ಪ್ರಾಮಿಸ್ ಡೇ! | ಪ್ರೀತಿ ಹೇಳಲು ಬಂದ, ಯುವತಿಯನ್ನು ಗುಂಡಿಟ್ಟು ಕೊಂದ - Mahanayaka
5:11 PM Thursday 12 - December 2024

ಪ್ರಾಮಿಸ್ ಡೇ! | ಪ್ರೀತಿ ಹೇಳಲು ಬಂದ, ಯುವತಿಯನ್ನು ಗುಂಡಿಟ್ಟು ಕೊಂದ

13/02/2021

ರಾಯ್ಪುರ: ಬಹುದಿನಗಳ ಪರಿಚಯವನ್ನು ಆತ ಪ್ರೀತಿ ಅಂದುಕೊಂಡ. ಆದರೆ, ಆಕೆ ಸ್ನೇಹ ಅಂದು ಕೊಂಡಿದ್ದಳಂತೆ. ತನ್ನ ಪ್ರೀತಿಯನ್ನು ಹೇಳಲು ಆತ ಫೆ.12ರ ಪ್ರಾಮಿಸ್ ಡೇಗಾಗಿ ಕಾದು ಕುಳಿತಿದ್ದ. ಅಂತೂ ತನ್ನ ಪ್ರೀತಿಯನ್ನು ಹೇಳಲು ಹೊರಟೇ ಬಿಟ್ಟ. ಆದರೆ ಅಲ್ಲಿ ನಡೆದದ್ದು ಮಾತ್ರ ಬೇರೆಯೇ….

ಈ ಘಟನೆ ನಡೆದದ್ದು, ಛತ್ತೀಸ್ಗಢದ ಮಹಾಸಮುಂದ್ ನಲ್ಲಿ ನಡೆದಿದ್ದು,  ರೂಪಾ ಮತ್ತು ಚಂದ್ರಶೇಖರ್ ಎಂಬಾತನ ನಡುವೆ ನಡೆದ ವನ್ ಸೈಡ್ ಲವ್ ಸ್ಟೋರಿ. ದುರಂತ ಅಂತ್ಯ ಕಂಡಿದೆ.  ಫೆ.12ರಂದು ತನ್ನ ಪ್ರೀತಿಯನ್ನು ಹೇಳಲು ಚಂದ್ರಶೇಖರ್ ತನ್ನ ಸ್ನೇಹಿತರೊಂದಿಗೆ ಬಂದಿದ್ದಾನೆ. ಇತ್ತ ರೂಪಾ ತನ್ನ ಸಹೋದರಿ ಹೇಮಲತಾ ಜೊತೆ ಔಷಧಿಕೊಳ್ಳಲು ಮಾರುಕಟ್ಟೆಗೆ ಬಂದಿದ್ದಾಳೆ.

ಇದೇ ಸಂದರ್ಭದಲ್ಲಿ ರೂಪಳಿಗಾಗಿ ಕಾದು ಕುಳಿತಿದ್ದ ಚಂದ್ರಶೇಖರ್ ತನ್ನ ಸ್ನೇಹಿತರ ಜೊತೆಗೆ  ರೂಪಾಳ ಬಳಿ ಬಂದಿದ್ದು, ಆಕೆಗೆ ತಾನು ಪ್ರೀತಿಸುತ್ತಿರುವ ವಿಚಾರ ತಿಳಿಸಿದ್ದಾನೆ. ಆದರೆ, ಪ್ರೀತಿಯನ್ನು ರೂಪಾ ತಿರಸ್ಕರಿದ್ದಾಳೆ. ಸ್ನೇಹಿತರ ಎದುರೇ ಇಂತಹ ಘಟನೆ ನಡೆದಾಗ ಚಂದ್ರಶೇಖರ್ ತೀವ್ರವಾಗಿ ಸಿಟ್ಟುಕೊಂಡು ನಿಯಂತ್ರಣ ಕಳೆದುಕೊಂಡಿದ್ದ.

ನೋಡು ನೋಡುತ್ತಿದ್ದಂತೆಯೇ ಚಂದ್ರಶೇಖರ್ ತನ್ನ ಬಳಿಯಿದ್ದ ಪಿಸ್ತೂಲ್ ತೆಗೆದು ರೂಪಾಳ ಮೇಲೆ ಗುಂಡು ಹಾರಿಸಿದ್ದಾನೆ.ಇದರಿಂದಾಗಿ ರೂಪಾ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ. ಕೃತ್ಯದ ಬಳಿಕ ಚಂದ್ರಶೇಖರ್ ಸ್ಥಳದಿಂದ ಪರಾರಿಯಾಗಿದ್ದು, ಸ್ವಲ್ಪ ಸಮಯದ ಬಳಿಕ ಪೊಲೀಸರಿಗೆ ಶರಣಾಗಿದ್ದಾನೆ.

ಇತ್ತೀಚಿನ ಸುದ್ದಿ