋಪಿಸಿದೆ

ಅಲ್ಲೂರಿ ಸೀತಾರಾಮ ರಾಜು ಅವರ 125ನೇ ಜನ್ಮದಿನಾಚರಣೆ ಸಮಾರಂಭದಲ್ಲಿ ಭಾಗವಹಿಸಲು ಪ್ರಧಾನಿ ಆಂಧ್ರಕ್ಕೆ ಆಗಮಿಸಿದ್ದರು.  ಸ್ವಾತಂತ್ರ್ಯ ಹೋರಾಟಗಾರ ಮತ್ತು ಕ್ರಾಂತಿಕಾರಿ ವೀರ ಅಲ್ಲೂರಿ ಸೀತಾರಾಮ ರಾಜು ಅವರ 30 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪ್ರಧಾನಿ ಅನಾವರಣಗೊಳಿಸಿದರು.

ಇತ್ತೀಚಿನ ಸುದ್ದಿ