ಬೂಟಾಟಿಕೆಯನ್ನು ಒದ್ದೋಡಿಸಿದ ಸ್ವಾಭಿಮಾನಿ ಕನ್ನಡಿಗರಿಗೆ ಧನ್ಯವಾದಗಳನ್ನು ಹೇಳಿದ ಪ್ರಕಾಶ್ ರೈ - Mahanayaka
7:57 PM Thursday 12 - December 2024

ಬೂಟಾಟಿಕೆಯನ್ನು ಒದ್ದೋಡಿಸಿದ ಸ್ವಾಭಿಮಾನಿ ಕನ್ನಡಿಗರಿಗೆ ಧನ್ಯವಾದಗಳನ್ನು ಹೇಳಿದ ಪ್ರಕಾಶ್ ರೈ

prakash rai
14/05/2023

ಬೆಂಗಳೂರು: ದ್ವೇಷ ಬೂಟಾಟಿಕೆಯನ್ನು ಕರ್ನಾಟಕದಿಂದ ಒದ್ದೋಡಿಸಿದ ಸ್ವಾಭಿಮಾನಿಗಳು ಕನ್ನಡಿಗರು.ಇಂತಹ ಕನ್ನಡಿಗರಿಗೆ ನಟ ಪ್ರಕಾಶ್ ರೈ ಧನ್ಯವಾದ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ, ಯೋಗಿ ಆದಿತ್ಯನಾಥ್​, ಅಮಿತ್​ ಶಾರನ್ನ ವ್ಯಂಗ್ಯಮಾಡುವ ರೀತಿಯ ಫೋಟೋ ಹಂಚಿಕೊಂಡಿದ್ದಾರೆ ನಟ ಪ್ರಕಾಶ್‌ ರೈ. ಜೊತೆಗೆ `ದ್ವೇಶ, ಬೂಟಾಟಿಕೆಯನ್ನು ಒದ್ದೋಡಿಸಿದ  ಸ್ವಾಭಿಮಾನಿ ಕನ್ನಡಿಗರಿಗೆ ಧನ್ಯವಾದಗಳು..  ಬೆತ್ತಲೆಯಾದ ಚಕ್ರವರ್ತಿ’ ಅಂತ ಪ್ರಕಾಶ್​ ರೈ ಟ್ವೀಟ್​ ಮಾಡಿದ್ದಾರೆ. ಪ್ರಕಾಶ್‌ ರೈ  ಅವರ ಟ್ವೀಟ್​ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಅನೇಕರು ವಿವಿಧ ರೀತಿಯಲ್ಲಿ ಕಮೆಂಟ್​ ಮಾಡುತ್ತಿದ್ದಾರೆ. ಕೆಲವರು ಪ್ರಕಾಶ್ ರಾಜ್​ ಅವರ ಮಾತುಗಳಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಬಹುಭಾಷಾ ನಟ ಪ್ರಕಾಶ್​ ರೈ ಕೂಡ ಟ್ವಿಟರ್​ ಮೂಲಕ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಹಿಂದಿನಿಂದಲೂ ಬಿಜೆಪಿ ನಿಲುವುಗಳನ್ನ ವಿರೋಧಿಸುತ್ತಾ ಬಂದಿರುವ ಪ್ರಕಾಶ್‌ ರೈಗೆ ಈ ಬಾರಿಯ ಚುನಾವಣೆ ಖುಷಿ ನೀಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ