ಪ್ರಧಾನಿ ಕೈಯಿಂದ ಗುದ್ದಿಸಿಕೊಂಡ ಶಾಸಕ ರಾಮ್ ದಾಸ್!
ಮೈಸೂರು: ಪ್ರೀತಿಯಿಂದ ಕರೆದು ಗುದ್ದುವುದು ಎಂದರೆ ಇದೇನಾ? ರಾಜ್ಯ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಅವರ ಕೈಯಿಂದ ಶಾಸಕ ರಾಮ್ ದಾಸ್ ಅವರು ಗುದ್ದಿಸಿಕೊಂಡ ವಿನೋದದ ಘಟನೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಸಂವಾದ ಕಾರ್ಯಕ್ರಮದ ವೇಳೆ ನಡೆಯಿತು.
ಕಾರ್ಯಕರ್ತರ ಜೊತೆಗೆ, ಪಕ್ಷದ ನಾಯಕರ ಜೊತೆಗೆ ಸದಾ ಆತ್ಮೀಯವಾಗಿರುವ ಪ್ರಧಾನಿ ಮೋದಿ ಅವರು, ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಮದಾಸ್ ಅವರ ಬೆನ್ನಿಗೆ ಪ್ರೀತಿಯಿಂದ ಗುದ್ದಿದ್ದಾರೆ.
ಕಾರ್ಯಕ್ರಮದ ವೇದಿಕೆ ಪ್ರವೇಶಿಸಿದ ಅವರು ಭಾಷಣ ಮಾಡುವ ಮೊದಲು ಅಲ್ಲೇ ಇದ್ದ ಶಾಸಕ ರಾಮದಾಸ್ ಅವರನ್ನು ಆತ್ಮೀಯವಾಗಿ ಹತ್ತಿರ ಕರೆದು ಪ್ರೀತಿಯಿಂದ ಬೆನ್ನಿಗೆ ಗುದ್ದಿ ಮಾತನಾಡಿಸಿದರು. ಈ ವೇಳೆ ಶಾಸಕ ರಾಮದಾಸ್ ಕೂಡ ಪಿಎಂ ಮೋದಿ ಅವರಿಗೆ ನಮಸ್ಕರಿಸುವ ಮೂಲಕ ತಮ್ಮ ಆತ್ಮೀಯತೆ ತೋರಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ತಾಯಿ ಕೋತಿಯನ್ನು ಬೇಟೆಯಾಡಿದ ಚಿರತೆ: ತಾಯಿ ಎದೆ ಅಪ್ಪಿಕೊಂಡೇ ಇದ್ದ ಮರಿ ಕೋತಿ
ಕಾರು-ಕೆಎಸ್ಸಾರ್ಟಿಸಿ ಬಸ್ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು
ಇಂದು ಮಧ್ಯಾಹ್ನ ಕರ್ನಾಟಕಕ್ಕೆ ಪ್ರಧಾನಿ ಮೋದಿ ಆಗಮನ: ಏನೇನು ಕಾರ್ಯಕ್ರಮವಿದೆ?