ಪ್ರೀತಿಗೆ ಜಾತಿ ಅಡ್ಡಿ: ವಿಷ ಸೇವಿಸಿದ ಪ್ರೇಮಿಗಳು | ಪ್ರಿಯಕರ ದಾರುಣ ಸಾವು - Mahanayaka
4:14 PM Thursday 12 - December 2024

ಪ್ರೀತಿಗೆ ಜಾತಿ ಅಡ್ಡಿ: ವಿಷ ಸೇವಿಸಿದ ಪ್ರೇಮಿಗಳು | ಪ್ರಿಯಕರ ದಾರುಣ ಸಾವು

suicide
09/11/2021

ಶಿವಮೊಗ್ಗ: ದೇಶಕ್ಕೆ ಅದೇನು ಸ್ವಾತಂತ್ರ್ಯ ಬಂದಿದೆಯೋ ಗೊತ್ತಿಲ್ಲ. ಎಲ್ಲದಕ್ಕೂ ಮೊದಲು ಜಾತಿಯನ್ನೇ ಕೇಳುವ ವಿಕೃತರು ಇನ್ನೂ ಈ ಸಮಾಜದಲ್ಲಿವೆ. ಪ್ರೀತಿಗೆ ಜಾತಿ ಅಡ್ಡಿಯಾಗಿ ಸಾವಿಗೆ ಶರಣಾದವರೆಷ್ಟು ಎಂದು ಅಧ್ಯಯನ ನಡೆಸಿದರೆ, ಜಾತಿ ವ್ಯವಸ್ಥೆಯ ಕರಾಳ ಮುಖ ಎಷ್ಟಿದೆ ಎನ್ನುವುದು ಅರಿವಿಗೆ ಬರಬಹುದು.

ಶಿವಮೊಗ್ಗ ಜಿಲ್ಲೆಯಲ್ಲಿ ಇಬ್ಬರು ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿದ್ದು, ಈ ಪೈಕಿ ಪ್ರಿಯಕರ ಮೃತಪಟ್ಟು, ಪ್ರೇಯಸಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾಳೆ. ಇವರಿಬ್ಬರು ಪರಸ್ಪರ ಬಿಟ್ಟಿರಲಾರದಷ್ಟು ಪ್ರೀತಿಸುತ್ತಿದ್ದರು. ಆದರೆ, ಜಾತಿಯ ಕಾರಣಕ್ಕಾಗಿ ಇವರಿಬ್ಬರ ಮದುವೆಗೆ  ಎರಡೂ ಕಡೆಯವರು ಒಪ್ಪಲಿಲ್ಲ ಎನ್ನಲಾಗಿದೆ. ಇದರಿಂದ ನೊಂದು ಬೇರೆಯಾಗಿ ಬದುಕುವುದಿಲ್ಲ ಎಂದು ಪ್ರೇಮಿಗಳಿಬ್ಬರು ವಿಷ ಸೇವಿಸಿದ್ದಾರೆ ಎಂದು ತಿಳಿದು ಬಂದಿದೆ.

ಇಲ್ಲಿನ ಚೋರಡಿ ಸಮೀಪರ ರಾಮನಗರ ನಿವಾಸಿ 23 ವರ್ಷ ವಯಸ್ಸಿನ ಶ್ರೀನಿವಾಸ್ ಹಾಗೂ 21 ವರ್ಷ ವಯಸ್ಸಿನ ವೀಣಾ ವಿಷ ಸೇವಿಸಿದ ಪ್ರೇಮಿಗಳಾಗಿದ್ದಾರೆ. ನಿನ್ನೆ ಹೊರಬೈಲಿಗೆ ಹೋಗುವ ಮಾರ್ಗದ ಹೆಗ್ಗನಕೆರೆ ಬಳಿಯಲ್ಲಿ ಇವರಿಬ್ಬರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸ್ಥಳೀಯರು ಇವರನ್ನು ಆಸ್ಪತ್ರೆಗೆ ದಾಖಲಿಸಿದ್ದರು. ಇಂದು ಬೆಳಗ್ಗೆ ಶ್ರೀನಿವಾಸ್ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BRIYGgDbk8oI4UQjEMqwIG

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ