ಕಾಂಗ್ರೆಸಿಗರು ಮೋದಿ ಹೆಸರು ಹೇಳಿದರೆ ಮುಳುಗುವವರು ತೇಲಬಹುದು: ಸಿ.ಟಿ.ರವಿ

c t ravi
21/01/2023

ಚಿಕ್ಕಮಗಳೂರು: ಪ್ರಜಾಧ್ವನಿ ಅಂದರೆ ಪ್ರಜೆಗಳ ಧ್ವನಿಯನ್ನ ಕೇಳಬೇಕು, ಇವರು ಮೈಕ್ ಹಿಡಿದು ಕೂಗೋದಲ್ಲ ಎಂದು ಕಾಂಗ್ರೆಸ್ ನ ಪ್ರಜಾಧ್ವನಿಯನ್ನು ಶಾಸಕ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ಕಾಂಗ್ರೆಸ್ ನವರು ಜನ ಸೇರಿಸ್ತಾರೆ,  ಆದ್ರೆ, ಮೋದಿ ಬರ್ತಾರೆ ಅಂದ್ರೆ ಲಕ್ಷ ಲಕ್ಷ ಜನ ಸೇರ್ತಾರೆ. ಜನ ಸೇರಿಸುವುದಕ್ಕೂ  ಸೇರುವುದಕ್ಕೂ ವ್ಯತ್ಯಾಸವಿದೆ. ಜನ ಸೇರ್ಸೋದಕ್ಕೆ ಹಲವು ಕಾರಣಗಳು, ಜನ ಸೇರೋದು ಪ್ರೀತಿಗೆ ಮಾತ್ರ ಎಂದು ಸಿ.ಟಿ.ರವಿ ವ್ಯಾಖ್ಯಾನಿಸಿದ್ದಾರೆ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳ ಧ್ವನಿ ಚುನಾವಣೆಯಲ್ಲಿ ಕೇಳುತ್ತದೆ ಎಂದರು.

ಮೋದಿ ಹೆಸರೇಳಿದರೆ ಮುಳುಗುವವರು ತೇಲಬಹುದು:

ಕಾಂಗ್ರೆಸಿಗರಿಗೆ ಗತಿ ಇಲ್ಲ ಇಟಲಿ ರಾಣಿಯನ್ನ, ಬಂಡವಾಳ ಮಾಡಿಕೊಂಡಿದ್ದಾರೆ. ರಾಮನ ಹೆಸರು ಬರೆದರೆ ಮುಳುಗುವ ಕಲ್ಲು ತೇಲುತ್ತಿತ್ತು. ಕಾಂಗ್ರೆಸಿಗರು ಮೋದಿ ಹೆಸರು ಹೇಳಿದರೆ ಮುಳುಗುವವರು ತೇಲಬಹುದು.  ಕಾಂಗ್ರೆಸ್ಸಿಗರು ಮೋದಿ ಹೆಸರನ್ನು ಬಂಡವಾಳ ಮಾಡಿಕೊಳ್ಳಲಿ, ಬೇಡ ಅಂದವರು ಯಾರು ಎಂದು ಕಾಂಗ್ರೆಸ್ ನಾಯಕರಿಗೆ ಸಿ.ಟಿ.ರವಿ ತಿರುಗೇಟು ನೀಡಿದರು.

ಮೋದಿ ಈ ಮಣ್ಣಿನ ಮಗ ಸಾಮಾನ್ಯವಾದ ಬಡ ಕುಟುಂಬದಿಂದ ಬಂದವರು, 20 ವರ್ಷದಿಂದ ಒಂದೇ ಒಂದು ಹಗರಣ ಕೂಡ ಇಲ್ಲದ ನಾಯಕತ್ವ. ಪ್ರತಿ ಸಂದರ್ಭದಲ್ಲಿ ದಲಿತರು, ಮಹಿಳೆಯರು ಬಡವರ ಅಭಿವೃದ್ಧಿ ಹಾಗೂ ಗೌರವದ ಬಗ್ಗೆ ಚಿಂತಿಸುವವರು. ಅಂಬೇಡ್ಕರ್ ಅವರ ಲೆಗಸಿಯನ್ನ ಎತ್ತಿ ಹಿಡಿಯುವ ಕೆಲಸ ಮಾಡಿದವರು,  ಅಂಥವರನ್ನು ನಾವು ಬಂಡವಾಳ ಮಾಡಿಕೊಳ್ಳದೆ ಕಾಂಗ್ರೆಸ್ಸಿಗರು ಮಾಡಿಕೊಳ್ಳಲು ಸಾಧ್ಯವೇ? ಮೋದಿ ಅಂತ ನಾಯಕರಿಲ್ಲ ಎಂದು ಅವರು ಬಂಡವಾಳ ಮಾಡಿಕೊಳ್ಳಲಿ ಬೇಡ ಅಂದವರು ಯಾರು? ನಾಳೆಯಿಂದ ಮೋದಿ ಮಾಡಿರುವ ಒಳ್ಳೆಯ ಕೆಲಸವನ್ನು ಹೇಳಿಕೊಂಡು ಓಡಾಡಲಿ ಬೇಡ ಅಂದವರು ಯಾರು? ಕಾಂಗ್ರೆಸಿಗರು ಮೋದಿ ಹೆಸರೇಳಿ ಡೆಪಾಸಿಟ್ ಹೋಗೋದನ್ನ ತಪ್ಪಿಸಿಕೊಳ್ಳಬಹುದು, ತಪ್ಪಿಸಿಕೊಳ್ಳಲಿ ಎಂದು ಸಿ.ಟಿ.ರವಿ ವ್ಯಂಗ್ಯವಾಡಿದರು.

ಕಾಂಗ್ರೆಸ್ ಸೌಂಡ್ ಜಾಸ್ತಿ, ಗ್ರೌಂಡ್ ನಲ್ಲಿ ಬಿಜೆಪಿ ಇದೆ:

ಕರ್ನಾಟಕದಲ್ಲಿ ಕಾಂಗ್ರೆಸ್ ಸೌಂಡ್ ಜಾಸ್ತಿ,  ಆದ್ರೆ ಗ್ರೌಂಡ್ ನಲ್ಲಿ ಬಿಜೆಪಿ ಇದೆ. ಕಾಂಗ್ರೆಸ್ ಗುಜರಾತಿನಲ್ಲೂ ಭಾರೀ ಸೌಂಡ್ ಮಾಡಿತ್ತು, ಕೊನೆಗೆ ಏನಾಯ್ತು? ಬಿಜೆಪಿ ಬೂತ್ ವಿಜಯ ಅಭಿಯಾನ ಮಾಡುತ್ತಿದೆ, ಬೂತ್ ಗೆದ್ರೆ ಬಿಜೆಪಿ ಗೆದ್ದಂತೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ನಮ್ಮದು ಗ್ರಾಸ್ ರೂಟ್ ವರ್ಕ್, ಕಾಂಗ್ರೆಸ್ ನದ್ದು ದೊಡ್ಡ ಮೈಕ್ ಹಾಕಿಕೊಂಡು ನಮ್ಮನ್ನ ಬೈಯುವ ಕೆಲಸ. ಕಾಂಗ್ರೆಸ್ ನದ್ದು ಸೌಂಡು, ಬಿಜೆಪಿಯದ್ದು ಗ್ರೌಂಡ್, ಫೀಲ್ಡ್ ನಲ್ಲಿ ಗೆಲ್ಲುವುದು ಗ್ರೌಂಡ್, ಸೌಂಡ್ ಅಲ್ಲ. ಸೌಂಡ್ ನ ಬಲಕಿವಿಯಲ್ಲಿ ಕೇಳಿ ಎಡ ಕಿವಿಯಲ್ಲಿ ಬಿಡುತ್ತಾರೆ ಎಂದು  ಕಾಂಗ್ರೆಸ್ಸಿನ ಪ್ರಜಾ ಧ್ವನಿಯಾತ್ರೆಗೆ ಸಿ.ಟಿ.ರವಿ ಲೇವಡಿ ಮಾಡಿದರು.

YouTube video player

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version