ದಲಿತ್ ಸೇವಾ ಸಮಿತಿ ವತಿಯಿಂದ ಪ್ರವೀಣ್ ನೆಟ್ಟಾರು, ಮಸೂದ್ ಮನೆಗೆ ಭೇಟಿ, ಕುಟುಂಬಕ್ಕೆ ಸಾಂತ್ವನ

ಪುತ್ತೂರು: ದ.ಕ.ಜಿಲ್ಲಾ ದಲಿತ್ ಸೇವಾ ಸಮಿತಿ (ರಿ)ವಿಟ್ಲ ಹಾಗೂ ತಾಲೂಕು ಶಾಖೆ ಪುತ್ತೂರು ಮತ್ತು ಕಡಬ ಇದರ ವತಿಯಿಂದ ಭಾನುವಾರ ಪ್ರವೀಣ್ ನೆಟ್ಟಾರ್ ಬೆಳ್ಳಾರೆ ಮತ್ತು ಮಸೂದ್ ಅವರ ಮನೆಗೆ ಭೇಟಿ ನೀಡಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಲಾಯಿತು.
ಮಸೂದ್ ಮನೆಗೆ ಭೇಟಿ
ಸಂಘಟನೆಯ ಸ್ಥಾಪಕಧ್ಯಕ್ಷರಾದ ಬಿ. ಕೆ. ಸೇಸಪ್ಪ ಬೆದ್ರಕಾಡು ನೇತೃತ್ವದಲ್ಲಿ ಭೇಟಿ ನೀಡಿದ ಸಂಘಟನೆಯು, ಕುಟುಂಬಕ್ಕೆ ಸಾಂತ್ವನ ಹೇಳಿತಲ್ಲದೇ, ನೊಂದ ಕುಟುಂಬಕ್ಕೆ ಪರಿಹಾರ ನೀಡಬೇಕು, ಆರೋಪಿಗಳ ಆಸ್ತಿ ಮುಟ್ಟುಗೋಲು ಹಾಕುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಭರವಸೆ ನೀಡಿದರು.
ಪ್ರವೀಣ್ ನೆಟ್ಟಾರು ಮನೆಗೆ ಭೇಟಿ
ಈ ಸಂದರ್ಭದಲ್ಲಿ ಸಂಘಟನೆಯ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ್ ಯು.ವಿಟ್ಲ, ಜಿಲ್ಲಾ ಗೌರವಧ್ಯಕ್ಷರಾದ ಸೋಮಪ್ಪ ನಾಯ್ಕ ಮಲ್ಯ, ಜಿಲ್ಲಾ ಮಹಿಳಾ ಉಪಾಧ್ಯಕ್ಷೆ ಯಾಮಿನಿ ಬೆಟ್ಟಂಪಾಡಿ, ಜಿಲ್ಲಾ ಗೌರವ ಸಲಹೆಗಾರರಾದ ಕುಶಲಪ್ಪ ಮೂಡಂಬೈಲು, ಪುತ್ತೂರು ತಾಲೂಕು ಶಾಖಾಧ್ಯಕ್ಷರಾದ ಬಿ.ಕೆ. ಅಣ್ಣಪ್ಪ ಕಾರೆಕ್ಕಾಡು, ಪುತ್ತೂರು ತಾಲೂಕು ಮಹಿಳಾ ಘಟಕದ ಅಧ್ಯಕ್ಷೆಯಾದ ಲಲಿತಾ ನಾಯ್ಕ ಕಾರ್ಪಡಿ, ಕಡಬ ತಾಲೂಕು ಶಾಖಾಧ್ಯಕ್ಷರಾದ ಯಶವಂತ್, ಪತ್ರಕರ್ತ ರಾಜೇಶ್ ನೆತ್ತೋಡಿ, ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಸಂಘ ಕೆದಿಲ ಇದರ ಅಧ್ಯಕ್ಷರಾದ ಮಾರಪ್ಪ ಸುವರ್ಣ, ಬಂಟ್ವಾಳ ತಾಲೂಕು ಶಾಖೆ ಇದರ ಪ್ರಧಾನ ಕಾರ್ಯದರ್ಶಿಯಾದ ಬಿ.ಕೆ. ಪ್ರಸಾದ್ ಅನಂತಾಡಿ ಮತ್ತು ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.
ಪ್ರವೀಣ್ ನೆಟ್ಟಾರು ಅಗಲಿಕೆಯ ನೋವಿನಲ್ಲಿ ಕುಟುಂಬಸ್ಥರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka