ಪ್ರವಾಹಕ್ಕೆ ನಲುಗಿದ ಆಂಧ್ರಪ್ರದೇಶ: 17 ಮಂದಿ ಸಾವು, 100ಕ್ಕೂ ಅಧಿಕ ಮಂದಿ ನಾಪತ್ತೆ
ಆಂಧ್ರಪ್ರದೇಶ: ತೀವ್ರ ಮಳೆಗೆ ರಾಯಲಸೀಮೆ ನಲುಗಿ ಹೋಗಿದ್ದು, ಚಿತ್ತೂರು, ಕಡಪ, ಕರ್ನೂಲು, ಅನಂತಪುರ ಜಿಲ್ಲೆಗಳಲ್ಲಿ ಪ್ರವಾಪ ಪರಿಸ್ಥಿತಿ ಉಂಟಾಗಿದೆ. ಈವರೆಗೆ ಪ್ರವಾಹದಿಂದಾಗಿ ಆಂಧ್ರಪ್ರದೇಶದಲ್ಲಿ 17 ಮಂದಿ ಪ್ರಾಣ ಕಳೆದುಕೊಂಡಿದ್ದು, 100ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಕಡಪ ಜಿಲ್ಲೆಯಲ್ಲಿ ಮೂರು ಬಸ್ ಗಳು ಪ್ರವಾಹದಲ್ಲಿ ಸಿಲುಕಿಕೊಂಡ ಪರಿಣಾಮ 12 ಮಂದಿ ಪ್ರಾಣ ಕಳೆದುಕೊಂಡಿದ್ದು, 18 ಮಂದಿ ನಾಪತ್ತೆಯಾಗಿದ್ದಾರೆ. ಇಲ್ಲಿನ ಮಂದಪಲ್ಲೆ, ಅಕೆಪಡು ಹಾಗೂ ನಂದಲೂರ್ ಗ್ರಾಮಗಳಲ್ಲಿ ಬಸ್ ಪ್ರವಾಹಕ್ಕೆ ಸಿಲುಕಿದ್ದರಿಂದಾಗಿ ಈ ದುರಂತ ಸಂಭವಿಸಿದೆ.
ಇನ್ನೂ ಅನಂತಪುರ ಜಿಲ್ಲೆಯ ವೆಲ್ದುರ್ತಿ ಗ್ರಾಮದ ಚಿತ್ರಾವತಿ ನದಿಯ ಪ್ರವಾಹದಲ್ಲಿ ಸಿಲುಕಿದ್ದ 10 ಮಂದಿಯನ್ನು ಭಾರತೀಯ ವಾಯುಪಡೆ ಸೇನೆ ಹೆಲಿಕಾಫ್ಟರ್ ಗಳ ಮೂಲಕ ರಕ್ಷಿಸಿದ್ದು, ಈಗಾಗಲೇ ಎನ್ ಡಿಆರ್ ಎಫ್, ಎಸ್ ಡಿಆರ್ ಎಫ್, ಅಗ್ನಿಶಾಮಕದಳ ಸೇರಿದಂತೆ ಎಲ್ಲ ಇಲಾಖೆಗಳು ರಕ್ಷಣಾ ಕಾರ್ಯಾಚರಣೆಗೆ ಇಳಿದಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಆಟೋ—ಲಾರಿ ನಡುವೆ ಭೀಕರ ಅಪಘಾತ: ಇಬ್ಬರು ಮಕ್ಕಳ ಸಹಿತ ಐವರ ದಾರುಣ ಸಾವು
ಅಪ್ರಾಪ್ತೆಯೊಂದಿಗೆ ಪ್ರೀತಿಯಲ್ಲಿ ಬಿದ್ದಿದ್ದ ಯುವಕ ಆತ್ಮಹತ್ಯೆಗೆ ಶರಣು
ಮಂಗಳೂರು: 1.92 ಕೋ.ರೂ. ಮೌಲ್ಯದ ಅಮಾನ್ಯ ನೋಟುಗಳು ಪತ್ತೆ
ಕೃಷಿ ಕಾಯ್ದೆ ವಾಪಸ್ | ಪತ್ರಕರ್ತರ ಪ್ರಶ್ನೆಗೆ ನಿರುತ್ತರವಾಗಿ ಮುಂದೆ ನಡೆದ ಸಚಿವೆ ಶೋಭಾ ಕರಂದ್ಲಾಜೆ
ಬಜ್ಪೆಯ ಪೊರ್ಕೋಡಿಯಲ್ಲಿ ದಲಿತ -ಮುಸ್ಲಿಂ ಸ್ನೇಹ ಸಮ್ಮಿಲನ
ಮಳೆ ಅನಾಹುತ: ಬಹುಮಹಡಿ ಕಟ್ಟಡದ ಗೋಡೆ ಕುಸಿದು 9 ಮಂದಿಯ ದಾರುಣ ಸಾವು
ವಿವಾದಿತ ಕಾಯ್ದೆ ವಾಪಸ್ ಪಡೆಯುತ್ತೇವೆ ಎಂದರೂ ಆಂದೋಲನ ಮುಂದುವರಿಸಿದ ರೈತರು: ಕಾರಣ ಏನು ಗೊತ್ತಾ?
ಭಾರೀ ಮಳೆಗೆ ಬೆಂಗಳೂರಿನಲ್ಲಿ ಕುಸಿದು ಬಿದ್ದ ಮನೆ | ಮನೆಯಲ್ಲಿದ್ದವರು ಮಾಡಿದ್ದೇನು?