ಮಾಂಸಾಹಾರ ವಿರುದ್ಧ ಮೋಹನ್ ಭಾಗವತ್ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯೆ!
cಉಡುಪಿ: ಮಾಂಸಾಹಾರವನ್ನು ‘ತಪ್ಪು ಆಹಾರ’ ಎಂದಿರುವ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿಕೆ ವಿಚಾರವಾಗಿ ಶ್ರೀರಾಮ ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪ್ರತಿಕ್ರಿಯಿಸಿದರು.
ಆಧ್ಯಾತ್ಮ ಮತ್ತು ಸಾತ್ವಿಕತೆಯ ದೃಷ್ಟಿಯಿಂದ ಮೋಹನ್ ಭಾಗವತ್ ಅವರು ಈ ಹೇಳಿಕೆ ನೀಡಿರಬಹುದು. ಆ ದೃಷ್ಟಿಯಿಂದ ಅವರ ಹೇಳಿಕೆ ಒಪ್ಪಿಕೊಳ್ಳಬಹುದು. ಆದ್ರೆ, ನಮ್ಮ ದೇಶದಲ್ಲಿ ಬಹು ಸಂಖ್ಯೆಯ ಹಿಂದೂಗಳು ಮಾಂಸಾಹಾರಿಗಳಾಗಿದ್ದಾರೆ. ಹೀಗಾಗಿ ಆಹಾರದ ದೃಷ್ಟಿಯಿಂದ ಅವರ ಹೇಳಿಕೆ ಸರಿಯಲ್ಲ. ಮೋಹನ್ ಭಾಗವತ್ ಹೇಳಿಕೆ ಒಪ್ಪಿಕೊಳ್ಳಲಾಗದು ಎಂದರು.
ನಾಗಪುರದಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಭಾಷಣ ಮಾಡಿದ್ದ ಮೋಹನ್ ಭಾಗವತ್, ತಪ್ಪು ಆಹಾರ ಸೇವನೆ ಮಾಡಿದರೆ, ತಪ್ಪು ಹಾದಿಯಲ್ಲೇ ಸಾಗುತ್ತೀರಿ, ಮಾಂಸಾಹಾರವನ್ನೇ ಒಳಗೊಂಡಿರುವ ತಾಮಸ ಆಹಾರವನ್ನು ಕಡಿಮೆ ತಿನ್ನಬೇಕು ಅಥವಾ ತ್ಯಜಿಸಬೇಕು ಎನ್ನುವ ಅರ್ಥದಲ್ಲಿ ಮಾಂಸಾಹಾರದ ವಿರುದ್ಧ ಅಸಹನೆ ವ್ಯಕ್ತಪಡಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka