ಪ್ರವಾಹ ರಕ್ಷಣಾ ಕಾರ್ಯಾಚರಣೆ ವೇಳೆ ಇಬ್ಬರು ಪೊಲೀಸರು ಸಾವು! - Mahanayaka

ಪ್ರವಾಹ ರಕ್ಷಣಾ ಕಾರ್ಯಾಚರಣೆ ವೇಳೆ ಇಬ್ಬರು ಪೊಲೀಸರು ಸಾವು!

assam police
20/06/2022

ಅಸ್ಸಾಂ: ಅಸ್ಸಾಂನಲ್ಲಿ ಪ್ರವಾಹ ರಕ್ಷಣಾ ಕಾರ್ಯಾಚರಣೆಯಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿರುವ ಘಟನೆ ನಡೆದಿದೆ. ಸೆಂಟ್ರಲ್ ಅಸ್ಸಾಂನ ನಾಗಾನ್ ಜಿಲ್ಲೆಯಲ್ಲಿ ಭಾನುವಾರ ಪ್ರವಾಹದಲ್ಲಿ ಸಿಲುಕಿ ಇವರು ಸಾವನ್ನಪ್ಪಿದ್ದಾರೆ.

ಭಾನುವಾರ ಮಧ್ಯರಾತ್ರಿ ಕಂಪುರ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳ ತಂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿತ್ತು.  ಇದೇ ವೇಳೆ ಎಸ್‌ ಐ ಸಮುಜ್ಜಲ್ ಕಾಕೋಡಿ ಮತ್ತು ಕಾನ್‌ ಸ್ಟೆಬಲ್ ರಾಜೀಬ್ ಬೋರ್ಡೊಲೊಯ್ ಆಕಸ್ಮಿಕವಾಗಿ ನೀರಿನ ಪ್ರವಾಹಕ್ಕೆ ಸಿಲುಕಿ ಕೊಚ್ಚಿ ಹೋಗಿದ್ದಾರೆ. ಇವತ್ತು ಬೆಳಿಗ್ಗೆ ಇಬ್ಬರ ಶವಗಳು ಪತ್ತೆಯಾಗಿವೆ.

ಅಸ್ಸಾಂನಲ್ಲಿ ಭಾರೀ ಪ್ರವಾಹದ ಎದುರಾಗಿದ್ದು, ಅಸ್ಸಾಂ ಮತ್ತು ಮೇಘಾಲಯದಲ್ಲಿ ಸಾವಿನ ಸಂಖ್ಯೆ 52ಕ್ಕೆ ಏರಿದೆ.  ರಾಜ್ಯದ ಪ್ರವಾಹ ಪರಿಸ್ಥಿತಿಯನ್ನು ಅವಲೋಕಿಸಲು ಮುಖ್ಯಮಂತ್ರಿ ಹಿಮಂತ ಬಿಶ್ವ ಶರ್ಮಾ ತುರ್ತು ಸಭೆ ಕರೆದಿದ್ದಾರೆ.  ಸಭೆಯಲ್ಲಿ ಸಚಿವರು, ಜಿಲ್ಲಾಧಿಕಾರಿಗಳು ಹಾಗೂ ಅಧಿಕಾರಿಗಳು ಭಾಗವಹಿಸಲಿದ್ದಾರೆ.


Provided by

4,462 ಗ್ರಾಮಗಳು ಜಲಾವೃತವಾಗಿವೆ ಎಂಬುದು ಕಂದಾಯ ಇಲಾಖೆಯ ಪ್ರಾಥಮಿಕ ಅಂದಾಜು.  ಲಕ್ಷಾಂತರ ಮಂದಿ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.  ಪ್ರವಾಹಕ್ಕೆ ಮನುಷ್ಯರ ಜತೆಗೆ ಪ್ರಾಣಿಗಳೂ ಕೊಚ್ಚಿ ಹೋಗುತ್ತಿವೆ.  ಕಾಜಿರಂಗ ರಾಷ್ಟ್ರೀಯ ಉದ್ಯಾನದಲ್ಲಿ ಪ್ರವಾಹಕ್ಕೆ ಚಿರತೆ ಸೇರಿದಂತೆ ಐದು ಪ್ರಾಣಿಗಳು ಸಾವನ್ನಪ್ಪಿವೆ.  ಅಸ್ಸಾಂನ ನೆರೆಯ ರಾಜ್ಯಗಳಾದ ಮೇಘಾಲಯ, ತ್ರಿಪುರಾ ಮತ್ತು ಅರುಣಾಚಲ ಪ್ರದೇಶದಲ್ಲಿ ಭಾರಿ ಪ್ರವಾಹದ ಭೀತಿ ಎದುರಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LSRN1q7jVDz3PsMb1GzrwE

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಇಂದು ಮಧ್ಯಾಹ್ನ ಕರ್ನಾಟಕಕ್ಕೆ ಪ್ರಧಾನಿ ಮೋದಿ ಆಗಮನ: ಏನೇನು ಕಾರ್ಯಕ್ರಮವಿದೆ?

ಬಜರಂಗದಳ ಮುಖಂಡನಿಗೆ ತಂಡದಿಂದ ಮಾರಣಾಂತಿಕ ಹಲ್ಲೆ!

ಪ್ರತಿಮೆಗಳ ಜೊತೆಗೆ ಇವರು ಹೇಗೆಲ್ಲ ಫೋಟೋ ತೆಗೆದುಕೊಳ್ಳುತ್ತಾರೆ ನೋಡಿ!

ಮೊದಲ ಬಾರಿಗೆ ತನ್ನ ಮಗುವಿನ ಚಿತ್ರ ಹಂಚಿಕೊಂಡ ಯುವರಾಜ್ ಸಿಂಗ್

ಇತ್ತೀಚಿನ ಸುದ್ದಿ