ಪ್ರತಿಭಟನೆ ಕೈಬಿಡದಿದ್ದರೆ ಸಂಬಳ ಕಟ್: ಬಿಎಂಟಿಸಿ ನೌಕರರಿಗೆ ಎಚ್ಚರಿಕೆ? - Mahanayaka
3:52 AM Wednesday 11 - December 2024

ಪ್ರತಿಭಟನೆ ಕೈಬಿಡದಿದ್ದರೆ ಸಂಬಳ ಕಟ್: ಬಿಎಂಟಿಸಿ ನೌಕರರಿಗೆ ಎಚ್ಚರಿಕೆ?

bmtc
07/04/2021

ಬೆಂಗಳೂರು: ಆರನೇ ವೇತನ ಆಯೋಗ ಜಾರಿಗೆ ಆಗ್ರಹಿಸಿ ಇಂದು ಸಾರಿಗೆ ನೌಕರರು ಮುಷ್ಕರ ನಡೆಸುತ್ತಿದ್ದು, ಕೆಲಸಕ್ಕೆ ಹಾಜರಾಗದಿದ್ದರೆ ಬಿಎಂಟಿಸಿ ನೌಕರರ ಮಾರ್ಚ್ ತಿಂಗಳ ಸಂಬಳ ಕಡಿತಗೊಳಿಸಲಾಗುವುದು ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕಿ ಶಿಖಾ ಪ್ರತಿಭಟನಾ ನಿರತ ನೌಕರರಿಗೆ ಎಚ್ಚರಿಕೆ ನೀಡಿದ್ದಾರೆ.

ಇದು ಎಚ್ಚರಿಕೆಯೋ ಅಥವಾ ಪ್ರತಿಭಟನೆಯ ಹಕ್ಕನ್ನು ಕಸಿಯುವ ಬೆದರಿಕೆಯೋ ತಿಳಿದಿಲ್ಲ, ಮುಷ್ಕರ ನಿರತ ನೌಕರರ ಮನವೊಲಿಕೆಗೆ ಸಾಕಷ್ಟು ಪ್ರಯತ್ನ ಮಾಡಿದ್ದೇವೆ. ಸಾರಿಗೆ ನಿಗಮಗಳು ಈಗಾಗಲೇ ನಷ್ಟದಲ್ಲಿವೆ.ಆದರೂ ನೌಕರರು ಪ್ರತಿಭಟನೆ ಮುಂದುವರೆಸಿದ್ದಾರೆ. ಅವರು ಕೆಲಸಕ್ಕೆ ಹಾಜರಾಗಬೇಕು. ಕೆಲಸಕ್ಕೆ ಬರದಿದ್ದರೆ ಮಾರ್ಚ್ ತಿಂಗಳ ವೇತನ ಕಡಿತಗೊಳಿಲಾಗುವುದು ಎಂದು ಎಚ್ಚರಿಸಿದ್ದಾರೆ.

ಇನ್ನು ಬೆಂಗಳೂರಿನಲ್ಲಿ ಮುಷ್ಕರದ ಹಿನ್ನೆಲೆಯಲ್ಲಿ ಇಂದು ಕೇವಲ 135 ಬಿಎಂಟಿಸಿ ಬಸ್ ಗಳು ಸಂಚಾರ ಮಾಡುತ್ತಿವೆ. ಖಾಸಗಿ ಬಸ್ ಗಳ ಮೂಲಕ ಸಂಚಾರ ನಡೆದಿದೆ ಎಂದು ಮಾಹಿತಿ ನೀಡಿದರು.

ಇತ್ತೀಚಿನ ಸುದ್ದಿ