ಪ್ರೇಮ ಪ್ರಸ್ತಾಪ ತಿರಸ್ಕರಿಸಿದ್ದಕ್ಕಾಗಿ ಬಾಲಕಿಗೆ 14 ಬಾರಿ ಇರಿದ ಪಾಪಿ! - Mahanayaka

ಪ್ರೇಮ ಪ್ರಸ್ತಾಪ ತಿರಸ್ಕರಿಸಿದ್ದಕ್ಕಾಗಿ ಬಾಲಕಿಗೆ 14 ಬಾರಿ ಇರಿದ ಪಾಪಿ!

thirucchi
02/06/2022

ತಿರುಚ್ಚಿ: ಪ್ರೇಮ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕೆ  ಯುವಕನೋರ್ವ  16 ವರ್ಷದ ಯುವತಿಯನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.  ತಮಿಳುನಾಡಿನ ತಿರುಚ್ಚಿಯಲ್ಲಿ ಈ ಘಟನೆ ನಡೆದಿದೆ

ಪ್ರಥಮ ಪಿಯುಸಿ  ಓದುತ್ತಿರುವ ಬಾಲಕಿ ಪರೀಕ್ಷೆ ಮುಗಿಸಿ ಸಂಬಂಧಿಕರ ಮನೆಗೆ ತೆರಳುತ್ತಿದ್ದಳು.  ಇದೇ ವೇಳೆ 22ರ ಹರೆಯದ ಯುವಕ ಕೇಶವನ್ ಎಂಬಾತ ತನ್ನ ಪ್ರೀತಿಯ ಬಗ್ಗೆ  ಆಕೆಯ ಬಳಿ ಪ್ರಸ್ತಾಪಿಸಿದ್ದಾನೆ. ಇದಕ್ಕೆ  ಹುಡುಗಿ ನಿರಾಕರಿಸಿದ್ದಾಳೆ. ಈ ವೇಳೆ ಯುವತಿಗೆ 14 ಬಾರಿ ಚಾಕುವಿನಿಂದ ಇರಿದು ಕೇಶವನ್  ಸ್ಥಳದಿಂದ ಪರಾರಿಯಾಗಿದ್ದ. ಕೆಲವು ಗಂಟೆಗಳ ಬಳಿಕ ರೈಲ್ವೆ ಹಳಿಗಳ ಮೇಲೆ ಕೇಶವನ್ ನ ಮೃತದೇಹ ಪತ್ತೆಯಾಗಿದೆ.

ವರದಿಗಳ ಪ್ರಕಾರ, ಬಹಳ ದಿನಗಳಿಂದ ಆರೋಪಿಯು ಬಾಲಕಿಗೆ ಪ್ರೇಮ ಪ್ರಸ್ತಾಪ ಮಾಡಿ ಕಿರುಕುಳ ನೀಡುತ್ತಿದ್ದ.  ಕಳೆದ ವರ್ಷ ಬಾಲಕಿಯನ್ನು ಅಪಹರಿಸಿದ ಆರೋಪದಡಿ ಜೈಲು ಪಾಲಾಗಿದ್ದ ಈತ ಇತ್ತೀಚೆಗೆಷ್ಟೇ ಜೈಲಿನಿಂದ ಬಿಡುಗಡೆಯಾಗಿದ್ದ.  ಬಾಲಕಿಯನ್ನು ಇರಿದನಂತರ ಕತ್ತಿ ಸ್ಥಳದಲ್ಲಿ ಇಟ್ಟು ಆರೋಪಿ ಪರಾರಿಯಾಗಿದ್ದ.

ಬಾಲಕಿ ನೆಲದ ಮೇಲೆ ಬಿದ್ದಿದ್ದು, ರಕ್ತಸ್ರಾವವಾಗುತ್ತಿದ್ದುದನ್ನು ಗಮನಿಸಿದ ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಿದಾದರು  ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸಚಿವ ನಾಗೇಶ್ ಮನೆಗೆ ಮುತ್ತಿಗೆ ಹಾಕಿ ಖಾಕಿ ಚಡ್ಡಿಗೆ ಬೆಂಕಿ ಹಚ್ಚಿ ಆಕ್ರೋಶ

ಲಾರಿಯಲ್ಲಿ ಹಿಂಸಾತ್ಮಕವಾಗಿ ಜಾನುವಾರುಗಳ ಸಾಗಾಟ:  ಇಬ್ಬರು ಪೊಲೀಸ್ ವಶಕ್ಕೆ

ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆ ಇಳಿಕೆ: ಇಂದಿನಿಂದಲೇ ಅನ್ವಯ

3 ವರ್ಷದ ಬಾಲಕಿ ಮೇಲೆ 12 ವರ್ಷದ ಬಾಲಕನಿಂದ ಅತ್ಯಾಚಾರ: ಬಾಲಕನ ಕೃತ್ಯ ಸಮರ್ಥಿಸಿದ ತಂದೆ

ಪತಿ ಜೊತೆ ಜಗಳ: ತನ್ನ ಆರು ಮಕ್ಕಳನ್ನು ಬಾವಿಗೆಸೆದ ಪಾಪಿ ತಾಯಿ!

ಇತ್ತೀಚಿನ ಸುದ್ದಿ