ತಡರಾತ್ರಿಯವರೆಗೆ ಪೊಲೀಸ್ ಠಾಣೆಯಲ್ಲಿ ಗರ್ಭಿಣಿಯಿಂದ ಪರದಾಟ: ಪೊಲೀಸರಿಂದ ಅಮಾನವೀಯತೆ

ಬೆಂಗಳೂರು: ಗರ್ಭಿಣಿ ಮಹಿಳೆಯೊಬ್ಬರನ್ನು ರಾತ್ರಿ 10 ಗಂಟೆಯವರೆಗೆ ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಇರಿಸಿಕೊಂಡಿರುವ ಗಂಭೀರ ಆರೋಪ ಕೇಳಿ ಬಂದಿದೆ.
ಮಹಿಳೆಯೊಬ್ಬರು ಕೆ.ಸಿ.ಜನರಲ್ ಆಸ್ಪತ್ರೆಗೆ ಇಂಜೆಕ್ಷನ್ ತೆಗೆದುಕೊಳ್ಳಲು ಬಂದಿದ್ದು, ಈ ವೇಳೆ ಅವರ ವಯಸ್ಸು 18 ವರ್ಷ 20 ದಿನ ಎಂದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಮಹಿಳೆ 18 ವರ್ಷಕ್ಕೂ ಮೊದಲೇ ಮದುವೆಯಾಗಿರುವುದು ಕಂಡು ಬಂದಿದೆ. ಹೀಗಾಗಿ ಶೇಷಾದ್ರಿಪುರಂ ಪೊಲೀಸರು ಪತಿ ಪತ್ನಿಯನ್ನು ಶೇಷಾದ್ರಿಪುರಂ ಠಾಣೆಗೆ ಕರೆತಂದಿದ್ದರು.
ನಿಯಮಗಳ ಪ್ರಕಾರ ಸಂಜೆ 6 ಗಂಟೆಯೊಳಗೆ ಮಹಿಳೆಯನ್ನ ಸಾಂತ್ವನ ಕೇಂದ್ರಕ್ಕೆ ಕಳುಹಿಸಿಕೊಡಬೇಕು. ಆದರೆ ರಾತ್ರಿ 10 ಗಂಟೆಯವರೆಗೂ ಗರ್ಭಿಣಿಯನ್ನು ಠಾಣೆಯಲ್ಲೇ ಇರಿಸಿಕೊಂಡು ಅಮಾನವೀಯತೆ ಮೆರೆದಿದ್ದಾರೆ ಎಂದು ಆರೋಪಿಸಲಾಗಿದೆ.
ಠಾಣೆಯ ಬಳಿ ಮಾಧ್ಯಮದವರು ಬಂದ ಬಳಿಕ ಮಹಿಳೆಯನ್ನು ಸಖಿ ಕೇಂದ್ರಕ್ಕೆ ಕಳುಹಿಸಿಕೊಡಲಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7