ರೈಲಿನಲ್ಲಿ ಪ್ರಯಾಣಿಕನಿಗೆ ಬೂಟುಗಾಲಿನಿಂದ ಒದ್ದ ಕೇರಳ ಪೊಲೀಸ್!
ತಿರುವನಂತಪುರಂ: ರೈಲಿನಲ್ಲಿ ಟಿಕೆಟ್ ಪಡೆಯದೇ ಪ್ರಯಾಣಿಸಿದ ಎಂಬ ಕಾರಣಕ್ಕಾಗಿ ಪೊಲೀಸ್ ಅಧಿಕಾರಿಯೊಬ್ಬ ಪ್ರಯಾಣಿಕನನ್ನು ಬೂಟುಗಾಲಿನಿಂದ ಒದ್ದು ಅಮಾನವೀಯತೆ ಮೆರೆದ ಘಟನೆ ಕೇರಳದಲ್ಲಿ ನಡೆದಿದೆ.
ಈ ಘಟನೆ ಭಾನುವಾರ ನಡೆದಿದ್ದು, ಪೊಲೀಸರು ಕಣ್ಣೂರಿನಿಂದ ಮಾವೇಲಿ ಎಕ್ಸ್ ಪ್ರೆಸ್ ಹತ್ತಿದ್ದು, ಈ ವೇಳೆ ಅವರು ಪ್ರಯಾಣಿಕರ ಟಿಕೆಟ್ ಚೆಕ್ ಮಾಡಿದ್ದು, ಈ ವೇಳೆ ವ್ಯಕ್ತಿಯ ಬಳಿ ಟಿಕೆಟ್ ಇರಲಿಲ್ಲ ಎನ್ನಲಾಗಿದೆ.
ಪೊಲೀಸರನ್ನು ಕಂಡು ಭೀತಿಯಲ್ಲಿದ್ದ ವ್ಯಕ್ತಿ ಮದ್ಯಪಾನ ಮಾಡಿದ್ದಾನೆ ಅಂದು ಕೊಂಡು ಪೊಲೀಸರು ಆತನ ಮೇಲೆ ದರ್ಪತೋರಿಸುತ್ತಿರುವುದು ಕಂಡು ಬಂದಿದೆ. ಪ್ರಯಾಣಿಕನನ್ನು ಬೂಟುಗಾಲಿನಿಂದ ಒದ್ದು, ಪೊಲೀಸ್ ಅಧಿಕಾರಿ ನೆಲಕ್ಕೆ ಬೀಳಿಸುತ್ತಿರುವ ಸುಮಾರು 20 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನೂ ಘಟನೆಯ ವಿರುದ್ಧ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಕೃತ್ಯ ಎಸಗಿದ ಪೊಲೀಸ್ ಅಧಿಕಾರಿಯನ್ನು ಕರ್ತವ್ಯದಿಂದ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ರಾಜ್ಯದಲ್ಲಿ ಲಾಕ್ ಡೌನ್ ಆಗುತ್ತಾ? | ಬಣ್ಣದ ವರದಿಗಳ ನಡುವೆ ವಾಸ್ತವ ಸ್ಥಿತಿ ಏನು?
ಪ್ರಧಾನಿ ಮೋದಿಗೆ ಕಪ್ಪು ಬಾವುಟ ಪ್ರದರ್ಶಿಸಿದ್ದ ಕಾಂಗ್ರೆಸ್ ಮುಖಂಡೆಯ ಮೇಲೆ ಗುಂಡಿನ ದಾಳಿ
ಗರ್ಭಿಣಿ ಪತ್ನಿ ಮನೆಯಲ್ಲಿರುವಾಗಲೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾದ ಇನ್ಸ್ ಪೆಕ್ಟರ್
ಮಹಿಳೆಯರ ಅಶ್ಲೀಲ ಚಿತ್ರ ಹರಾಜು ಹಾಕುತ್ತಿದ್ದ ‘ಬುಲ್ಲಿ ಬಾಯ್ಸ್ ಆ್ಯಪ್’ ನಿಷೇಧ
ಅಶ್ವತ್ಥ ನಾರಾಯಣನಿಗೂ ರಾಮನಗರಕ್ಕೂ ಏನು ಸಂಬಂಧ? | ಡಿ.ಕೆ.ಶಿವಕುಮಾರ್ ಪ್ರಶ್ನೆ