ಪ್ರೀತಿಸಿದವಳ ತಂದೆಯ ತಲೆ ಹೊಡೆದು ಹತ್ಯೆ ಮಾಡಿದ ಪಾಗಲ್ ಪ್ರೇಮಿ! - Mahanayaka
12:24 PM Wednesday 5 - February 2025

ಪ್ರೀತಿಸಿದವಳ ತಂದೆಯ ತಲೆ ಹೊಡೆದು ಹತ್ಯೆ ಮಾಡಿದ ಪಾಗಲ್ ಪ್ರೇಮಿ!

crime news
24/08/2021

ನೆಲಮಂಗಲ: ನನ್ನ ಮಗಳನ್ನು ಪ್ರೀತಿಸಬೇಡ ಎಂದು ತನ್ನೊಂದಿಗೆ ಗಲಾಟೆ ಮಾಡಿದ್ದ ಯುವತಿಯ ತಂದೆಯನ್ನು ಯುವಕನೋರ್ವ ಹೊಂಚು ಹಾಕಿ ಕುಳಿತು ಹತ್ಯೆ ಮಾಡಿ ಪರಾರಿಯಾಗಿರುವ ಘಟನೆ ನೆಲಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಬೆತ್ತನಗೆರೆಯಲ್ಲಿ ನಡೆದಿದೆ.

55 ವರ್ಷ ವಯಸ್ಸಿನ  ನಾಗಪ್ಪ ಹತ್ಯೆಗೀಡಾಗಿರುವವರಾಗಿದ್ದು, ನರೇಶ್ ಎಂಬಾಯ ಹತ್ಯೆ ಆರೋಪಿಯಾಗಿದ್ದು, ಈತ ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಟೀ ಅಂಗಡಿ ನಡೆಸುತ್ತಿದ್ದು, ಇದರ ಜೊತೆಗೆ  ಗೋದಾಮುವೊಂದರಲ್ಲಿ ಕೂಡ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.

ನರೇಶ್ ಹಾಗೂ ನಾಗಪ್ಪ ಕುವೆಂಪು ನಗರದಲ್ಲಿ ಎದುರುಬದುರು ನಿವಾಸಿಗಳಾಗಿದ್ದು, ನಾಗಪ್ಪನ ಮಗಳನ್ನು ನರೇಶ್ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ, ನಾಗಪ್ಪ, ನನ್ನ ಮಗಳನ್ನು ಬಿಟ್ಟು ಬಿಡು, ನೀನು ನಮ್ಮ ಕುಟುಂಬದ ಗೌರವಕ್ಕೆ ಸರಿಬರುವುದಿಲ್ಲ ಎಂದು ಹೇಳಿದ್ದ ಎನ್ನಲಾಗಿದೆ.

ಈ ವಿಚಾರಕ್ಕೆ ಸಂಬಂಧಿಸಿದಂತೆ ಇವರಿಬ್ಬರ ನಡುವೆ ರಾತ್ರಿ ಜಗಳ ನಡೆದಿತ್ತು ಎಂದು ಹೇಳಲಾಗಿದೆ. ಈ ವೇಳೆ ಇಬ್ಬರನ್ನು ಕೂಡ ಸ್ಥಳೀಯರು ಮನೆಗೆ ಕಳುಹಿಸಿದ್ದರು ಎನ್ನಲಾಗಿದೆ. ಇಂದು ಬೆಳಗ್ಗೆ ನಾಗಪ್ಪ ಹಾಗೂ ಅವರ ಮಗ ಬೆತ್ತನಗೆರೆಯ ವಾಯುವಿಹಾರ ಮಾಡುತ್ತಿದ್ದಾಗ ಹಿಂಬಾಲಿಸಿಕೊಂಡು ಬಂದ ನರೇಶ್ ರಾಡ್ ನಿಂದ ನಾಗಪ್ಪನ ತಲೆಗೆ ಹೊಡೆದ ಸ್ಥಳದಿಂದ ಪರಾರಿಯಾಗಿದ್ದಾನೆ ಎನ್ನಲಾಗಿದೆ.

ಮಾಹಿತಿ ತಿಳಿದ ನಗರ ಠಾಣೆ ವೃತ್ತ ನಿರೀಕ್ಷಕ ಎ.ವಿ.ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡು ನರೇಶ್ ಪತ್ತೆಗೆ ಬಲೆ ಬೀಸಿದ್ದಾರೆ.

ಇನ್ನಷ್ಟು ಸುದ್ದಿಗಳು…

 

ಹಾವಿನ ಬಾಲಕ್ಕೆ ರಾಕಿ ಕಟ್ಟಲು ಹೋದಾತನಿಗೆ ಸಾವನ್ನೇ ಉಡುಗೊರೆ ನೀಡಿದ ಹಾವು! | ವಿಡಿಯೋ ನೋಡಿ…

ಉಕ್ರೇನ್ ವಿಮಾನ ಹೈಜಾಕ್ ಆಗಿಲ್ಲ | ಇರಾನ್ ನೀಡಿದ ಸ್ಪಷ್ಟನೆ ಏನು ಗೊತ್ತಾ?

ಬಾರ್ ಮುಂದೆ ವೀರವನಿತೆಯರ ಪಡೆ ಕಂಡು ಬೆಚ್ಚಿಬಿದ್ದ ಕುಡುಕರು | ಮುಂದೆ ನಡೆದದ್ದೇನು ಗೊತ್ತಾ?

ಸೊಸೆಯನ್ನು ಕೆಂಡದ ಮೇಲೆ ನಡೆಸಿದ ಅತ್ತೆ! | ಅತ್ತೆಯ ಅಮಾನವೀಯ ಕೃತ್ಯಕ್ಕೆ ಸೊಸೆ ಹೇಳಿದ್ದೇನು ಗೊತ್ತೇ?

ತಾಲಿಬಾನ್ ನ 10ಕ್ಕೂ ಅಧಿಕ ಉಗ್ರರಿಗೆ ಚಟ್ಟಕಟ್ಟಿದ ಅಫ್ಘಾನ್ ನ ಪಂಜ್ ಶೇರ್ ಚಳುವಳಿಗಾರರು

ಕಾಂಗ್ರೆಸ್ ನ ಫ್ಯೂಸ್ ಕಿತ್ತಾಕ್ಬಿಟ್ಟಿದ್ದೀವಿ ಹೇಗೆ ಶಾಕ್ ನೀಡ್ತಾರೆ ನೋಡೋಣ: ಕುಮಾರಸ್ವಾಮಿ ಡೈಲಾಗ್ ವೈರಲ್

ಆಟೋ ಚಾಲಕನಿಗೆ ಪೊಲೀಸರ ಎದುರೇ ಚಪ್ಪಲಿಯಿಂದ ಹೊಡೆದ ಮಹಿಳೆ | ಆಟೋ ಚಾಲಕ ಮಾಡಿದ್ದೇನು ಗೊತ್ತಾ?

ಇತ್ತೀಚಿನ ಸುದ್ದಿ