ಪ್ರಧಾನಿ ನರೇಂದ್ರ ಮೋದಿ ‘ಹೇಡಿ’ | ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕಿಡಿ

12/02/2021

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ‘ಹೇಡಿ’. ನಮ್ಮ ದೇನೆಯ ತ್ಯಾಗಕ್ಕೆ ಅವರು ದ್ರೋಹ ಮಾಡುತ್ತಿದ್ದಾರೆ. ಮೋದಿ ಅವರು ನಮ್ಮ ಪ್ರದೇಶವನ್ನು ಚೀನೀಯರಿಗೆ ಏಕೆ ಬಿಟ್ಟುಕೊಟ್ಟಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

ಪೂರ್ವ ಲಡಾಖ್ ನ ಪಂಗೊಂಗ್ ಸರೋವರದ ಉತ್ತರ ಮತ್ತು ದಕ್ಷಿಣ ದಂಡೆಯಲ್ಲಿ ಭಾರತ ಮತ್ತು ಚೀನಾ ಒಪ್ಪಂದಮಾಡಿಕೊಂಡಿವೆ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸಂಸತ್ತಿನಲ್ಲಿ ಘೋಷಿಸಿದ ಮರುದಿನವೇ ಪತ್ರಿಕಾಗೋಷ್ಠಿ ಕರೆದಿರುವ ರಾಹುಲ್ ಗಾಂಧಿ, ದೇಶದ ಭೂಪ್ರದೇಶವನ್ನು ಚೀನಾಕ್ಕೆ ಏಕೆ ಬಿಟ್ಟುಕೊಟ್ಟಿದ್ದಾರೆ ಎಂದು ಪ್ರಶ್ನಿಸಿದ್ದಾರೆ.

ಒಬ್ಬ ಪ್ರಧಾನಿಯಾಗಿ ದೇಶದ ಭೂಭಾಗವನ್ನು ರಕ್ಷಿಸುವುದು ಪ್ರಧಾನಿ ಮೋದಿ ಅವರ ಜವಾಬ್ದಾರಿ ಆಗಿತ್ತು ಎಂದು ಹೇಳಿರುವ ಅವರು, ಚೀನಾ ಪ್ರವೇಶಿಸಿರುವ ಅತ್ಯಂತ ಪ್ರಮುಖ ಆಯಕಟ್ಟಿನ ಪ್ರದೇಶವಾದ ಡೆಪ್ಸಾಂಗ್ ಪ್ರದೇಶದ ಬಗ್ಗೆ ಲೋಕಸಭೆಯಲ್ಲಿ ಮಾತನಾಡದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ತರಾಟೆಗೆತ್ತಿಕೊಂಡರು.

ಇತ್ತೀಚಿನ ಸುದ್ದಿ

Exit mobile version