ಪರಸ್ತ್ರೀ ಜೊತೆ ಫೋಟೋ ಕಂಡು ಪತಿಯ ಮೇಲೆ ಚಾಕುವಿನಿಂದ ದಾಳಿ | ಆದರೆ ಅಸಲಿ  ತಿಳಿದಾಗ ಎಲ್ಲರಿಗೂ ಶಾಕ್ - Mahanayaka

ಪರಸ್ತ್ರೀ ಜೊತೆ ಫೋಟೋ ಕಂಡು ಪತಿಯ ಮೇಲೆ ಚಾಕುವಿನಿಂದ ದಾಳಿ | ಆದರೆ ಅಸಲಿ  ತಿಳಿದಾಗ ಎಲ್ಲರಿಗೂ ಶಾಕ್

31/01/2021

ಮೆಕ್ಸಿಕನ್: ಪತಿಯ ಮೊಬೈಲ್ ನೋಡಿದ ವೇಳೆ ಪತಿಯು ಪರಸ್ತ್ರೀಯ ಜೊತೆಗೆ ವಿವಿಧ ಭಂಗಿಯಲ್ಲಿ ಫೋಟೋ ತೆಗೆದುಕೊಂಡಿರುವುದು ಪತ್ತೆಯಾಗಿದೆ. ಪ್ರೀತಿಸಿ ವಿವಾಹವಾದ ಪತಿ ತನಗೆ ಮೋಸ ಮಾಡಿದ್ದೇನೆ ಎಂದು ಕೋಪಗೊಂಡ ಪತ್ನಿ ಇದೇ ವಿಚಾರವಾಗಿ ಪತಿಯ ಜೊತೆಗೆ ಜಗಳವಾಡಿದ್ದು, ಪತಿಗೆ ಚಾಕುವಿನಿಂದ ದಾಳಿ ನಡೆಸಿದ್ದಾಳೆ.

ಸೋನೋರಾದ ಕ್ಯಾಜೆಮ್ ನಲ್ಲಿರುವ ದಂಪತಿಯ ಮನೆಯಲ್ಲಿ ಪತ್ನಿಯ ರೌದ್ರಾವತಾರದ ಸಿಂಹನಾದ ಕೇಳಿ ಸ್ಥಳೀಯರು ಏನೋ ನಡೆಯಬಾರದ ಘಟನೆ ನಡೆದಿದೆ ಎಂದು ಪೊಲೀಸರಿಗೆ ಕರೆ ಮಾಡಿದ್ದಾರೆ. ಕೂಡಲೇ ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಮಹಿಳೆಯನ್ನು ವಶಕ್ಕೆ ಪಡೆದಿದ್ದಾರೆ.

ಮಹಿಳೆಯ ದಾಳಿಯಿಂದ ಪತಿಯ ಕೈ ಕಾಲುಗಳಿಗೆ ಚಾಕುವಿನಿಂದ ಇರಿದ ಗಾಯಗಳಾಗಿವೆ. ಪತಿ ಈ ಫೋಟೋದ ಬಗ್ಗೆ ಎಷ್ಟೇ ವಿವರಣೆ ನೀಡಲು ಪ್ರಯತ್ನಿಸಿದರೂ ಮಹಿಳೆ ಆಕ್ರೋಶ ತಣಿದಿರಲಿಲ್ಲ. ಆದರೆ, ಈ ಘಟನೆಯ ವಾಸ್ತವಾಂಶ ತಿಳಿದಾಗ ನಗಬೇಕೋ ಅಳಬೇಕೋ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ.

ಹಲ್ಲೆಗೊಳಗಾದ ಪತಿ ಜುವಾನ್ ಎನ್ ಹಾಗೂ ಆತನ ಪತ್ನಿ ಲಿಯೋನೋರಾ ಎ ಪರಸ್ಪರ ಪ್ರೀತಿಸಿ ವಿವಾಹವಾಗಿದ್ದರು. ತನ್ನ ಪತಿಯ ಜೊತೆಗೆ ಮದುವೆಗೂ ಮೊದಲು ತೆಗೆಸಿಕೊಂಡಿದ್ದ ಫೋಟೋ ಪತಿಯ ಮೊಬೈಲ್ ನಲ್ಲಿತ್ತು. ಈ ಫೋಟೋವನ್ನು ಕಂಡು ತನ್ನ ಗುರುತನ್ನು ಮಹಿಳೆ ಕಂಡು ಹಿಡಿದಿರಲಿಲ್ಲ. ಮದುವೆಗೂ ಮುನ್ನ ಮಹಿಳೆ ಸ್ಲಿಮ್ ಆಗಿದ್ದರು. ಆದರೆ, ಮದುವೆಯ ನಂತರ ದಪ್ಪವಾಗಿದ್ದರು. ಹೀಗಾಗಿ ತನ್ನ ಫೋಟೋವನ್ನುತಾನು ಕಂಡು ಹಿಡಿದಿರಲಿಲ್ಲ. ಇಷ್ಟು ಸಾಲದು ಎಂಬಂತೆ ಪತಿ ತನ್ನ ಪತ್ನಿಯ ಹಳೆಯ ಫೋಟೋವನ್ನು ಫೋಟೋ ಶಾಪ್ ನಲ್ಲಿ ಎಡಿಟ್ ಕೂಡ ಮಾಡಿದ್ದ. ಹಾಗಾಗಿ ಮಹಿಳೆ ಈ ಫೋಟೋವನ್ನು ಕಂಡು ಹಿಡಿದಿರಲಿಲ್ಲ ಎನ್ನುವುದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ