ಪ್ರತಿಭಟನಕಾರರ ಮೇಲೆ ಪೊಲೀಸರ ಲಾಠಿ ಚಾರ್ಜ್: SDPI ಉಡುಪಿ ಜಿಲ್ಲೆ ಖಂಡನೆ - Mahanayaka
2:07 AM Wednesday 5 - February 2025

ಪ್ರತಿಭಟನಕಾರರ ಮೇಲೆ ಪೊಲೀಸರ ಲಾಠಿ ಚಾರ್ಜ್: SDPI ಉಡುಪಿ ಜಿಲ್ಲೆ ಖಂಡನೆ

udupi
23/09/2022

ಉಡುಪಿ: ನಿನ್ನೆ ಜನಪರ ಸಾಮಾಜಿಕ ಸಂಘಟನೆ PFI ಕಚೇರಿ ಹಾಗೂ ನಾಯಕರ  ಮನೆ ಮೇಲೆ ರಾತ್ರೋ ರಾತ್ರಿ ಅಕ್ರಮವಾಗಿ ನಡೆದ ದಾಳಿ ಹಾಗೂ ಬಂಧನ ಒಂದು ರಾಜಕೀಯ ಪ್ರೇರಿತ ಮತ್ತು ಕೇಂದ್ರ ಹಾಗೂ ರಾಜ್ಯ ಸರಕಾರಗಳ ವೈಫಲ್ಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ತಂತ್ರವಾಗಿದೆ ಎಸ್ ಡಿಪಿಐ ಎಂದು ಜಿಲ್ಲಾಧ್ಯಕ್ಷ B N ಶಾಹಿದ್ ಅಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

NIA ಯಂತಹ  ಸಾಂವಿಧಾನಿಕ ಸಂಸ್ಥೆ ಗಳ ದುರುಪಯೋಗ ಮತ್ತು PFI ಸಂಘಟನೆಯ ನಾಯಕರ ಅನ್ಯಾಯದ ಬಂಧನವನ್ನು ವಿರೋಧಿಸಿ ದೇಶಾದ್ಯಂತ ನಿನ್ನೆ ಪ್ರತಿಭಟನೆ ನಡೆಯಿತು. ಅಸಂವಿಧಾನಿಕ ಬಂಧನವನ್ನು ವಿರೋಧಿಸುವುದು ನಮ್ಮ ಸಾಂವಿಧಾನಿಕ ಹಕ್ಕು. ಅದರ ಭಾಗವಾಗಿ ಉಡುಪಿಯಲ್ಲಿ ನಡೆದ ಪ್ರತಿಭಟನೆಯಲ್ಲಿ PFI ಕಾರ್ಯಕರ್ತರ ಮೇಲೆ ಪೊಲೀಸರು ಯಾವುದೇ ಮುನ್ಸೂಚನೆ ನೀಡದೆ ಲಾಠಿ ಬೀಸಿದ್ದು ಹಾಗೂ “ಅವರಿಗೆ ಹೊಡೆಯಿರಿ, ಹೊಡೆಯಿರಿ” ಎಂದು ಪ್ರಚೋದನಾತ್ಮಕವಾಗಿ ಕೂಗಿದ ಕ್ರಮ  ಪೊಲೀಸರ ಆಶಿಸ್ತು ಹಾಗೂ ದರ್ಪವನ್ನು ತೋರಿಸುತ್ತದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪೊಲೀಸರ ಇಂತಹ ನಡೆಯನ್ನು ಉಡುಪಿ ಜಿಲ್ಲಾ SDPI  ಬಲವಾಗಿ ವಿರೋಧಿಸುತ್ತಾ ಇದನ್ನು ಖಂಡಿಸುತ್ತದೆ. ಹಾಗೂ ಮಾನ್ಯ ಪೊಲೀಸ್ ವರಿಷ್ಟಾಧಿಕಾರಿ ಗಳು ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧ್ಯಕ್ಷ ರಾಗಿರುವ B N ಶಾಹಿದ್ ಅಲಿ ಆಗ್ರಹಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ