37 ಮಕ್ಕಳ ಪ್ರಾಣ ರಕ್ಷಿಸಿದ ಗರ್ಭಿಣಿ ಡ್ರೈವರ್
ಗರ್ಭಿಣಿ ಡ್ರೈವರ್ ತೋರಿದ ಸಮಯಪ್ರಜ್ಞೆಯಿಂದ ಶಾಲಾ ಬಸ್ ನಲ್ಲಿದ್ದ 37 ಮಕ್ಕಳು ಪ್ರಾಣಾಪಾಯದಿಂದ ಪಾರಾದ ಘಟನೆ ಅಮೆರಿಕದಲ್ಲಿ ನಡೆದಿದೆ.
ಇಮುನೆಕ್ ವಿಲಿಯಮ್ಸ್ ಎಂಬ ಮಹಿಳೆ ಮಿಲ್ವಾಕೀ ಅಕಾಡೆಮಿ ಆಫ್ ಸೈಯನ್ಸ್ ಶಾಲೆಯ ಬಸ್ಸಿನ ಚಾಲಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತಿದ್ದಾಗ ಬಸ್ಸಿನ ಇಂಜಿನ್ ನಲ್ಲಿ ಹೊಗೆ ಬರುತ್ತಿದ್ದುದನ್ನು ಗಮನಿಸಿ, ತಕ್ಷಣ ಬಸ್ಸನ್ನು ರಸ್ತೆ ಪಕ್ಕ ನಿಲ್ಲಿಸಿ ಬಸ್ಸಿನಲ್ಲಿದ್ದ ಮಕ್ಕಳನ್ನು ಕೆಳಗಿಳಿಸಿದ್ದಾಳೆ.
ಕೆಲವೇ ಕ್ಷಣಗಳಲ್ಲಿ ಬಸ್ಸು ಬೆಂಕಿಗೆ ಆಹುತಿಯಾಗಿದೆ. ಆದರೆ ಇಮುನೆಕ್ ತೋರಿದ ಸಾಹಸದಿಂದ ಹಲವು ಮಕ್ಕಳ ಜೀವ ಉಳಿದಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಮುನೆಕ್, ‘ಮತ್ತೊಂದು ಕಾರಿನಿಂದ ಬರುವ ಸಾಮಾನ್ಯ ಹೊಗೆ ಎಂದು ನಾನು ಭಾವಿಸಿದ್ದೆ.
ಯಾಕೆಂದರೆ ನಾನು ಯಾವಾಗಲೂ ಹೊಗೆ ಅಥವಾ ವಿಲಕ್ಷಣ ವಾಸನೆಯನ್ನು ನೋಡುತ್ತಿರುತ್ತೇನೆ. ಆದರೆ ನಂತರ ನಾನು ಮುಂದೆ ಮುಂದೆ ಹೋಗುತ್ತಿದ್ದಂತೆ ವಾಸನೆ ಮತ್ತು ಹೊಗೆ ದಪ್ಪವಾಗಲು ಪ್ರಾರಂಭಿಸಿತು’ ಎಂದು ಅನುಭವ ಹಂಚಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw