ಪ್ರೇಮಿಗೆ ಹಿಗ್ಗಾಮುಗ್ಗಾ ಥಳಿಸಿದರೂ, ಆತನ ಪ್ರೀತಿಗೆ ಕರಗಿ ಮಗಳ ಕೊಟ್ಟು ಮದುವೆ ಮಾಡಿದರು! - Mahanayaka
12:12 PM Tuesday 4 - February 2025

ಪ್ರೇಮಿಗೆ ಹಿಗ್ಗಾಮುಗ್ಗಾ ಥಳಿಸಿದರೂ, ಆತನ ಪ್ರೀತಿಗೆ ಕರಗಿ ಮಗಳ ಕೊಟ್ಟು ಮದುವೆ ಮಾಡಿದರು!

gaya
14/07/2021

ಗಯಾ: ತಾನು ಪ್ರೀತಿಸುತ್ತಿದ್ದ ಯುವತಿಗೆ ಬೇರೆ ಮದುವೆ ಮಾಡುತ್ತಿರುವ ವಿಚಾರ ತಿಳಿದು, ಯುವಕ ನೇರವಾಗಿ ಆಕೆಯ ಭೇಟಿಗೆ ತೆರಳಿದ್ದು, ಅಲ್ಲಿ ಗ್ರಾಮಸ್ಥರು, ಕುಟುಂಬಸ್ಥರು ಸೇರಿ ಆತನಿಗೆ ಥಳಿಸಿದ್ದಾರೆ. ಆದರೆ ಕೊನೆಗೆ ಆತನ ಪ್ರೀತಿಯನ್ನು ಕಂಡು ಆತನಿಗೆ ಯುವತಿಯ ಜೊತೆಗೆ ವಿವಾಹ ನಡೆಸಿದ್ದಾರೆ.

ಇದು ಯಾವುದೋ ಸಿನಿಮಾದ ಕಥೆಯಲ್ಲ. ಹಳೆಯ ಕಾಲದ ಬಹುತೇಕ ಸಿನಿಮಾಗಳಲ್ಲಿ ಇಂತಹ ಕಥೆಗಳು ಸರ್ವೇ ಸಾಮಾನ್ಯವಾಗಿತ್ತು. ಆದರೆ,  ಬಿಹಾರದ ಗಯಾ ಜಿಲ್ಲೆಯ ಬೆಳಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ಖನೇಟಾ ಗ್ರಾಮದಲ್ಲಿ ಇಂತಹದ್ದೇ ಒಂದು ಸಿನಿಮೀಯ ಶೈಲಿಯ ಘಟನೆ ನಡೆದಿದೆ.

ಬೆಲ್ಹಾರಿ ಗ್ರಾಮದ ನಿವಾಸಿ 24 ವರ್ಷ ವಯಸ್ಸಿನ  ಮಂಟು ಕುಮಾರ್  ಹಾಗೂ 20 ವರ್ಷ ವಯಸ್ಸಿನ ಪೂಜಾ ಗುಪ್ತಾಳಿಗೆ ಫೇಸ್ ಬುಕ್ ಮೂಲಕ ಪರಿಚಯವಾಗಿತ್ತು.  ಈ ಪರಿಚಯ ಪ್ರೀತಿಗೆ ತಿರುಗಿದ್ದು, ಕಳೆದ 4 ವರ್ಷಗಳಿಂದಲೂ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.

ಈ ನಡುವೆ  ಪೂಜಾಳ ತಂದೆ ತನ್ನ ಮಗಳಿಗೆ ಬೇರೆ ಕಡೆ ಸಂಬಂಧ ಹುಡುಕಿ ಮದುವೆ ನಡೆಸಲು ಮುಂದಾಗಿದ್ದಾರೆ.  ಈ ವಿಚಾರ ತಿಳಿಯುತ್ತಿದ್ದಂತೆಯೇ ಮಂಟು ಕುಮಾರ್ ತಕ್ಷಣವೇ ಯುವತಿ ಊರಿಗೆ ಬಂದಿದ್ದು, ಆಕೆಯನ್ನು ಭೇಟಿಯಾಗಲು ಮುಂದಾಗಿದ್ದಾನೆ. ಈ ವೇಳೆ ಹಳ್ಳಿಯ ಜನರು ಹಾಗೂ ಯುವತಿಯ ಕುಟುಂಬಸ್ಥರು ಮಂಟು ಕುಮಾರ್ ಗೆ ಥಳಿಸಿದ್ದಾರೆ. ಆದರೆ ಆ ಬಳಿಕೆ ಯುವತಿ, ಆತನನ್ನು ಪ್ರೀತಿಸುವ ವಿಚಾರ ತಿಳಿದು ಇಬ್ಬರಿಗೂ ಮದುವೆ ಮಾಡಿಸಿದ್ದಾರೆ.

ಯುವತಿಯ ಮನೆಯವರಿಗೆ ಇವರಿಬ್ಬರು ಪ್ರೀತಿಸುತ್ತಿರುವುದು ತಿಳಿದಿರಲಿಲ್ಲ. ಹೀಗಾಗಿ ಯುವಕನಿಗೆ ಥಳಿಸಿದ್ದಾರೆ ಎಂದು ಯುವಕ ಹೇಳಿದ್ದಾನೆ. ಇನ್ನೊಂದು ವಿಶೇಷ ಏನೆಂದರೆ, ಇವರಿಬ್ಬರು ಕೂಡ ಬೇರೆ ಬೇರೆ ಜಾತಿಗೆ ಸೇರಿದವರಾದರೂ, ಕುಟುಂಬಸ್ಥರು  ಇವರಿಬ್ಬರಿಗೆ ಮದುವೆ ಮಾಡಿಸಿದ್ದಾರೆ.

ಇನ್ನಷ್ಟು ಸುದ್ದಿಗಳು:

ಪ್ರೀತಿಯನ್ನು ಸಾಬೀತುಪಡಿಸಲು ತಂಪು ಪಾನೀಯದಲ್ಲಿ ವಿಷ ಸೇವಿಸಿದ ದಂಪತಿ | ಪತ್ನಿ ಸಾವು

ಪ್ರೀತಿಸಿ ವಿವಾಹವಾಗಿದ್ದ ದಂಪತಿ ಕೊರೊನಾಕ್ಕೆ ಬಲಿ | ಸಾವಿನಲ್ಲೂ ಒಂದಾದ ಪತಿ-ಪತ್ನಿ

ಎರಡು ತಿಂಗಳ ಹಿಂದೆಯಷ್ಟೆ ಪ್ರೀತಿಸಿ ಮದುವೆಯಾಗಿದ್ದ ಯುವತಿಯ ಅನುಮಾನಾಸ್ಪದ ಸಾವು!

ಒಂದೇ ಯುವತಿಯನ್ನು ಪ್ರೀತಿಸಿದ ಸಹೋದರರು | ವಿಷಯ ತಿಳಿದಾಗ  ನೊಂದ ಸಹೋದರರಿಂದ ಆತ್ಮಹತ್ಯೆ

ಪ್ರೀತಿಸಿದಾಕೆ ಕರೆ ಸ್ವೀಕರಿಸಲಿಲ್ಲ ಎಂದು ಯುವಕನಿಂದ ದುಡುಕಿನ ನಿರ್ಧಾರ

ಇತ್ತೀಚಿನ ಸುದ್ದಿ