ಪ್ರೀತಿಯನ್ನು ಸಾಬೀತುಪಡಿಸಲು ತಂಪು ಪಾನೀಯದಲ್ಲಿ ವಿಷ ಸೇವಿಸಿದ ದಂಪತಿ | ಪತ್ನಿ ಸಾವು
ಪಂಜಾಬ್: ಪ್ರೀತಿಯನ್ನು ಸಾಬೀತುಪಡಿಸಲು ಪತಿ-ಪತ್ನಿ ವಿಷ ಸೇವಿಸಿದ್ದು, ಇದರ ಪರಿಣಾಮವಾಗಿ ಪತ್ನಿ ಸಾವನ್ನಪ್ಪಿ, ಪತಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ ಘಟನೆ ಪಂಜಾಬ್ ನ ಮೋಗಾ ಜಿಲ್ಲೆಯಿಂದ ವರದಿಯಾಗಿದೆ.
ಐದು ವರ್ಷಗಳ ಹಿಂದೆ ಮನ್ ಪ್ರೀತ್ ಕೌರ್ ಹಾಗೂ ಹರ್ಜಿಂದ್ರ ಸಿಂಗ್ ದಂಪತಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇವರಿಗೆ ಒಂದು ಹೆಣ್ಣು ಮಗು ಕೂಡ ಇದೆ. ಇವರಿಬ್ಬರು ಪರಸ್ಪರ ಪ್ರೀತಿಯನ್ನು ಸಾಬೀತು ಪಡಿಸಲು ತಂಪು ಪಾನೀಯದಲ್ಲಿ ಇಲಿ ವಿಷ ಬೆರೆಸಿ ಸೇವಿಸಿದ್ದಾರೆ ಎಂದು ಹೇಳಲಾಗಿದೆ.
ಈ ವಿಚಾರ ತಿಳಿಯುತ್ತಿದ್ದಂತೆಯೇ ತಕ್ಷಣವೇ ಇವರಿಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಪತ್ನಿ ಮನ್ ಪ್ರೀತ್ ಕೌರ್ ಸಾವನ್ನಪ್ಪಿದ್ದು, ಹರ್ಜಿಂದ್ರ ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪತಿ-ಪತ್ನಿಯರು ಇಲಿ ಔಷಧಿ ಸೇವನೆ ಮಾಡಿದ್ದು, ಪತ್ನಿ ಸಾವನ್ನಪ್ಪಿ, ಪತಿ ಸ್ಥಿತಿ ಗಂಭೀರವಾಗಿದೆ. ಈ ಪ್ರಕರಣದ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ ರಾಜ್ ಸಿಂಗ್ ತಿಳಿಸಿದ್ದಾರೆ. ಮನೆಯಲ್ಲಿಮೋಜಿಗಾಗಿ ಈ ಜೋಡಿ ತಂಪುಪಾನಿಯಾದಲ್ಲಿ ವಿಷ ಬೆರಸಿ ಸೇವಿಸಿದ್ದಾರೆ ಎಂದು ಅವರು ತಿಳಿಸಿದ್ದಾರೆ.