ಶೂ ಧರಿಸಿ ದೇವಸ್ಥಾನದಲ್ಲಿ ಪ್ರಾರ್ಥನೆ | ಪ್ರಧಾನಿ ಮೋದಿ ವಿರುದ್ಧ ನೆಟ್ಟಿಗರಿಂದ ಆಕ್ರೋಶ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಪಾದರಕ್ಷೆ ಧರಿಸಿ ದೇವಸ್ಥಾನದೊಳಗೆ ಪ್ರಾರ್ಥನೆ ನಡೆಸಿದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೇದಾರನಾಥ ದೇವಸ್ಥಾನದಲ್ಲಿ ಪ್ರಧಾನಿ ಮೋದಿ ಪಾದರಕ್ಷೆ ಧರಿಸಿ ಪ್ರಾರ್ಥಿಸಿರುವುದು ವಿವಾದಕ್ಕೀಡಾಗಿದೆ.
ಪ್ರಧಾನಿ ಮೋದಿ ಉತ್ತರಾಖಂಡದ ಕೇದಾರನಾಥ ದೇವಸ್ಥಾನದ ಆವಣದಲ್ಲಿ ನಿರ್ಮಿಸಲಾಗಿದ್ದ ಶಂಕರಾಚಾರ್ಯರ ಪ್ರತಿಮೆ ಲೋಕಾರ್ಪಣೆಗೆ ಹೋಗಿದ್ದರು. ಈ ಸಂದರ್ಭ ಅವರು ಕೇದಾರನಾಥ ದೇವಸ್ಥಾನದ ಆವರಣದಲ್ಲಿ ಕಪ್ಪು ಬಣ್ಣದ ಶೂ ಹಾಕಿಕೊಂಡು ಪ್ರಾರ್ಥನೆ ಸಲ್ಲಿಸಿದ್ದಾರೆ ಎಂದು ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಈ ಬಗ್ಗೆ ನೆಟ್ಟಿಗರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದರೆ, ಇತ್ತ ಬಿಜೆಪಿ ಬೆಂಬಲಿಗರು, ಪ್ರಧಾನಿ ಮೋದಿ ಅವರ ಕಾಲಿನಲ್ಲಿ ಧರಿಸಿರುವುದು ಶೂ ಅಲ್ಲ, ಅದು ಬಟ್ಟೆಯ ಕವಚ ಅಲ್ಲಿ ಚಳಿ ಇರುವುದರಿಂದ ಎಲ್ಲರೂ ಧರಿಸುತ್ತಾರೆ ಎಂದು ವಾದಿಸಿದ್ದಾರೆ. ಆದರೆ, ಇದು ಸಾಕ್ಸ್ ಅಲ್ಲ, ಶೂ ಎಂದೇ ನೆಟ್ಟಿಗರು ಪ್ರತಿವಾದಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka