ಪ್ರೀತಿಯ ನಾಟಕವಾಡಿ ಬಾಲಕಿಯ ಮೇಲೆ ಅತ್ಯಾಚಾರ | ನಾಲ್ವರು ಆರೋಪಿಗಳು ಅರೆಸ್ಟ್ - Mahanayaka
2:16 PM Wednesday 5 - February 2025

ಪ್ರೀತಿಯ ನಾಟಕವಾಡಿ ಬಾಲಕಿಯ ಮೇಲೆ ಅತ್ಯಾಚಾರ | ನಾಲ್ವರು ಆರೋಪಿಗಳು ಅರೆಸ್ಟ್

arrest
15/09/2021

ಕೊಟ್ಟಾಯಂ: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಕೇರಳದ ಕೊಟ್ಟಾಯಂನಲ್ಲಿ ನಡೆದಿದ್ದು,  ಪ್ರಕರಣಕ್ಕೆ ಸಂಬಂಧಿಸಿದಂತೆ  ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳ ಪೈಕಿ ಓರ್ವ 16 ವರ್ಷ ವಯಸ್ಸಿನ ಬಾಲಕನಾಗಿದ್ದು,  ಉಳಿದಂತೆ 25 ವರ್ಷ ವಯಸ್ಸಿನ ರಾಮಾಪುರಂ ಎಜಾಚೇರಿಯ ಅರ್ಜುನ್ ಬಾಬು,  29 ವರ್ಷ ವಯಸ್ಸಿನ ಪುನಲೂರಿನ ಮಹೇಶ್ ಮತ್ತು ಪಠಾಣಪುರದ 31 ವರ್ಷ ವಯಸ್ಸಿನ ಮ್ಯಾಥ್ಯೂ ಬಂಧಿತರು.

ಇನ್ ಸ್ಟಾಗ್ರಾಮ್ ಮೂಲಕ ಆರೋಪ ಅರ್ಜುನ್ ಗೆ  ಬಾಲಕಿಯ ಪರಿಚಯವಾಗಿದೆ. ಆ ಬಳಿಕ ಆತ ಆಕೆಯನ್ನು ಪ್ರೀತಿಸುವ ನಾಟಕವಾಡಿದ್ದು, ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾನೆ.  ಅತ್ಯಾಚಾರ ನಡೆಸಿದ ಬಳಿಕ ಈ ವಿಚಾರವನ್ನು ಆತನ ಸ್ನೇಹಿತರಿಗೂ ಹೇಳಿದ್ದಾನೆ. ಆ ಬಳಿಕ ಆತನ ಸ್ನೇಹಿತರು ಕೂಡ ಬಾಲಕಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಪೋಷಕರ ದೂರಿನನ್ವಯ ರಾಮಾಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಬಾಲಕಿಯ ಹೇಳಿಕೆ ಆಧರಿಸಿ ಆರೋಪಿಗಳನ್ನು ಬಂಧಿಸಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ಇನ್ನಷ್ಟು ಸುದ್ದಿಗಳು…

6 ವರ್ಷದ ಬಾಲಕಿಯ ಅತ್ಯಾಚಾರ, ಹತ್ಯೆ ಆರೋಪಿಯನ್ನು ಎನ್ ಕೌಂಟರ್ ಮಾಡುತ್ತೇವೆ | ತೆಲಂಗಾಣ ಸಚಿವ ಬಹಿರಂಗ ಹೇಳಿಕೆ

ಬಿಜೆಪಿ ಮತ್ತು ಆರೆಸ್ಸೆಸ್ ನವರು ನಕಲಿ ಹಿಂದೂಗಳು | ರಾಹುಲ್ ಗಾಂಧಿ ವಾಗ್ದಾಳಿ

ಟೂತ್ ಪೇಸ್ಟ್ ಎಂದು ಭಾವಿಸಿ, ಇಲಿ ವಿಷದಲ್ಲಿ ಹಲ್ಲುಜ್ಜಿದ ಯುವತಿ ಸಾವು!

ಬಿಗ್ ಬ್ರೇಕಿಂಗ್ ನ್ಯೂಸ್:  ಖ್ಯಾತ ನಟ ಸೋನುಸೂದ್ ಕಚೇರಿ ಮೇಲೆ ಐಟಿ ದಾಳಿ

ಕಲಾಪದ ವೇಳೆ ಕೊನೆಯ ಸೀಟಿನಲ್ಲಿ ಕುಳಿತು ಮೌನಕ್ಕೆ ಜಾರಿದ ಮಾಜಿ ಸಿಎಂ ಯಡಿಯೂರಪ್ಪ

ಮಂಗಳೂರು: ನಿಫಾ ವೈರಸ್ ಶಂಕೆ ಇದ್ದ ಯುವಕನ ಪರೀಕ್ಷೆ ವರದಿ ನೆಗೆಟಿವ್ | ಆರೋಗ್ಯಾಧಿಕಾರಿ

ವರದಕ್ಷಿಣೆ ತರಲಿಲ್ಲ ಎಂದು ಮಹಿಳೆಗೆ ವಿಷ ಉಣಿಸಿ ಕೊಂದ ಪಾಪಿಗಳು!

ಗ್ಯಾಸ್ ಸಿಲಿಂಡರ್ ತಲೆ ಮೇಲೆ ಹೊತ್ತುಕೊಂಡು ಓಡಾಡುತ್ತಿದ್ದ ಶೋಭಾ ಕರಂದ್ಲಾಜೆ ಇಗೆಲ್ಲಿದ್ದಾರಪ್ಪಾ? | ಸಿದ್ದರಾಮಯ್ಯ ಪ್ರಶ್ನೆ

ಇತ್ತೀಚಿನ ಸುದ್ದಿ