ಎರಡು ತಿಂಗಳ ಹಿಂದೆಯಷ್ಟೆ ಪ್ರೀತಿಸಿ ಮದುವೆಯಾಗಿದ್ದ ಯುವತಿಯ ಅನುಮಾನಾಸ್ಪದ ಸಾವು!
ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಯುವತಿಯೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹೊಸಕೋಟೆ ನಗರದ ಎಂವಿ ಬಡಾವಣೆಯ ಮನೆಯಲ್ಲಿ ನಡೆದಿದ್ದು, ಎರಡು ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದ ಯುವತಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ.
ಎರಡು ವರ್ಷಗಳ ಹಿಂದೆ ತುಮಕೂರು ಮೂಲದ 23 ವರ್ಷ ವಯಸ್ಸಿನ ಅಶ್ವಿನಿ ಗಾರ್ಮೆಂಟ್ಸ್ ವೊಂದರಲ್ಲಿ ಕೆಲಸ ಮಾಡುತ್ತಿದ್ದಳು. ಈ ಸಂದರ್ಭದಲ್ಲಿ ಆಟೋ ಡ್ರೈವರ್ ಸುರೇಶ್ ಎಂಬಾತನ ಪರಿಚಯವಾಗಿತ್ತು. ಈ ಪರಿಚಯ ಪ್ರೀತಿಗೆ ತಿರುಗಿದ್ದು, ಎರಡು ತಿಂಗಳ ಹಿಂದೆಯಷ್ಟೆ ಇವರಿಬ್ಬರು ಮದುವೆಯಾಗಿದ್ದು, ಬಾಡಿಗೆ ಮನೆಯೊಂದರಲ್ಲಿ ವಾಸಿಸುತ್ತಿದ್ದರು.
ಇದೀಗ ಬಾಡಿಗೆ ಮನೆಯಲ್ಲಿಯೇ ಅಶ್ವಿನಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಈ ವಿಚಾರ ತಿಳಿದ ಮನೆಯವರು, ಅಶ್ವಿನಿಯನ್ನು ಹತ್ಯೆ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. ಸೂಲಿಬೆಲೆ ಪೊಲೀಸ್ ಠಾಣೆಯಲ್ಲಿ ಸುರೇಶ್ ವಿರುದ್ಧ ದೂರು ದಾಖಲಿಸಲು ಹೋಗಿದ್ದು, ಅಲ್ಲಿನ ಪೊಲೀಸರು ಈ ಪ್ರಕರಣವನ್ನು ರಾಜಿ ಮಾಡಲು ಯತ್ನಿಸಿದ್ದರಿಂದ, ಹೊಸಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.