ಪ್ರವಾಹದಲ್ಲಿ ಸಿಲುಕಿ ನವವಧು ಸೇರಿದಂತೆ 7 ಮಂದಿ ನೀರುಪಾಲು!
ಹೈದರಾಬಾದ್: ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ತೆಲಂಗಾಣದಲ್ಲಿ ಪ್ರವಾಹ ಸೃಷ್ಟಿಯಾಗಿದ್ದು, ಇದೀಗ ಪ್ರವಾಹದಲ್ಲಿ ನವವಧು ಸೇರಿದಂತೆ ಏಳುಮಂದಿ ಕೊಚ್ಚಿಹೋದ ಘಟನೆ ನಡೆದಿದೆ.
ವಿಕಾರಾಬಾದ್ ನಲ್ಲಿ ನವವಿವಾಹಿತರಾದ ಪ್ರವಳಿಕಾ ಹಾಗೂ ನವಾಝ್ ರೆಡ್ಡಿ ವಿವಾಹ ಸಮಾರಂಭದಲ್ಲಿ ಭಾಗವಹಿಸಿ ವಾಪಸ್ ಆಗುತ್ತಿದ್ದ ನವವಧು ಸೇರಿದಂತೆ ಕುಟುಂಬಸ್ಥರು ಪ್ರವಾಹಕ್ಕೆ ಸಿಲುಕಿದ್ದಾರೆ. ನವವಧು, ಆಕೆಯ ನಾದಿನಿ ಶ್ವೇತಾ ಹಾಗೂ ಆಕೆಯ ಮಗ 8 ವರ್ಷ ವಯಸ್ಸಿನ ತ್ರಿನಾಥ ರೆಡ್ಡಿ ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿದ್ದು, ಇವರ ಮೃತದೇಹಗಳ ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದು ಬಂದಿದೆ.
ತೀವ್ರ ಮಳೆಯ ಕಾರಣ ತೆಲಂಗಾಣದಲ್ಲಿ ಪ್ರವಾಹ ಏರ್ಪಟ್ಟಿದ್ದು, ಹಲವಾರು ಕಡೆಗಳಲ್ಲಿ ಪ್ರಾಣ ಹಾನಿ ಸಂಭವಿಸಿದೆ. ವಾರಂಗಲ್ ಪ್ರದೇಶದ ಚರಂಡಿಯಲ್ಲಿ ಸಾಫ್ಟ್ ವೇರ್ ಕಂಪೆನಿಯ ಎಂಜಿನಿಯರ್ ಕ್ರಾಂತಿ ಕುಮಾರ್ ಎಂಬವರ ಮೃತದೇಹ ಕೂಡ ಪತ್ತೆಯಾಗಿದೆ. ಇನ್ನೂ ಶಂಕರಪಲ್ಲಿಯಲ್ಲಿ ಕಾರಿನಲ್ಲಿದ್ದ 70 ವರ್ಷ ವಯಸ್ಸಿನ ವೃದ್ಧ ಹಾಗೂ ಆದಿಲಾಬಾದ್ ನಲ್ಲಿ 30 ವರ್ಷ ವಯಸ್ಸಿನ ಕಾರ್ಮಿಕ ಕೂಡ ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ಸಾವನ್ನಪ್ಪಿದ್ದಾರೆ.
ಇನ್ನೂ ರಾಜಣ್ಣ, ಸಿರ್ಸಿಲ್ಲಾ ಜಿಲ್ಲೆಯಲ್ಲಿ ಪ್ರವಾಹದಲ್ಲಿ ರಾಜ್ಯ ಸಾರಿಗೆ ಬಸ್ಸೊಂದು ಸಿಲುಕಿದ್ದು, 12 ಮಂದಿ ಪ್ರಯಾಣಿಕರನ್ನು ರಕ್ಷಿಸಲಾಗಿದೆ. ತೆಲಂಗಾಣದ ವಿವಿಧ ಪ್ರದೇಶಗಳಲ್ಲಿ ಮತ್ತೆ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಹೈದರಾಬಾದ್, ಆದಿಲಾಬಾದ್, ನಿಜಾಮಾಬಾದ್, ಕರೀಂನಗರ, ವಾರಂಗಲ್ ಮತ್ತು ಖಮ್ಮಂನಲ್ಲಿ ಗುಡುಗು ಸಹಿತ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇನ್ನಷ್ಟು ಸುದ್ದಿಗಳು…
ಅಪಘಾತದಲ್ಲಿ ಶಾಸಕರ ಪುತ್ರ ಸೇರಿದಂತೆ 7 ಮಂದಿ ಸಾವು | ಅಪಘಾತಕ್ಕೂ ಮೊದಲು ಎಚ್ಚರಿಕೆ ನೀಡಿದ್ದ ಪೊಲೀಸರು
ಅಫ್ಘಾನ್ ಪ್ರಜೆಯನ್ನು ಹೆಲಿಕಾಫ್ಟರ್ ನಲ್ಲೇ ನೇಣಿಗೇರಿಸಿದ ತಾಲಿಬಾನಿಗಳು
ಏಳೆಂಟು ವರ್ಷದ ಪ್ರೀತಿ ನಡು ರಸ್ತೆಯಲ್ಲಿ ದುರಂತ ಅಂತ್ಯ! | ಪ್ರಿಯತಮೆಯ ಕತ್ತು ಸೀಳಿ, ತನ್ನ ಕತ್ತನ್ನೂ ಸೀಳಿಕೊಂಡ!
ಮಗುವಿಗೆ ಚಪ್ಪಲಿಯಲ್ಲಿ ಹೊಡೆದು ಚಿತ್ರ ಹಿಂಸೆ ನೀಡಿದ್ದ ತಾಯಿ ಅರೆಸ್ಟ್!
ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಮುಂದುವರಿಕೆ | ಆರ್.ಅಶೋಕ್
ನಡು ರಸ್ತೆಯಲ್ಲಿ ಯುವತಿಯ ಕತ್ತು ಕೊಯ್ದು, ತಾನೂ ಕತ್ತು ಸೀಳಿಕೊಂಡ ಯುವಕ