ಪ್ರಧಾನಿ ಮಾತನಾಡುತ್ತಿರುವ ವೇಳೆ ಕೇಜ್ರಿವಾಲ್ ಹೀಗಾ ಮಾಡೋದು?: ಬಿಜೆಪಿ ಮುಖಂಡರಿಂದ ಆಕ್ರೋಶ - Mahanayaka

ಪ್ರಧಾನಿ ಮಾತನಾಡುತ್ತಿರುವ ವೇಳೆ ಕೇಜ್ರಿವಾಲ್ ಹೀಗಾ ಮಾಡೋದು?: ಬಿಜೆಪಿ ಮುಖಂಡರಿಂದ ಆಕ್ರೋಶ

kejriwal
28/04/2022

ದೆಹಲಿ: ಕೊವಿಡ್ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಸಿಎಂಗಳ ವಿಡಿಯೋ ಸಂವಾದ ನಡೆಸುತ್ತಿದ್ದ ವೇಳೆ  ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ದುರ್ವತನೆ ತೋರಿದ್ದಾರೆ ಎಂದು ಬಿಜೆಪಿ ಟೀಕಿಸಿದೆ.

ಪ್ರಧಾನಿ ಸಭೆಯನ್ನುದ್ದೇಶಿಸಿ ಮಾತನಾಡುತ್ತಿದ್ದಾಗ, ಕೇಜ್ರಿವಾಲ್ ಜಡವಾಗಿ ಕುಳಿತು ಎರಡೂ ಕೈಗಳನ್ನು ಮೇಲಕ್ಕೆತ್ತಿ ಕುರ್ಚಿಯ ಮೇಲೆ ತಲೆಯಿಟ್ಟು ನಿರ್ಲಕ್ಷ್ಯತನದಿಂದ ಕುಳಿತಿದ್ದರು ಎಂದು ವಿಡಿಯೋ ತುಣುಕನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಕೇಜ್ರಿವಾಲ್ ಅವರ ವೀಡಿಯೋವನ್ನು ದೆಹಲಿ ಬಿಜೆಪಿ ಘಟಕವು ‘ದೆಹಲಿಯ ಒರಟು(ಮರ್ಯಾದೆ ಇಲ್ಲದ) ಸಿಎಂ’ ಎಂಬ ಶೀರ್ಷಿಕೆಯಡಿ (caption)ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದೆ.

ಸಂಪೂರ್ಣ ಅಸಭ್ಯವಾಗಿ ವರ್ತಿಸುವ ಮೂಲಕ ಕೇಜ್ರಿವಾಲ್ ತಮ್ಮನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟೀಕಿಸಿದ್ದಾರೆ.

ದೆಹಲಿ ಬಿಜೆಪಿ ವಕ್ತಾರ ನವೀನ್ ಕುಮಾರ್ ಜಿಂದಾಲ್ ಕೂಡ ಕೇಜ್ರಿವಾಲ್ ವಿರುದ್ಧ ಕಿಡಿಕಾರಿದ್ದಾರೆ.  ‘ಇದು ಯಾವ ರೀತಿಯ ಸಂಸ್ಕೃತಿ ಎಂದು ನನಗೆ ಅರ್ಥವಾಗುತ್ತಿಲ್ಲ.  ಅಂತಹ ಮಹತ್ವದ ಸಭೆಯಲ್ಲಿ ಹೇಗೆ ವರ್ತಿಸಬೇಕು ಎಂದು ಅವನಿಗೆ ತಿಳಿದಿಲ್ಲವೇ?  ನಾಚಿಕೆಯಿಲ್ಲದ ವ್ಯಕ್ತಿ ‘ಜಿಂದಾಲ್ ಪ್ರತಿಕ್ರಿಯಿಸಿದರು.

ಬಿಜೆಪಿ ನಾಯಕ ತಜಿಂದರ್ ಪಾಲ್ ಸಿಂಗ್ ಬಗ್ಗಾ ಮಾತನಾಡಿ, ಕೇಜ್ರಿವಾಲ್ ಹೇಗೆ ವರ್ತಿಸಬೇಕು ಎಂಬುದನ್ನು ಕಲಿಸಬೇಕು.  ಆದರೆ, ಈ ಘಟನೆ ಬಗ್ಗೆ ಅರವಿಂದ್ ಕೇಜ್ರಿವಾಲ್ ಅಥವಾ ಆಮ್ ಆದ್ಮಿ ಪಕ್ಷ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1duNIQRfXnJcfQKWPzNqD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮಲಬಾರ್ ಎಕ್ಸ್ ಪ್ರೆಸ್ ರೈಲಿನ ಬೋಗಿಯೊಳಗೆ ಅಪರಿಚಿತ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ

ಪ್ರೀತಿ ವಿಚಾರದಲ್ಲಿ ಗಲಾಟೆ: ಯುವತಿಗೆ ಆಸಿಡ್ ಎರಚಿದ ಯುವಕ

ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ: ಇಬ್ಬರು ಸ್ಥಳದಲ್ಲೇ ಸಾವು

ಹೊಳೆಗೆ ತೋಟೆ ಹಾಕಿ ಮೀನುಗಳ ಮಾರಣಹೋಮ:  ಮೂವರು ವಶಕ್ಕೆ

ಲಾಡ್ಜ್ ನಲ್ಲಿ ಆತ್ಮಹತ್ಯೆಗೆ ಶರಣಾದ ಮತ್ತೋರ್ವ ಗುತ್ತಿಗೆದಾರ!

ಇತ್ತೀಚಿನ ಸುದ್ದಿ