ಕಾಡಿನಲ್ಲಿ ಏಕಾಂತದಲ್ಲಿದ್ದ ಪ್ರೇಮಿಗಳ ಮೇಲೆ ಹುಲಿ ದಾಳಿ: ಯುವಕ ಸಾವು
![maharashtra](https://www.mahanayaka.in/wp-content/uploads/2022/05/maharashtra.jpg)
ಮಹಾರಾಷ್ಟ್ರ: ಪ್ರೇಮಿಗಳಿಬ್ಬರ ಮೇಲೆ ಹುಲಿಯೊಂದು ದಾಳಿ ನಡೆಸಿದ ಪರಿಣಾಮ ಯುವಕ ಬಲಿಯಾಗಿ ಯುವತಿ ಗಂಭೀರವಾಗಿ ಗಾಯಗೊಂಡ ಘಟನೆ ಮಹಾರಾಷ್ಟ್ರ ನಾಗ್ಪುರದ ವಾತ್ಸಾ ಅರಣ್ಯದಲ್ಲಿ ನಡೆದಿದೆ.
ವರದಿಗಳ ಪ್ರಕಾರ, ಪ್ರೇಮಿಗಳಿಬ್ಬರು ಮಹಾರಾಷ್ಟ್ರದ ನಾಗುರದ ವಾತ್ಸಾ ಅರಣ್ಯ ವ್ಯಾಪ್ತಿ ಕಾಡು ಪ್ರದೇಶದಲ್ಲಿ ಏಕಾಂತದಲ್ಲಿದ್ದು, ಈ ವೇಳೆ ಹುಲಿಯೊಂದು ದಾಳಿ ನಡೆಸಿದೆ. ಈ ವೇಳೆ ಯುವಕನನ್ನು ಹುಲಿ ಕೊಂದು ಹಾಕಿದ್ದು, ಯುವತಿ ಸ್ಥಳದಿಂದ ಪರಾರಿಯಾಗಿ ಜೀವ ಉಳಿಸಿಕೊಂಡಿದ್ದಾಳೆ. ಆದರೆ ಆಕೆಗೂ ಗಂಭೀರವಾದ ಗಾಯಗಳಾಗಿವೆ ಎಂದು ತಿಳಿದು ಬಂದಿದೆ.
ಕೋರೆಗಾಂವ್ ನಿವಾಸಿ ಅಜಿತ್ ಸೋಮಶೇಖರ್ ಎಂಬಾತ ಹುಲಿಗೆ ಬಲಿಯಾದ ಯುವಕನಾಗಿದ್ದು, ಯುವಕನನ್ನು ಹುಲಿ ಕೊಂದಿರುವುದೇ ಅಲ್ಲದೇ ದೇಹವನ್ನೂ ತಿಂದಿದೆ ಎಂದು ಹೇಳಲಾಗಿದೆ.
ಇನ್ನೂ ಯುವಕ, ಯುವತಿ ತೆರಳಿದ್ದ ಕಾಡು ಅತ್ಯಂತ ಅಪಾಯಕಾರಿ ಕಾಡಾಗಿದ್ದು, ಈ ಪ್ರದೇಶದಲ್ಲಿ ಈ ಹಿಂದೆಯೂ ಕಾಡು ಪ್ರಾಣಿಗಳು ಹಲವಾರು ಬಾರಿ ದಾಳಿ ನಡೆಸಿದ್ದವು ಎನ್ನಲಾಗಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ತೀವ್ರ ಸ್ವರೂಪ ಪಡೆದುಕೊಂಡ ಪ್ರಜೆಗಳ ಹೋರಾಟ: ಶ್ರೀಲಂಕಾದಲ್ಲಿ ಮತ್ತೆ ತುರ್ತು ಪರಿಸ್ಥಿತಿ
ಮತ್ತೊಮ್ಮೆ ಗ್ರಾಹಕನ ಕೈ ಸುಟ್ಟ ಎಲ್ ಪಿಜಿ ಸಿಲಿಂಡರ್ ಬೆಲೆ: 50ರೂ. ಏರಿಕೆ
ಖ್ಯಾತ ಹಾಸ್ಯ ನಟ ಮೋಹನ್ ಜುನೇಜ ಇನ್ನಿಲ್ಲ
ಬಾಲಕಿಯ ಆತ್ಮಹತ್ಯೆಗೆ ದುಷ್ಪ್ರೇರಣೆ: ತಲೆಮರೆಸಿಕೊಂಡಿದ್ದ ಯುವಕನ ಬಂಧನ
ಮದ್ಯ ಪ್ರಿಯರಿಗೆ ಶಾಕ್: ಮೇ 19ರವರೆಗೆ ಮದ್ಯ ಮಾರಾಟಗಾರರ ಮುಷ್ಕರ