ವಿವಾದ ಇಲ್ಲಿಗೇ ಮುಗಿಸೋಣ: ಕೆ.ಆರ್.ಎಸ್. ರಸ್ತೆಗೆ ಸಿಎಂ ಹೆಸರು ಸಮರ್ಥಿಸಿದ್ದ ಪ್ರತಾಪ್ ಸಿಂಹ ಯು–ಟರ್ನ್
ಮೈಸೂರು: ಕೆ.ಆರ್.ಎಸ್. ರಸ್ತೆಗೆ ಸಿಎಂ ಹೆಸರು ಸಮರ್ಥಿಸಿಕೊಂಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ, ಬಿಜೆಪಿ ವಲಯದಲ್ಲಿ ವ್ಯಕ್ತವಾದ ವಿರೋಧಗಳ ಬೆನ್ನಲ್ಲೇ ಯು ಟರ್ನ್ ಹೊಡೆದಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಆರ್ ಎಸ್ ರಸ್ತೆಗೆ ಮಹಾರಾಜರ ಕಾಲದಲ್ಲೇ ಪ್ರಿನ್ಸಸ್ ಎಂದು ಹೆಸರಿದ್ದರೆ, ಬದಲಾವಣೆ ಮಾಡುವುದು ಬೇಡ. ನನ್ನ ತಕರಾರಿಲ್ಲ. ಸ್ಥಳೀಯ ಶಾಸಕ ಹರೀಶ್ ಗೌಡ ಅವರಿಗೆ ನಾನೇ ಮನವಿ ಮಾಡುತ್ತೇನೆ ಎಂದಿದ್ದಾರೆ.
ಕೆ.ಆರ್.ಎಸ್.ರಸ್ತೆಗೆ ಅಧಿಕೃತ ಹೆಸರಿಲ್ಲ, ಖಾಲಿ ಇದೆ ಎನ್ನುವ ಕಾರಣಕ್ಕೆ ಸಿದ್ದರಾಮಯ್ಯ ಹೆಸರು ಇಡಬಹುದು ಎಂದಿದ್ದೆ. ದಯವಿಟ್ಟು ನೋಟಿಫಿಕೇಷನ್ ವಾಪಸ್ ಪಡೆದುಕೊಳ್ಳಿ, ತಕರಾರರು ಸಲ್ಲಿಸುವವರು ಅರ್ಜಿ ಸಲ್ಲಿಸಿ, ದಾಖಲೆ ಒದಗಿಸಿ ಎಂದ ಪ್ರತಾಪ್ ಸಿಂಹ, ಈ ವಿವಾದ ಇಲ್ಲಿಗೆ ಮುಗಿಸೋಣ ಎಂದಿದ್ದಾರೆ.
ಮೈಸೂರಿಗೆ ಮಹಾರಾಜರ ಕೊಡುಗೆ ಬಹಳಷ್ಟಿದೆ. ಜನಪ್ರತಿನಿಧಿಗಳ ಕೊಡುಗೆ ಕೂಡ ಇದೆ. ಇಟ್ಟಿರುವ ಹೆಸರನ್ನ ಬದಲಾಯಿಸುವ ದಾಷ್ಟ್ಯ ನಮಗೆ ಬೇಡ ಎಂದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: