ತನ್ನ ಬೆಂಬಲದೊಂದಿಗೆ ಗೆದ್ದ ಗ್ರಾ.ಪಂ. ಸದಸ್ಯರನ್ನು ಪ್ರಮಾಣ ಮಾಡಿಸಿದ ಶಾಸಕ
ಹಾಸನ: ಗ್ರಾಮ ಪಂಚಾಯತ್ ನಲ್ಲಿ ಗೆದ್ದ ತನ್ನ ಬೆಂಬಲಿಗರ ಸದಸ್ಯರನ್ನು ಅರಸೀಕೆರೆ ಶಾಸಕ ಶಿವಲಿಂಗೇಗೌಡ ಜೇನುಕಲ್ ಬೆಟ್ಟದ ಪ್ರಮಾಣ ಮಾಡಿಸಿದ್ದು, ಈ ಬಗ್ಗೆ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ತಮ್ಮ ಬೆಂಬಲದೊಂದಿಗೆ ಗೆದ್ದ ಸದಸ್ಯರು ಬೇರೆಯವರ ಬಳಿಗೆ ಹೋಗುವುದಿಲ್ಲ ಎಂದು ಹೇಳಿಸಿ ಪ್ರಮಾಣ ಮಾಡಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ. ದೇವಸ್ಥಾನದ ಮುಂದೆ ನಿಂತಿರುವ ಸದಸ್ಯರು, ನಿಮ್ಮನ್ನು ಬಿಟ್ಟು ಹೋಗುವುದಿಲ್ಲ ಎಂದು ಕರ್ಪೂರ ಹಚ್ಚಿ ಪ್ರಮಾಣ ಮಾಡುತ್ತಿರುವುದು ಕಂಡು ಬಂದಿದೆ.
ತಮ್ಮ ಬೆಂಬಲದೊಂದಿಗೆ ಗೆದ್ದ ಸದಸ್ಯರು ಇತರರಿಗೆ ಬೆಂಬಲ ಸೂಚಿಸಬಾರದು ಎಂಬ ನಿಟ್ಟಿನಲ್ಲಿ ಈ ಪ್ರಮಾಣ ಮಾಡಿಸಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಸಂತೋಷ್ ಈ ಪ್ರದೇಶದಲ್ಲಿ ಬಿಜೆಪಿ ಪಕ್ಷ ಸಂಘಟನೆಯಲ್ಲಿದ್ದು ಪದೇ ಪದೇ ಶಿವಲಿಂಗೇ ಗೌಡರ ಮಧ್ಯೆ ರಾಜಕೀಯ ಕಿತ್ತಾಟ ನಡೆಯುತ್ತಲೇ ಇದೆ. ತನ್ನ ಬೆಂಬಲದೊಂದಿಗೆ ಗೆದ್ದಿರುವ ಸದಸ್ಯರು ಸಂತೋಷ್ ಗೆ ಬೆಂಬಲ ಸೂಚಿಸದಂತೆ ಈ ಪ್ರಮಾಣ ಮಾಡಿಸಲಾಗಿದೆ ಎಂದು ಹೇಳಲಾಗಿದೆ.