“ನನಗೆ ‘ಓಂ ಶಾಂತಿ’ ಹೇಳಿ ನನ್ನ ಕುಟುಂಬಕ್ಕೆ ಅನುಕಂಪ ತೋರಿಸೋದು ಬೇಡ”
ಸಾವಿನ ಮನೆಯಲ್ಲೂ ಶಾಸಕ ಹರೀಶ್ ಪೂಂಜಾಗೆ ಬಿಲ್ಡಪ್ ಕೊಡ್ಬೇಕಾ?
ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ವಿವಿಧೆಡೆ ಕಾರ್ಯಕರ್ತರಿಂದ ರಾಜೀನಾಮೆ
ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವಾಗಲೇ ಪಕ್ಷದ ಮುಖಂಡ ಪ್ರವೀಣ್ ನೆಟ್ಟಾರ್ ಹತ್ಯೆ ನಡೆದಿರುವುದು ಬಿಜೆಪಿ ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸಿದ್ದು, ಇದೀಗ ರಾಜ್ಯದ ವಿವಿಧೆಡೆಗಳಲ್ಲಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಬಿಜೆಪಿಗೆ ಕಾರ್ಯಕರ್ತರು ರಾಜೀನಾಮೆ ನೀಡಲು ಆರಂಭಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯಲ್ಲೂ ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಸರ್ಕಾರದ ವಿರುದ್ಧವೇ ಆಕ್ರೋಶ ಹೊರಹಾಕಿ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಹಿಂದುತ್ವದ ಆಧಾರದ ಮೇಲೆ ಅಧಿಕಾರಕ್ಕೆ ಬಂದ ಬಿಜೆಪಿಗೆ ಹಿಂದೂ ಕಾರ್ಯಕರ್ತರು ಹಾಗೂ ಪಕ್ಷದ ಕಾರ್ಯಕರ್ತರನ್ನು ಉಳಿಸಿಕೊಳ್ಳಲು ಆಗುತ್ತಿಲ್ಲ. ಇದು ದುರಂತ ಎಂದು ಚಿಕ್ಕಮಗಳೂರು ಜಿಲ್ಲಾ ಬಿಜೆಪಿ ಯುವ ಮೋರ್ಚಾ ಸರ್ಕಾರದ ವಿರುದ್ಧವೇ ಕಿಡಿಕಾರಿದೆ.
ಪ್ರವೀಣ್ ನೆಟ್ಟಾರ್ ಹತ್ಯೆ ಖಂಡಿಸಿ ತುಮಕೂರು ಜಿಲ್ಲಾ ಬಿಜೆಪಿ ಸಾಮಾಜಿಕ ಜಾಲತಾಣ ಪ್ರಕೋಷ್ಠದ ಜಿಲ್ಲಾ ಸಹ ಸಂಚಾಲಕಿ ಶಕುಂತಲಾ ನಟರಾಜ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದಲ್ಲದೇ ಅವರು ತಮ್ಮ ರಾಜೀನಾಮೆ ಪತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿಕೊಂಡಿದ್ದು, “ಮುಂದಿನ ದಿನಗಳಲ್ಲಿ ಬೀದಿ ಹೆಣವಾಗಿ ನನ್ನ ಸಂಸಾರಕ್ಕೆ ಇನ್ಯಾರೋ ಹಣ ಹಾಕಿ, ಓಂ ಶಾಂತಿ ಹೇಳಿ ಅನುಕಂಪ ತೋರಿಸೋ ಪರಿಸ್ಥಿತಿಗೆ ತಲುಪಲು ಇಷ್ಟವಿಲ್ಲದ ಕಾರಣ ಜವಾಬ್ದಾರಿಯಿಂದ ಮುಕ್ತಳಾಗುತ್ತಿದ್ದೇನೆ” ಎಂದು ಅವರು ಬರೆದುಕೊಂಡಿದ್ದಾರೆ.
ಇನ್ನೂ ತುಮಕೂರು ಜಿಲ್ಲೆಯಲ್ಲಿ ಬಿಜೆಪಿ ಮುಖಂಡರ ರಾಜೀನಾಮೆ ಮುಂದುವರಿದಿದ್ದು, ಬಿಜೆಪಿ ಜಿಲ್ಲಾ ಸಾಮಾಜಿಕ ಜಾಲತಾಣ ಪ್ರಕೋಷ್ಟಕದ ಸದಸ್ಯರ ಸ್ಥಾನಕ್ಕೆ ಕಿರಣ್ ಹಾಗೂ ರಕ್ಷಿತ್ ರಾಜೀನಾಮೆ ನೀಡಿದ್ದಾರೆ. ಪಕ್ಷದಲ್ಲಿ ಕಾರ್ಯಕರ್ತರಿಗೆ ರಕ್ಷಣೆಯಿಲ್ಲವೆಂದು ರೈತ ಮೋರ್ಚ ಪ್ರಧಾನ ಕಾರ್ಯದರ್ಶಿ ಹಾಲೇಗೌಡ ಕೂಡ ಬಿಜೆಪಿಗೆ ರಾಜೀನಾಮೆ ನೀಡಿದ್ದಾರೆ.
ಹರೀಶ್ ಪೂಂಜಾ ವೈಭವೀಕರಣದ ವಿರುದ್ಧ ಆಕ್ರೋಶ:
ವಿವಾದಿತ ವಿಡಿಯೋ:
View this post on Instagram
ಪ್ರವೀಣ್ ಅಂತಿಮ ದರ್ಶನದ ವೇಳೆ ಆಕ್ರೋಶಿತರ ಪೈಕಿ ವ್ಯಕ್ತಿಯೋರ್ವ ಹರೀಶ್ ಪೂಂಜಾ ಬಗ್ಗೆ ಹೊಗಳಿ ಮಾತನಾಡಿದ್ದು, ಈ ವಿಡಿಯೋಗೆ ಕೆಜಿಎಫ್ ನ ಧೀರ, ಧೀರ ಎನ್ನುವ ಹಾಡನ್ನು ಎಡಿಟ್ ಮಾಡಿ ಹರೀಶ್ ಪೂಂಜಾ ಅವರನ್ನು ವೈಭವೀಕರಿಸಲಾಗಿದೆ ಎಂದು ಕಾರ್ಯಕರ್ತರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ನಮ್ಮ ಬಿಲ್ಲವೆರ್’ ಎಂಬ ಫೇಸ್ ಬುಕ್ ಪೇಜ್ ನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದ್ದು, “ಬೆಳ್ತಂಗಡಿ ತಾಲೂಕಿನ ಇಳಂತಿಲ ಬಿಜೆಪಿ ಕಾರ್ಯಕರ್ತ ಟೀವಿ ಯವರ ಮುಂದೆ ಬಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ನನ್ನು ಸಾವಿನ ಮೆರವಣಿಗೆಯಲ್ಲಿ ಹೊಗಳುವುದು ಎಂದರೆ ಇದು ಎಲ್ಲವೂ ಪೂರ್ವ ನಿರ್ಧಾರಿತ ಮತ್ತು ಪ್ರಚಾರದ ತೆವಲು ಎಂದು ಹೇಳಿದೆ.
ಇಂತಹ ಪ್ರಚಾರ ಪ್ರಿಯರು ಇರುವುದರಿಂದಲೇ ಇದುವರೆಗೆ ಪ್ರಶಾಂತ್ ಪೂಜಾರಿ, ಶರತ್ ಮಡಿವಾಳ, ದೀಪಕ್ ರಾವ್ ಇನ್ನೂ ಹಲವಾರು ಕಾರ್ಯರ್ತರ ಹತ್ಯೆ ಮಾಡಿದವರಿಗೆ ಇದುವರೆಗೆ ಯಾವುದೇ ಶಿಕ್ಷೆ ಆಗಲಿಲ್ಲ. ಎಲ್ಲರೂ ಬೇಲ್ ಮೇಲೆ ರಾಜಾರೋಷವಾಗಿ ತಿರುಗಾಡುತ್ತಾ ಇದ್ದಾರೆ.
ಬಿಜೆಪಿ ಪಕ್ಷದಲ್ಲಿ ಇಂತಹ ಕೇಸ್ ಗಳನ್ನು ನೋಡಿಕೊಳ್ಳಲು ಒಂದು ವಕೀಲರ ತಂಡವೇ ಇಲ್ಲ, ಯಾವುದೇ ಕಾನೂನಾತ್ಮಕ ಸಲಹೆ ನೀಡುವ ಮೋರ್ಚಾಗಳೇ ಇಲ್ಲ. ಕೇವಲ ಪ್ರಚಾರ ಸಣ್ಣ ಸಣ್ಣ ವಿಚಾರದಲ್ಲೂ ಪ್ರಚಾರ ಇದೇ ಇವರ ಚಾಳಿ. ಗೂಡಂಗಡಿಯಲ್ಲಿ ಚಾ ಕುಡಿದರೆ ಪ್ರಚಾರ, ಹಿರಿಯರ ಕಾಲಿಗೆ ಬಿದ್ದರೆ ಪ್ರಚಾರ, ಸಾವಿನಲ್ಲಿ ಪ್ರಚಾರ ಇದೇ ಇವರ ಜೀವನ ಆಗಿ ಹೋಗಿದೆ.
ರಾಜ್ಯ ಬಿಜೆಪಿಗೆ ನಮ್ಮದೂ ಒಂದು ಚಾಲೆಂಜ್ ನಿಮ್ಮ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ಯಾರಾದರೂ ಹಿಂದೂ ಯುವಕರ ಹತ್ಯೆ ಮಾಡಿದವರಿಗೆ ಒಂದೇ ಒಂದು ಕಠಿಣ ಶಿಕ್ಷೆ ಆದ ಬಗ್ಗೆ ಮಾಹಿತಿ ನೀಡಿ. ಯಾವುದಾದರೂ ಕೇಸ್ ಕೊನೆಯ ಘಟ್ಟ ತಲುಪಿ ಶಿಕ್ಷೆ ಆದ ಬಗ್ಗೆ ಮಾಹಿತಿ ನೀಡಿ. ಇದರಲ್ಲಿ ನಿಮ್ಮ ಪ್ರಚಾರದ ಚಾಳಿಯನ್ನು ತೋರಿಸಿ ಎಂದು ಬರೆಯಲಾಗಿದೆ.
ಹರೀಶ್ ಪೂಂಜಾ ಅವರನ್ನು ವೈಭವೀಕರಿಸಿದ ವಿಡಿಯೋಗೆ ವಿವಿಧ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದ್ದು, ವಾಟ್ಸಾಪ್ ಗ್ರೂಪ್ ಗಳಲ್ಲಿ ಬಿಜೆಪಿ ಕಾರ್ಯಕರ್ತರೇ ತರಾಟೆಗೆತ್ತಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka